ಚಿಕ್ಕಬಳ್ಳಾಪುರ: ಅತ್ತಿಗೆಯನ್ನು ಗುರಾಯಿಸಿದ್ದನ್ನು ಪ್ರಶ್ನಿಸಿ ಬುದ್ಧಿವಾದ ಹೇಳುವಂತೆ ತಾಯಿಗೆ ಸೂಚಿಸಿದ್ದಕ್ಕೆ ಯುವಕನೊಬ್ಬ ಯುವತಿ ಮೇಲೆ ಹಲ್ಲೆ (Assault) ನಡೆಸಿದ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಚಿಂತಾಮಣಿಯ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಗುರಾಯಿಸಿದ ಯುವಕ ಯುವರಾಜ್ ವಿರುದ್ಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಜಾತ ಎಂಬ ಮಹಿಳೆಯನ್ನು ಯುವರಾಜ್ ಗುರಾಯಿಸುತ್ತಿದ್ದ. ಇದನ್ನು ಪ್ರಶ್ನಿಸಿದ ಯುವತಿ ಸುಧಾ, ನಿಮ್ಮ ಮಗನಿಗೆ ಬುದ್ಧಿವಾದ ಹೇಳುವಂತೆ ಯುವರಾಜ್ ತಾಯಿಗೆ ಸೂಚಿಸಿದ್ದಾಳೆ. ಇದರಿಂದ ಕೋಪಗೊಂಡ ಯುವರಾಜ್, ಸುಧಾಳಿಗೆ ಕಲ್ಲಿನಿಂದ ಹೊಡೆದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಸುಧಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯುವತಿ ನೀಡಿದ ದೂರಿನ ಅನ್ವಯ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Lovers Murder: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ
ಇತ್ತೀಚೆಗಷ್ಟೇ, ತನ್ನ ತಾಯಿಯನ್ನು ನೋಡಿದ ಎಂಬ ಕಾರಣಕ್ಕೆ ಚಿಕ್ಕಮಗಳೂರಿನ ಟೀಪು ನಗರದ ರಿಯಾನ್, ಫಾಜಿಲ್, ಮುಜುಬ್ ಎಂಬವರು ಮುಜೀಬ್ ಎಂಬ ಯುವಕನ ಮೇಲೆ ಮಚ್ಚಿನಿಂದ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು. ಆದರೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸದೇ ಹಲ್ಲೆ ನಡೆಸಿದ ಆರೋಪಿಗಳೊಂದಿಗೆ ಸಂಧಾನ ನಡೆಸುವಂತೆ ಒತ್ತಾಯಿಸಿದ ಆರೋಪ ಪೊಲೀಸರು ವಿರುದ್ಧ ಕೇಳಿಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Fri, 9 June 23