ಹೆದ್ದಾರಿಯಲ್ಲಿ ವಸೂಲಿಗೆ ನಿಂತ ಪೊಲೀಸರು ಜನರಿಂದ ತರಾಟೆಗೊಳಗಾದ ಬಳಿಕ ಇಲಾಖೆಯಿಂದ ಅಮಾನತು ಆದೇಶ!

ಹೆದ್ದಾರಿಯಲ್ಲಿ ವಸೂಲಿಗೆ ನಿಂತ ಪೊಲೀಸರು ಜನರಿಂದ ತರಾಟೆಗೊಳಗಾದ ಬಳಿಕ ಇಲಾಖೆಯಿಂದ ಅಮಾನತು ಆದೇಶ!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Jun 09, 2023 | 11:37 AM

ವಿಡಿಯೋ ಅವರ ಮೇಲಧಿಕಾರಿಗಳಿಗೆ ತಲುಪಿದಾಗ ಎಎಸ್ ಐ ಮತ್ತು ಪೇದೆಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ತುಮಕೂರು: ಶಿರಾ-ತುಮಕೂರು (Sira-Tumakuru) ನಡುವೆ ಓಡಾಡುತ್ತಿದ್ದ ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಒಬ್ಬ ಎಎಸ್ ಐ (ASI) ಮತ್ತು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಡಬಲ್ ಡೋಸ್ ಟ್ರೀಟ್ ಮೆಂಟ್ ಸಿಕ್ಕಿದೆ. ಕುರಿ ಸಾಗಿಸುತ್ತಿದ್ದ ಲಾರಿಯೊಂದನ್ನು (truck) ಅಡ್ಡಗಟ್ಟಿ ವಸೂಲಿಗೆ ನಿಂತ ಈ ಪೊಲೀಸರನ್ನು ಮೊದಲು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಕುರಿಸಾಗಣೆ ಮಾಡುತ್ತಿದ್ದವರಲ್ಲಿ ನಿಯಮಬದ್ಧ ಕಾಗದಪತ್ರಗಳಿದ್ದರೂ ಹಣ ಯಾಕೆ ಕೇಳತ್ತಿದ್ದೀರಿ ಅಂತ ಜನ ದಬಾಯಿಸಿದಾಗ ಪೊಲೀಸರು ಪೆ ಪೆ ಪೆ ಮಾಡಿದ್ದಾರೆ. ಆಮೇಲೆ ಈ ವಿಡಿಯೋ ಅವರ ಮೇಲಧಿಕಾರಿಗಳಿಗೆ ತಲುಪಿದಾಗ ಎಎಸ್ ಐ ಮತ್ತು ಪೇದೆಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಮಾಡಿದ್ದುಣ್ಣೋ ಮಹಾರಾಯ…

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 09, 2023 11:33 AM