Sign In

By signing in or creating an account, you agree with Associated Broadcasting Company's Terms & Conditions and Privacy Policy.

Lovers Murder: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ

ನಗರದಲ್ಲಿ ಸಾಲು ಸಾಲು ಲಿವಿಂಗ್ ಡು ಗೆದರ್ ಆಫ್ಟರ್ ಮರ್ಡರ್ ಮತ್ತು ಪ್ರೀತಿಸಿದ ನಂತರದ ಕೊಲೆಗಳ ಸಂಖ್ಯೆ ಹೆಚ್ಚಿದೆ. ಕಳೆದ 8 ತಿಂಗಳಲ್ಲಿ 7 ಲಿವಿಂಗ್ ಕೊಲೆ ಕೇಸ್​ಗಳು ಬೆಂಗಳೂರಿನಲ್ಲಿ ದಾಖಲಾಗಿವೆ.

Lovers Murder: ಬೆಂಗಳೂರಿನಲ್ಲಿ ಹೆಚ್ಚುತ್ತಿವೆ ಪ್ರೇಮಿಗಳ ಕೊಲೆ: 8 ತಿಂಗಳಲ್ಲಿ 7 ಭಯಾನಕ ಹತ್ಯೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Jun 09, 2023 | 11:47 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರೀತಿ(Love) ಮಾಡಿ ಕೊಲೆ(Murder) ಮಾಡಲಾಗುತ್ತಿರುವ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚಿನ್ನ, ಮುದ್ದು. ನೀನು ನನ್ನ ಪ್ರಾಣ, ನಿನ್ನೊಂದಿಗೆ ಮಾತನಾಡದೆ ಒಂದು ದಿನ ಕಳೆಯೋದು ಕೂಡ ಕಷ್ಟ ಎಂದು ಪೂಸಿ ಹೊಡೆಯುತ್ತಿದ್ದವರೇ ಈಗ ಹಂತಕರಾಗುತ್ತಿದ್ದಾರೆ. ಪ್ರೀತಿ, ಪ್ರೇಮ ಎಂದು ಕೈ ಕೈ ಹಿಡಿದು ನಡೆಯುತ್ತಿದ್ದ ಪ್ರೇಮಿಗಳಲ್ಲಿ ಚಿಕ್ಕ ಪುಟ್ಟ ವಿಚಾರಕ್ಕೆ, ಬಗೆ ಹರಿಸಿಕೊಳ್ಳಬಹುದಾದಂತಹ ವಿಚಾರಗಳಿಗೆ ಜಗಳವಾಗಿ ಅದು ಕೊಲೆಯ ಹಂತಕ್ಕೆ ಹೋಗುತ್ತಿದೆ. ಮುಂಬೈ, ದೆಹಲಿಗಳಲ್ಲಿ ನಡೆಯುತ್ತಿದ್ದ ರೀತಿಯಲ್ಲಿ ಬೆಂಗಳೂರಿನಲ್ಲೂ ಈಗ ಕೊಲೆಗಳು ನಡೆಯುತ್ತಿವೆ. ಇತ್ತೀಚೆಗೆ ಪ್ರೇಮಿಗಳ ಕೊಲೆ ಕೇಸ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಆತಂಕಕ್ಕೆ ನೂಕಿದೆ.

ನಗರದಲ್ಲಿ ಸಾಲು ಸಾಲು ಲಿವಿಂಗ್ ಡು ಗೆದರ್ ಆಫ್ಟರ್ ಮರ್ಡರ್ ಮತ್ತು ಪ್ರೀತಿಸಿದ ನಂತರದ ಕೊಲೆಗಳ ಸಂಖ್ಯೆ ಹೆಚ್ಚಿದೆ. ಕಳೆದ 8 ತಿಂಗಳಲ್ಲಿ 7 ಲಿವಿಂಗ್ ಕೊಲೆ ಕೇಸ್​ಗಳು ಬೆಂಗಳೂರಿನಲ್ಲಿ ದಾಖಲಾಗಿವೆ.

ಪ್ರಕರಣ-1 (ಅಶೋಕನಗರ ಠಾಣಾ ವ್ಯಾಪ್ತಿ)

ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಜಗಳ ಶುರುವಾಗಿ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಪ್ರಿಯತಮ ಕೊಲೆ ಮಾಡಿದ್ದ. ಕೌಸರ್ ಎಂಬ ಯುವತಿಯನ್ನ ಆರೋಪಿ ನದೀಮ್ ಪಾಷ ಕೊಲೆ ಮಾಡಿದ್ದ. ಈ ಜೋಡಿ ನಾಲ್ಕು ವರ್ಷಗಳಿಂದ ಲಿವಿಂಗ್ ಡು ಗೆದರ್​ನಲ್ಲಿದ್ದರು. ಚಿನ್ನದ ಚೈನ್ ಬದಲಿಗೆ ಬೆಳ್ಳಿ ಚೈನ್ ತಂದುಕೊಟ್ಟಿದ್ದಕ್ಕೆ ಕೌಸರ್ ಜಗಳ ಶುರು ಮಾಡಿದ್ದಳು. ಇದು ವಿತರೀತಕ್ಕೆ ಹೋಗಿ ಯುವಕ ಕೊಲೆ ಮಾಡಿದ್ದ. ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಪ್ರಕರಣ-2 (ಅಮೃತಹಳ್ಳಿ ಠಾಣಾ ವ್ಯಾಪ್ತಿ)

ಲಿವಿಂಗ್ ಟು ಗೆದರ್​ನಲ್ಲಿದ್ದ ಯುವತಿ ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ ಹಿನ್ನೆಲೆ ಪ್ರಿಯತಮೆ ಜೊತೆ ಸ್ನೇಹದಿಂದಿದ್ದ ವ್ಯಕ್ತಿಯನ್ನು ಪ್ರಿಯತಮ ಕೊಂದು ಹಾಕಿದ್ದ. ಸುಲೇಮಾನ್ ಎಂಬಾತನನ್ನ ವಿಕ್ಟರ್ ಎಂಬ ಆರೋಪಿ ಕೊಲೆ ಮಾಡಿದ್ದ. ಆರೋಪಿ ಯುವತಿಯೊಬ್ಬಳ ಜೊತೆ ಕೆಲ ವರ್ಷಗಳಿಂದ ಲಿವಿಂಗ್​ನಲ್ಲಿದ್ದ. ಆದ್ರೆ ಸುಲೇಮಾನ್ ಜೊತೆ ವಿಕ್ಟರ್ ಪ್ರಿಯತಮೆ ಸಲುಗೆಯಿಂದ ಇದ್ದಳು. ಈ ವಿಚಾರ ತಿಳಿದು ಸುಲೇಮಾನ್ ಕೊಲೆ‌ ಮಾಡಿದ್ದ. ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಹೆದ್ದಾರಿಯಲ್ಲಿ ವಸೂಲಿಗೆ ನಿಂತ ಪೊಲೀಸರು ಜನರಿಂದ ತರಾಟೆಗೊಳಗಾದ ಬಳಿಕ ಇಲಾಖೆಯಿಂದ ಅಮಾನತು ಆದೇಶ!

ಪ್ರಕರಣ-3 (ಜ್ಞಾನ ಭಾರತಿ ಠಾಣಾ ವ್ಯಾಪ್ತಿ)

ಲಿವಿಂಗ್ ಟು ಗೆದರ್​ನಲ್ಲಿದ್ದ ಹಳೇ ಪ್ರಿಯತಮ ಮಹಿಳೆಗೆ ಕರೆ ಮಾಡಿ ಕೊಲೆಯಾಗಿದ್ದ. ಅರುಣ್ ಕುಮಾರ್ ಮತ್ತು ಸಹಚರರಿಂದ ಶ್ರೀಕಾಂತ್ ಎಂಬಾತನ ಕೊಲೆಯಾಗಿತ್ತು. ಈ ಮುಂಚೆ ಶ್ರೀಕಾಂತ್ ಜೊತೆ ಲಿವಿಂಗ್ ನಲ್ಲಿದ್ದ ಮಹಿಳೆ ಆತನ ಜೊತೆ ಜಗಳವಾಡಿ ಆರೋಪಿ ಅರುಣ್ ಜೊತೆ ಲಿವಿಂಗ್ ಶುರು ಮಾಡಿದ್ಳು. ಈ ವೇಳೆ ಹಳೇ ಪ್ರೇಮಿ ಶ್ರೀಕಾಂತ್ ಮಹಿಳೆಗೆ ಪದೇ ಪದೇ ಕರೆ ಮಾಡಿದ್ದ. ಈ ವಿಚಾರ ಗೊತ್ತಾಗಿ ಶ್ರೀಕಾಂತ್ ನನ್ನ ಅರುಣ್ ಕೊಲೆ ಮಾಡಿಸಿದ್ದ. ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ರು.

ಪ್ರಕರಣ-4 (ಪರಪ್ಪನ ಅಗ್ರಗಾರ ಠಾಣಾ ವ್ಯಾಪ್ತಿ)

ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮೆ ಸುನಿತಾ ಎಂಬಾಕೆಯನ್ನ ಕತ್ತು ಹಿಸುಕಿ ಆರೋಪಿ ಪ್ರಶಾಂತ್ ಕೊಲೆ ಮಾಡಿದ್ದ. ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಕೆಲ ವರ್ಷಗಳಿಂದ ಲಿವಿಂಗ್ ನಲ್ಲಿದ್ದ ಸುನಿತಾ ಮತ್ತು ಪ್ರಶಾಂತ್ ಇಷ್ಟು ದಿನ ಹೀಗೆ ಬದುಕಿದ್ದು ಸಾಕು ಬೇಗ ಮದುವೆಯಾಗು ಎಂದು ಸುನೀತಾ ಒತ್ತಾಯಿಸಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಆರೋಪಿ ತನ್ನ ಪ್ರಿಯತಮೆಯೆ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದ.

ಪ್ರಕರಣ-5 (ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ)

ನೇಪಾಳ ಮೂಲದ ಕೃಷ್ಣಕುಮಾರಿ ಎಂಬಾಕೆಯನ್ನ ಪ್ರಿಯತಮ ಸಂತೋಷ್ ರಾಡ್​ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಇವರಿಬ್ಬರೂ ಕೆಲ ವರ್ಷಗಳಿಂದ ಲಿವಿಂಗ್ ಟು ಗೆದರ್​ನಲ್ಲಿದ್ರು. ಆದ್ರೆ ಪ್ರಿಯತಮೆ ಕೃಷ್ಣಕುಮಾರಿ ವಿರುದ್ಧ ಅನುಮಾನ ಪಡ್ತಿದ್ದ ಆರೋಪಿ ಸಂತೋಷ್, ಇದೇ ವಿಚಾರಕ್ಕೆ ಜಗಳ ಮಾಡಿದ್ದ. ಈ ವೇಳೆ ರಾಡ್ ನಿಂದ ಕೃಷ್ಣಕುಮಾರಿ ತಲೆಗೆ ಹೊಡೆದು ಕೊಲೆ‌ ಮಾಡಿದ್ದ.

ಪ್ರಕರಣ-6 (ಜೀವನ್ ಭೀಮನಗರ)

ಅರ್ಪಿತ್ ಎಂಬಾತ ಆಕಾಂಕ್ಷ ಎಂಬ ತನ್ನ ಪ್ರಿಯತಮೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಪ್ರಕರಣ-7 (ಬಸವೇಶ್ವರ ನಗರ)

ಅಕ್ರಮ ಸಂಬಂಧದ ಶಂಕೆ ಹಿನ್ನೆಲೆ ನಾಗರತ್ನಳ ಮರ್ಮಾಂಗಕ್ಕೆ ಇರಿದು ಆರೋಪಿ ಅಯ್ಯಪ್ಪ ತನ್ನ ಪ್ರಿಯತಮೆಯನ್ನು ಕೊಂದಿದ್ದ. ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ