ಪರಿಸರಕ್ಕೆ ಮಾರಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ಗಿಡದ ನಾಶಕ್ಕೆ ಸ್ವಯಂ ಉದ್ಯೋಗದ ಬೆಸುಗೆ

| Updated By: Rakesh Nayak Manchi

Updated on: Oct 25, 2022 | 11:22 AM

ಪರಿಸರಕ್ಕೆ ಮಾರಕವಾಗಿ ಎಂದು ಬೀಲಿ ಗಿಡದ ಬುಡ ಸಹಿತ ಕಿತ್ತು ಬಿಸಾಡಬೇಕು ಎಂದು ಭಾವಿಸಿದ್ದರು. ಆದರೆ ಇಂದು ಆ ಗಿಡಗಳೇ ನೂರಾರು ಯುವಕರಿಗೆ ದಾರಿದೀಪವಾಗಿ ನಿಂತಿದೆ.

ಪರಿಸರಕ್ಕೆ ಮಾರಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಈ ಗಿಡದ ನಾಶಕ್ಕೆ ಸ್ವಯಂ ಉದ್ಯೋಗದ ಬೆಸುಗೆ
ಬೇಲಿಗಿಡದ ನಾಶಕ್ಕೆ ಸ್ವಯಂ ಉದ್ಯೋಗದ ಬೆಸುಗೆ
Follow us on

ಚಿಕ್ಕಬಳ್ಳಾಪುರ: ಒಂದು ಸ್ಥಳದಲ್ಲಿ ಬೆಳೆದರೆ ಸಾಕು ಸುತ್ತಮುತ್ತ ತನ್ನ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡುವ ಬೇಲಿ ಗಿಡಗಳು ಪರಿಸರಕ್ಕೆ ಮಾರಕ ಎನ್ನಲಾಗುತ್ತಿತ್ತು. ಇದನ್ನು ಬುಡ ಸಹಿತ ನಾಶ ಮಾಡಬೇಕು ಅಂತಲೂ ಹೇಳುತ್ತಿದ್ದರು. ಆದರೆ ಈ ಬೇಲಿ ಗಿಡಗಳು ಇಂದು ನೂರಾರು ಯುವಕರಿಗೆ ದಾರಿದೀಪವಾಗಿದೆ ಎಂದರೆ ಅಚ್ಚರಿಯೇ ಸರಿ. ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಎರಡು ವರ್ಷದಿಂದ ಎತ್ತೇಚ್ಚವಾಗಿ ಮಳೆ ಸುರಿಯುತ್ತಿದ್ದು, ಎಲ್ಲೆಂದರಲ್ಲಿ ಬೇಲಿ ಗಿಡಗಳ ಪೊದೆ ಬೆಳೆದು ನಿಂತಿದೆ. ಈ ಗಿಡಗಳು ನಂದಿಗಿರಿಧಾಮದ ಸೌಂದರ್ಯ ಹಾಳು ಮಾಡುತಿದ್ದು, ಪ್ರಾಣಿ ಪಕ್ಷಗಳ ವಾಸಕ್ಕೂ ಬೇಲಿಪೊದೆ ಮಾರಕ ಎಂದು ಪರಿಣಿತರು ಹೇಳುತ್ತಾರೆ. ಇದನ್ನು ಬುಡಸಮೇತ ಕಿತ್ತು ಬೆಂಕಿ ಹಚ್ಚಿ ಸುಟ್ಡು ಬಿಸಾಕಬೇಕು ಅಂದುಕೊಂಡಿದ್ದರು. ಆದರೆ ಆ ನಿರುಪಯುಕ್ತ ವಸ್ತು ಈ ಉಪಯೋಗಕ್ಕೆ ಬಂದಿದೆ. ಅದನ್ನು ಕಿತ್ತು ಬಿಸಾಡಲು ಸಹ ಖರ್ಚು ಬರಿಸಬೇಕಿದ್ದ ಗಿರಿಧಾಮದ ತೋಟಗಾರಿಕೆ ಇಲಾಖೆ ಈಗ ಅದನ್ನೆ ಬಂಡವಾಳ ಮಾಡಿಕೊಂಡು ನಿರುದ್ಯೂಗಿಗಳಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದೆ.

ಆಡು ಭಾಷೆಯಲ್ಲಿ ಬೇಲಿ ಎಂದು ಕರೆದರೆ ಅದಕ್ಕೆ ವೈಜ್ಞಾನಿಕ ಹೆಸರು ಲಾಂಟನಾ ಎಂದು ಕರೆಯುತ್ತಾರೆ. ಇನ್ನೂ ಮಲೆಮಹದೇಶ್ವರ ಸೇರಿದಂತೆ ಹಲವು ಕಡೆ ಬೇಲಿ ಕಡ್ಡಿಗಳಿಂದ ಕರಕುಶಲ ಸಾಮಗ್ರಿಗಳನ್ನು ತಯಾರಿಸುವ ತರಬೇತಿ ಪಡೆದ ತಂಡ ನಂದಿಗಿರಿಧಾಮಕ್ಕೂ ಆಗಮಿಸಿದೆ. ಗಿರಿಧಾಮದ ಅಧಿಕಾರಿಗಳ ಸಹಕಾರದಿಂದ ಸ್ಥಳಿಯರ ತಂಡ ಜನರ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೋಡಗಿದ್ದಾರೆ.

ಮಂಚ, ಕುರ್ಚಿ, ಬೆಂಚು, ಮನೆಯಲ್ಲಿ ಇಡಬಹುದಾದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಲಾಭ ಗಳಿಸಬಹುದು. ಬೇಲಿ ಕಡ್ಡಿಗಳನ್ನು ಚೆನ್ನಾಗಿ ಕಾದಿರುವ ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಮೇಲಿನ ತೊಗಟೆಯನ್ನು ತಗೆದರೆ ಹೇಗೆ ಬೇಕೋ ಹಾಗೆ ವಸ್ತುಗಳನ್ನು ತಯಾರು ಮಾಡಬಹುದು. ಹೀಗೆ ಬೇಲಿ ಕಡ್ಡಿ ಪೊದೆ ನಾಶವಾದರೆ ನಂದಿ ಬೆಟ್ಡದಲ್ಲಿ ಸೌಂದರ್ಯ ಹೆಚ್ಚಾಗುತ್ತದೆ ಪ್ರಾಣಿ ಪಕ್ಷಿಗಳ ಓಡಾಟಕ್ಕೂ ಅನುಕೂಲ ಆಗುತ್ತದೆ ಎಂದು ತರಬೇತುದಾರ ಹೇಳ್ತಾರೆ.

ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ

ಮತ್ತಷ್ಟು ಜಿಲ್ಲಾವಾರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:22 am, Tue, 25 October 22