Mumbai Crime: ಲಿವ್-ಇನ್ ಸಂಗಾತಿಯ ದೇಹವನ್ನು ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ವಿಚಾರಣೆ ವೇಳೆ ವ್ಯಕ್ತಿ ಹೇಳಿದ್ದೇನು?
ವ್ಯಕ್ತಿಯು ತನ್ನ ಲಿವ್-ಇನ್ ಸಂಗಾತಿಯ ದೇಹವನ್ನು ಕತ್ತರಿಸಿ 13 ತುಂಡುಗಳನ್ನಾಗಿ ಮಾಡಿ, ಕುಕ್ಕರ್ನಲ್ಲಿ ಬೇಯಿಸಿದ್ದ ಎನ್ನುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು, ಆದರೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ವ್ಯಕ್ತಿಯು ತನ್ನ ಲಿವ್-ಇನ್ ಸಂಗಾತಿಯ ದೇಹವನ್ನು ಕತ್ತರಿಸಿ 13 ತುಂಡುಗಳನ್ನಾಗಿ ಮಾಡಿ, ಕುಕ್ಕರ್ನಲ್ಲಿ ಬೇಯಿಸಿದ್ದ ಎನ್ನುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು, ಆದರೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. 32 ವರ್ಷದ ಸರಸ್ವತಿ ವೈದ್ಯ ಎಂಬುವವರ ಜತೆ ಮನೋಜ್ ಸಾನೆ ಕೆಲವು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದರು. ಆಕೆಯನ್ನು ಹತ್ಯೆ ಮಾಡಿ ಬಳಿಕ ಆಕೆಯ ದೇಹವನ್ನು ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ್ದ ಎಂದು ಆತನನ್ನು ಬಂಧಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ಸರಸ್ವತಿ ವೈದ್ಯ ಜೂನ್ 3 ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಳು, ಆಕೆಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಸಂಶಯ ಪಡುತ್ತಾರೆ ಎನ್ನುವ ಭಯದಲ್ಲಿ ಆಕೆಯ ದೇಹವನ್ನು ಅಡಗಿಸುವ ಪ್ರಯತ್ನ ಮಾಡಿದ್ದೆ. ಹೀಗಾಗಿ ವಾಸನೆ ಬಾರದಂತೆ ತಡೆಯಲು ಆಕೆಯ ದೇಹವನ್ನು ಕತ್ತರಿಸಿ ಪ್ರೆಷರ್ ಕುಕ್ಕರ್ನಲ್ಲಿ ಬೇಯಿಸಿದ್ದೆ. ನಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ ಎಂದು ಮನೋಜ್ ಹೇಳಿದ್ದಾರೆ.
Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ
ಮೀರಾ ರೋಡ್ ಪ್ರದೇಶದಲ್ಲಿನ ಸೊಸೈಟಿಯಲ್ಲಿ ತುಂಡು ತುಂಡಾಗಿರುವ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಲ್ಲಿ ದಂಪತಿ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿತ್ತು. ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಿರಬಹುದು ಎಂದು ಹೇಳಲಾಗಿತ್ತು. . ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ