Mira Road Murder:‘ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಭಯದಿಂದ ಮೃತದೇಹವನ್ನು ತುಂಡು ಮಾಡಿದೆ’: ಆರೋಪಿ ಮನೋಜ್ ಸಾಹ್ನಿ ಹೇಳಿಕೆ

ಮುಂಬೈ ಪೊಲೀಸರು ಸಾಹ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸರಸ್ವತಿ ರೆಡ್ಡಿ ಎಂದು ಗುರುತಿಸಲಾದ 32 ವರ್ಷದ ಲಿವ್-ಇನ್ ಸಂಗಾತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

Mira Road Murder:‘ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಭಯದಿಂದ ಮೃತದೇಹವನ್ನು ತುಂಡು ಮಾಡಿದೆ’: ಆರೋಪಿ ಮನೋಜ್ ಸಾಹ್ನಿ ಹೇಳಿಕೆ
ಆರೋಪ ಮನೋಜ್ ಸಾಹ್ನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 08, 2023 | 7:10 PM

ಮುಂಬೈ: ಆಕೆ ಆತ್ಮಹತ್ಯೆ (Suicide) ಮಾಡಿಕೊಂಡಿದ್ದರಿಂದ ಭಯದಿಂದ ಆಕೆಯ ಮೃತದೇಹವನ್ನು ತುಂಡು ತುಂಡು ಮಾಡಿದೆ ಎಂದು ಮುಂಬೈನ ಮೀರಾ ರೋಡ್‌ನಲ್ಲಿ (Mira Road) ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದ (Mumbai Murder Case) ಮನೋಜ್ ಸಾಹ್ನಿ(Manoj Sahni) ಹೇಳಿಕೆ ನೀಡಿದ್ದಾನೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ನನಗೆ ಹೆದರಿಕೆ ಆಯ್ತು. ಹೀಗಾಗಿ, ಆಕೆಯ ಮೃತದೇಹವನ್ನು ವಿಲೇವಾರಿ ಮಾಡುವುದಕ್ಕಾಗಿ ತುಂಡು ತುಂಡು ಮಾಡಿದೆ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ. ಪತ್ತೆಯಾದ ದೇಹದ ಭಾಗಗಳನ್ನು ಆರೋಪಿಗಳ ಹೇಳಿಕೆಯ ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು. ನಂತರ ವೈದ್ಯಕೀಯವಾಗಿ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರು ಸಾಹ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸರಸ್ವತಿ ರೆಡ್ಡಿ ಎಂದು ಗುರುತಿಸಲಾದ 32 ವರ್ಷದ ಲಿವ್-ಇನ್ ಸಂಗಾತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಅಪರಾಧದ ಹಿಂದಿನ ಉದ್ದೇಶವು ಇನ್ನೂ ಖಚಿತವಾಗಿಲ್ಲ ಎಂದು TV9 ಭಾರತವರ್ಷ್ ವರದಿ ಮಾಡಿದೆ.

ಸಂತ್ರಸ್ತೆಯ ನೆರೆಹೊರೆಯವರು ಸಾಹ್ನಿ ಇದ್ದಕ್ಕಿದ್ದಂತೆ ನಾಯಿಗಳಿಗೆ ಆಹಾರವನ್ನು ನೀಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರೆ.ಯಾಕೆಂದರೆ ಅವರು  ಹಿಂದೆಂದೂ ಈ ರೀತಿ ನೋಡಿರಲಿಲ್ಲ,

ಸಾಹ್ನಿ ತನ್ನ ಲಿವ್-ಇನ್ ಸಂಗಾತಿಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಬೀದಿ ನಾಯಿಗಳಿಗೆ ತಿನ್ನಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಆತ ಮೃತ ದೇಹದ ತುಂಡುಗಳನ್ನು ಒಳಚರಂಡಿಗೆ ವಿಲೇವಾರಿ ಮಾಡಿರಬಹುದು ಎಂದು ಅವರು ಶಂಕಿಸಿದ್ದಾರೆ.

ಇದನ್ನೂ ಓದಿ: Mumbai Crime: ಲಿವ್-ಇನ್ ಸಂಗಾತಿಯ ಕೊಂದು, ದೇಹವನ್ನು 13 ಭಾಗ ಮಾಡಿ, ಕುಕ್ಕರ್​ನಲ್ಲಿ ಬೇಯಿಸಿದ ವ್ಯಕ್ತಿಯ ಬಂಧನ

ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿರುವಾಗ ರಕ್ತ ಮತ್ತು ದೇಹದ ಭಾಗಗಳಿಂದ ತುಂಬಿದ ಎರಡು ಬಕೆಟ್‌ಗಳನ್ನು ಪತ್ತೆ ಮಾಡಿದರು. ಫ್ಲಾಟ್ ಆಕಾಶದೀಪ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಮಲಗುವ ಕೋಣೆಯಲ್ಲಿ ಮರ ಕತ್ತರಿಸುವ ಯಂತ್ರ ಮತ್ತು ಮಹಿಳೆಯ ಕೂದಲು ಪತ್ತೆಯಾಗಿದೆ. ಆರೋಪಿ ಸಾಹ್ನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಮತ್ತಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Thu, 8 June 23