Chikkamagalur News: ಆರ್ಕೆಸ್ಟ್ರಾ ಹಾಡಿಗಾಗಿ ಯುವಕ ಕೊಲೆ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ ಬಂಧನ

ಆರ್ಕೆಸ್ಟ್ರಾ ಹಾಡಿಗಾಗಿ ಯುವಕನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದಿದ್ದ ನಾಲ್ವರು ಪ್ರಮುಖ ಆರೋಪಿಗಳನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ.

Chikkamagalur News: ಆರ್ಕೆಸ್ಟ್ರಾ ಹಾಡಿಗಾಗಿ ಯುವಕ ಕೊಲೆ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
Follow us
ವಿವೇಕ ಬಿರಾದಾರ
|

Updated on: Jun 09, 2023 | 10:30 AM

ಚಿಕ್ಕಮಗಳೂರು: ಆರ್ಕೆಸ್ಟ್ರಾ ಹಾಡಿಗಾಗಿ ಯುವಕನನ್ನು ಕೊಲೆ (Murder) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದಿದ್ದ ನಾಲ್ವರು ಪ್ರಮುಖ ಆರೋಪಿಗಳನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ. ಲೋಹಿತ್, ಮಂಜುನಾಥ್, ಅರ್ಜಿತ್, ಶರತ್ ಬಂಧಿತ ಆರೋಪಿಗಳು. ತರೀಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ತರೀಕೆರೆ ಪಟ್ಟಣದ ರೇವಣ ಸಿದ್ದೇಶ್ವರ ದೇವಾಲಯ ಬಳಿ ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅಭಿನಂದನಾ ಕಾರ್ಯಕ್ರಮದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಹಾಡು ಬದಲಾಯಿಸಿದ್ದರಿಂದ ವರುಣ್ ಎಂಬಾತನಿಗೆ ಕಾಬಾಬ್​ ಮೂರ್ತಿ ಚಾಕು ಇರಿದು ಹತ್ಯೆ ಮಾಡಿದ್ದನು. ಬಳಿಕ ಕಬಾಬ್ ಮೂರ್ತಿ ಸೇರಿದಂತೆ ನಾಲ್ವರು ಅಜ್ಜಂಪುರದಲ್ಲಿ ತಲೆ ತಲೆಮರಿಸಿಕೊಂಡಿದ್ದರು.

ಅಲ್ಲದೇ ಈ ಹಿಂದೆ 7 ಜನ ಆರೋಪಿಗಳನ್ನು ಬಂಧಿಸಿದ್ದರು. ತರೀಕೆರೆ ನಿವಾಸಿಗಳಾದ ಮೂರ್ತಿ, ಮಂಜು, ನವೀನ್​​, ಧನು, ಈಶ್ವರ್​, ಪರಮೇಶ್ವರ್​, ನಿತಿನ್​ನನ್ನು ಬಂಧಿತರು. ಇದೀಗ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ವರುಣ್ ಹತ್ಯೆ ಸಂಬಂಧ ಪೊಲೀಸರು 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಂಗಾರದ ಆಸೆಗೆ ಕಬ್ಬಿನ ಗದ್ದೆಯಲ್ಲಿ ವೃದ್ಧೆಯ ಹತ್ಯೆ: ಆರೋಪಿ ಅಂದರ್​​

ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ: ಓರ್ವನ ಕೊಲೆ

ತುಮಕೂರು: ಹಣಕಾಸಿನ ವಿಚಾರಕ್ಕೆ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ತುರುವೇಕೆರೆ ತಾಲೂಕಿನ ಕರೇಕಲ್ಲು ಗ್ರಾಮದಲ್ಲಿ ನಡೆದಿದೆ. ದಿಲೀಪ್(22) ಮೃತ ದುರ್ದೈವಿ. ಪ್ರಸಾದ್ ಮತ್ತು ಮಂಜುನಾಥ್ ಕೊಲೆ ಆರೋಪಿಗಳು. ಹಣಕಾಸಿನ ವಿಚಾರಕ್ಕೆ ಪ್ರಸಾದ್, ಕಿರಣ್ ನಡುವೆ ಗಲಾಟೆ ಆಗಿತ್ತು. ರಾಜಿ ಮಾಡಿಸಲು ಬಂದಿದ್ದ ಕಿರಣ್ ಕುಮಾರ್ ಸ್ನೇಹಿತ ದಿಲೀಪ್ ಆಗಮಿಸಿದ್ದನು. ಈ ವೇಳೆ ದಿಲೀಪ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಗಾಯಾಳು ದಿಲೀಪ್​​ನನ್ನು ಕೂಡಲೇ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್​ ಸಾವನ್ನಪ್ಪಿದ್ದಾನೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರವಾಗಿ ಗಲಾಟೆ, ಹಲ್ಲೆ ಆರೋಪ

ವಿಜಯಪುರ: ಸರ್ಕಾರಿ ಜಾಗದಲ್ಲಿ ಅಂಗಡಿ ಹಾಕಿಕೊಂಡವರ ಮೇಲೆ ಕಾಂಗ್ರೆಸ್​ ಮುಖಂಡ ಬಾಪುಗೌಡ ಪಾಟೀಲ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಘಟನೆ ನಡೆದಿದೆ.

ಬಾಪುಗೌಡ ಪಾಟೀಲ್ ಬೆಂಬಲಿಗರು ಮಲ್ಲಿಕಾರ್ಜುನ ಬಾಟಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಬಾಪುಗೌಡ ಪಾಟೀಲ್ ಸರ್ಕಾರಿ ಜಾಗದ ಬಳಿ ಎರಡು ಎಕರೆ ಜಮೀನು ಖರೀದಿಸಿದ್ದಾರೆ. ಸ್ಥಳೀಯರು ಸರ್ಕಾರಿ ಜಾಗದಲ್ಲಿ ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಹಲವರು ಅಂಗಡಿ, ಖಾನಾವಳಿ ಹಾಕಿಕೊಂಡು ಉಪಜೀವನ ನಡೆಸುತ್ತಿದ್ದಾರೆ.

ಆದರೆ ಬಾಪುಗೌಡ ಪಾಟೀಲ್ ಮೊದಲಿಗೆ ಮಲ್ಲಿಕಾರ್ಜುನ ಬಟಗಿ ಅವರನ್ನು ಟಾರ್ಗೆಟ್ ಮಾಡಿ ಅಂಗಡಿ ಕಿತ್ತು ಹಾಕಿರೋ ಆರೋಪ ಕೇಳಿಬಂದಿದೆ. ಮಲ್ಲಿಕಾರ್ಜುನ ಬಟಗಿ ಪತ್ನಿ ಶಾಂತಮ್ಮ, ಮಕ್ಕಳಾದ ಕಾವೇರಿ ಚೆನ್ನಮ್ಮ, ವಿಶ್ವನಾಥ್ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ.

ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಸುದ್ದಿಗಳ ಲೈವ್​ ಅಪ್ಡೇಟ್ಸ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ