ಚಿಕ್ಕಮಗಳೂರು PWD ಎಇಇ ಮನೆ ಎಸಿಬಿ ದಾಳಿಯಲ್ಲಿ ಅಕ್ರಮ ಸಂಪತ್ತು ಪತ್ತೆ; ರಾಯಚೂರು ಕಸದ ಬುಟ್ಟಿಯಲ್ಲಿ ಚಿನ್ನ, ಬೆಳ್ಳಿ ಪತ್ತೆ

| Updated By: sandhya thejappa

Updated on: Mar 16, 2022 | 2:04 PM

ಚಿಕ್ಕಮಗಳೂರಿನ ಗಾಂಧಿನಗರ ಬಡಾವಣೆಯಲ್ಲಿರುವ ಗವಿರಂಗಪ್ಪ ಮನೆಯಲ್ಲಿ ಅಕ್ರಮ ಸಂಪತ್ತು ಹೊಂದಿರುವುದು ಪತ್ತೆಯಾಗಿದೆ. ಈವರೆಗೆ ಸಿಕ್ಕ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು PWD ಎಇಇ ಮನೆ ಎಸಿಬಿ ದಾಳಿಯಲ್ಲಿ ಅಕ್ರಮ ಸಂಪತ್ತು ಪತ್ತೆ; ರಾಯಚೂರು ಕಸದ ಬುಟ್ಟಿಯಲ್ಲಿ ಚಿನ್ನ, ಬೆಳ್ಳಿ ಪತ್ತೆ
ದಾಳಿ ವೇಳೆ ಪತ್ತೆಯಾದ ಚಿನ್ನ, ಬೆಳ್ಳಿ
Follow us on

ಚಿಕ್ಕಮಗಳೂರು: ಇಂದು (ಮಾರ್ಚ್ 16) ಬೆಳ್ಳಂಬೆಳಗ್ಗೆ ಎಸಿಬಿ (ACB) ಅಧಿಕಾರಿಗಳು ರಾಜ್ಯದಲ್ಲಿ ಸುಮಾರು 75 ಕಡೆ ದಾಳಿ ನಡೆಸಿದ್ದಾರೆ. ಜಿಲ್ಲೆಯ ಪಿಡಬ್ಲೂಡಿ (PWD) ಎಇಇ ಗವಿರಂಗಪ್ಪ ಮನೆ ಮೇಲೆ ದಾಳಿ ನಡೆದಿದ್ದು, ದಾಳಿ ವೇಳೆ ಅಕ್ರಮ ಸಂಪತ್ತು ಪತ್ತೆಯಾಗಿದೆ. ಚಿಕ್ಕಮಗಳೂರಿನ ಗಾಂಧಿನಗರ ಬಡಾವಣೆಯಲ್ಲಿರುವ ಗವಿರಂಗಪ್ಪ ಮನೆಯಲ್ಲಿ ಅಕ್ರಮ ಸಂಪತ್ತು ಹೊಂದಿರುವುದು ಪತ್ತೆಯಾಗಿದೆ. ಈವರೆಗೆ ಸಿಕ್ಕ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂಪಾಯಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಕೂಡ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ನಡೆಯುತ್ತಿರುವ ದಾಳಿ, ನಾಳೆವರೆಗೂ ಮುಂದುವರೆಯುವ ಸಾಧ್ಯತೆಯಿದೆ.

ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆ:
ರಾಯಚೂರಿನ ಬಸವೇಶ್ವರ ಕಾಲೋನಿಯಲ್ಲಿರುವ ಕೆಬಿಜೆಎನ್ಎಲ್ (KBJNL) ಎಇಇ ಮನೆ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಅಶೋಕ್ ರೆಡ್ಡಿ ಪಾಟೀಲ್ ಮನೆ, ಕಚೇರಿಗಳ ಮೇಲೆ ರೇಡ್ ಮಾಡಲಾಗಿದೆ. ಈ ವೇಳೆ ಮನೆ ಪಕ್ಕದ ಖಾಲಿ ಸೈಟ್​ನಲ್ಲಿ ಬಿಸಾಡಿದ್ದ ಹಣ ಪತ್ತೆಯಾಗಿದೆ. ಖಾಲಿ ಸೈಟ್​ನಲ್ಲಿ ಒಂದು 100, 500 ರೂ. ನೋಟು ಸಿಕ್ಕಿದೆ. ಬೆಳಗ್ಗೆ ದಾಳಿ ಬಳಿಕ ಖಾಲಿ ಸೈಟ್​ನಲ್ಲಿ ಹಣ ಬಿಸಾಡಿದ್ದರು. ಸದ್ಯ ಖಾಲಿ ಸೈಟ್​ನಲ್ಲಿ ಪರಿಶೀಲನೆ ನಡೆಯುತ್ತಿದೆ.

ಕಸದ ಬುಟ್ಟಿಯಲ್ಲಿ ಚಿನ್ನ, ಬೆಳ್ಳಿ ಪತ್ತೆ:
ನೋಟುಗಳ ಪತ್ತೆ ಬಳಿಕ, ಎಸಿಬಿ ಅಧಿಕಾರಿಗಳು ಇಡೀ ಮನೆ ಸುತ್ತ ಹುಡುಕಾಡಿದ್ದಾರೆ. ಬೆಳಿಗ್ಗೆ ಎಇಇ ಅಶೋಕ್ ರೆಡ್ಡಿ ಪತ್ನಿ ಶೌಚಾಲಯಕ್ಕೆ ಹೋಗೊದಾಗಿ ಎರಡು, ಮೂರು ಬಾರೀ ಹೋಗಿದ್ದರು. ಆಗ ಅದೇ ಅನುಮಾನದಿಂದ ಮನೆ ಹಿಂಭಾಗದಲ್ಲಿ ಪರಿಶೀಲನೆ ಮಾಡಲಾಗಿದೆ. ಡಸ್ಟ್ ಬಿನ್​ನಲ್ಲಿ ಪ್ಲಾಸ್ಟಿಕ್ ಕವರ್ ಬಂದ ಆಗಿತ್ತು. ಆಗ ಅನುಮಾನದಿಂದ ಕವರ್ ತೆಗೆದು ನೋಡಿದಾಗ ಚಿನ್ನ, ಬೆಳ್ಳಿ ಪತ್ತೆಯಾಗಿದೆ.

ಇದನ್ನೂ ಓದಿ

2 ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ನಂಜನಗೂಡು ದೊಡ್ಡ ಜಾತ್ರೆ; ಪಂಚ ಮಹಾರಥೋತ್ಸವದಲ್ಲಿ ರಾರಾಜಿಸಿದ ಪುನೀತ್ ಭಾವಚಿತ್ರ

ಫ್ರೆಂಚ್ ವರ್ಣಚಿತ್ರಗಾರ್ತಿ ರೋಸಾ ಬೊನ್‌ಹೂರ್ 200 ನೇ ಜನ್ಮದಿನ: ವಿಶೇಷ ಡೂಡಲ್​ ರಚಿಸಿದ ಗೂಗಲ್​

Published On - 11:09 am, Wed, 16 March 22