ಚಿಕ್ಕಬಳ್ಳಾಪುರ: ಪ್ರಸಿದ್ದ 112 ಅಡಿಗಳ ಆದಿಯೋಗಿ ಪ್ರತಿಮೆ (Chikkaballapura Adiyogi Statue) ನೋಡಲು ಚಿಕ್ಕಬಳ್ಳಾಪುರಕ್ಕೆ ಬಂದ ಬೆಂಗಳೂರಿನ ಯುವಕನೋರ್ವ ದಾರಿ ಮಧ್ಯೆ ಕಲ್ಲು ಕ್ವಾರಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಯುವಕಲ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಘಟನೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಕೌರನಹಳ್ಳಿ ಬಳಿ ನಡೆದಿದೆ. ಯುವಕನಿಗೆ ಈಜು ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಮನೋಜ್ ಕುಮಾರ್ ಎಂಬ ಯುವಕ ಸ್ನೇಹಿತರ ಜೊತೆ ನೀರಿಗೆ ಇಳಿದಿದ್ದಾನೆ. ಆದರೆ ಮನೋಜ್ ಮಾತ್ರ ವಾಪಸ್ ಮೇಲೆ ಬರಲಿಲ್ಲ. ಜೊತೆಗಿದ್ದ ಸ್ನೇಹಿತರು ಪ್ರಯತ್ನ ಮಾಡಿದರೂ ಮನೋನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ, ಕಲ್ಲು ಕ್ವಾರಿ ನೀರಿನ ಹೊಂಡಲ್ಲಿ ಮುಳುಗಿದ್ದ ಮನೋಜ್ ಶವವನ್ನು ಮೇಲೆ ಎತ್ತಿದ್ದಾರೆ. “ಇಶಾ ಫೌಂಡೇಶನ್ನ ಆದಿಯೋಗಿ ಪ್ರತಿಮೆ ನೋಡಿ ವಾಪಸ್ ಆಗುತ್ತಿದ್ದ ಯುವಕನೊಬ್ಬ ಕಲ್ಲು ಕ್ವಾರಿ ಹೊಂಡದಲ್ಲಿನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿದೆ. ಕೂಡಲೇ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದೇವೆ. ಮೃತ ಯುವಕ 10ನೇ ತರಗತಿಯವನಾಗಿದ್ದಾನೆ” ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮಲಗಿದ್ದ ಪತ್ನಿ ಮಕ್ಕಳಿಗೆ ಬೆಂಕಿ ಇಟ್ಟು ಕೊಂದು, ತಾನು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಆದಿಯೋಗಿ ನೋಡಿ ವಾಪಸ್ ಆಗುತ್ತಿದ್ದ ಮೂರ್ನಾಲ್ಕು ಯುವಕರು ನೀರನ್ನು ನೋಡಿ ಮೋಜು ಮಸ್ತು ಮಾಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಕಾಲು ಜಾರಿ ಮನೋಜ್ ನೀರಿಗೆ ಬಿದ್ದಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಮನೋಜ್ನನ್ನು ಕಾಪಾಡಲು ಓರ್ವನನ್ನು ಕರೆತರುವಷ್ಟರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸುಮಾರು 25 ಅಡಿಯಷ್ಟು ಆಳವಿದ್ದು, ಕಲ್ಲು ಪಾಚಿಯಲ್ಲ ಇದ್ದಿದ್ದರಿಂದ ಕಾರ್ಯಾಚರಣೆ ಜಟಿಲವಾಗಿತ್ತು. ಅದಾಗ್ಯೂ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮೃತ ಯುವಕ ಬೆಂಗಳೂರಿನ ರಾಜಾಜಿನಗರದ ನಿವಾಸಿಯಾಗಿದ್ದು, ಅತನ ತಂದೆ ಟೈಲರ್ ಕೆಲಸ ಮಾಡುತ್ತಿದ್ದಾರೆ ಎಂದು ಬಸವರಾಜ್ ಹೇಳಿದ್ದಾರೆ.
112 ಅಡಿಗಳ ಆದಿಯೋಗಿ ನಂಡಲು ಬಂದ ಸ್ನೇಹಿತರ ತಂಡ, ದಾರಿ ಮದ್ಯೆ ವಾಪಸ್ ಬರುವಾಗ ನೀರು ಕಂಡು ಇಜಾಡಳು ನೀರಿಗಿಳಿದು ನೀರು ಪಾಲು ಆಗಿರುವುದು ದುರ್ದೈವವೇ ಸರಿ. ಮತ್ತೊಂದೆಡೆ ಹೆದ್ದಾರಿಗೆ ಕ್ವಾರಿಯ ನೀರಿನ ಕುಂಟೆ ಇದ್ದರೂ ಹೆದ್ದಾರಿ ಪ್ರಾಧಿಕಾರ ಸೂಕ್ತ ಬಂದೋಬಸ್ತ್ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ. ಕೂಡಲೇ ಎಚ್ಚೆತ್ತು ಕಲ್ಲು ಕ್ವಾರಿಯ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕಲ್ಪಿಸಿ ಅನಾಹುತಗಳನ್ನು ತಪ್ಪಿಸಬೇಕಾಗಿದೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:28 pm, Thu, 16 March 23