ಚಿಕ್ಕಮಗಳೂರು: ಕೊರೊನಾ ಆರ್ಭಟ ರಾಜ್ಯಾದ್ಯಂತ ಹೆಚ್ಚಾಗಿದೆ. ಅದರಲ್ಲೂ ಜೂನ್ ಹೊತ್ತಿಗೆ ಗ್ರಾಮಗಳಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಸುಳಿವಿದೆ. ಹೀಗಾಗಿ ಲಾಕ್ಡೌನ್ ಜೂನ್ 30 ರ ವರೆಗೂ ಮುಂದುವರಿಸಬೇಕಾ ಎನ್ನುವ ಪ್ರಶ್ನೆ ರಾಜ್ಯ ಸರ್ಕಾರಕ್ಕೆ ಕಾಡುತ್ತಿದೆ. ಕೊರೊನಾ ನಿಯಂತ್ರಿಸಲು ಪ್ರತಿಯೊಬ್ಬರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಆದರೆ ಕೊವಿಡ್ ಆಸ್ಪತ್ರೆಯಲ್ಲೇ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಗಳಲ್ಲಿ ಎಷ್ಟು ನಿಗಾ ವಹಿಸಿದರೂ ಸಾಲಲ್ಲ. ಅದರಲ್ಲೂ ಈ ಸಂದಿಗ್ಧ ಕಾಲದಲ್ಲಿ ಕೊವಿಡ್ ಆಸ್ಪತ್ರೆಗಳಲ್ಲಿ ವ್ಯವಸ್ಥೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ಆದರೆ ಚಿಕ್ಕಮಗಳೂರು ಜಿಲ್ಲಾ ಕೊವಿಡ್ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು, ಸಂಬಂಧಿಕರು, ಸೋಂಕಿತರ ಮೃತದೇಹ ಎಲ್ಲ ಒಂದೇ ವಾರ್ಡ್ನಲ್ಲಿ ಕಂಡುಬಂದಿದೆ.
ಪಕ್ಕದ ಬೆಡ್ನಲ್ಲಿಯೇ ಶವವಿದ್ದರೂ ಸೋಂಕಿತರು ಮತ್ತು ಸಂಬಂಧಿಕರು ಊಟ, ಉಪಾಹಾರ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸದೆ ಕುಟುಂಬಸ್ಥರು ಸೋಂಕಿತರ ಸಂಪರ್ಕ ಮಾಡುತ್ತಿದ್ದಾರೆ. ಬಳಿಕ ಹೊರಗೆ ಬಂದು ಸೋಂಕಿತ ಸಂಬಂಧಿಕರು ಓಡಾಡುತ್ತಿದ್ದಾರೆ. ಜೊತೆಗೆ ಮೃತದೇಹ ಪ್ಯಾಕ್ ಮಾಡುವ ಸಿಬ್ಬಂದಿ ಕೂಡಾ ಪಿಪಿಇ ಕಿಟ್ ಹಾಕಲ್ಲ. ಈ ಎಲ್ಲಾ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಅಸ್ವಚ್ಛತೆ
ಬೆಂಗಳೂರು: ನಾಯಂಡಳ್ಳಿ ಜಂಕ್ಷನ್ ಬಳಿಯಿರುವ ಪಂತರಪಾಳ್ಯ ಆರೋಗ್ಯ ಕೇಂದ್ರ ಅಸ್ವಚ್ಛತೆಯಿಂದ ಕೂಡಿದೆ. ಸಿಬ್ಬಂದಿ ಆಸ್ಪತ್ರೆಯ ಔಷಧ ತ್ಯಾಜ್ಯ ಆವರಣದಲ್ಲೇ ತುಂಬಿಟ್ಟಿದೆ. ವ್ಯಾಕ್ಸಿನೇಷನ್ ಸೆಂಟರ್ನಲ್ಲೂ ಕೂಡ ಇದೇ ಆಗಿದ್ದು ಸ್ವಚ್ಛತೆಯಿಂದ ಕೂಡಿಲ್ಲ.
ಇದನ್ನೂ ಓದಿ
ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ; ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ
(Chikkamagaluru coovid Hospital is in mess and People have expressed outrage over staff neglect)
Published On - 9:18 am, Mon, 31 May 21