ಚಿಕ್ಕಮಗಳೂರು: ಶೋಭಾಯಾತ್ರೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ, 7 ಕಾರ್ಯಕರ್ತರ ವಿರುದ್ಧ FIR

ಮಸೀದಿ ಮುಂದೆ ಪಟಾಕಿ ಸಿಡಿಸದಂತೆ ಪೊಲೀಸರ ಸೂಚನೆ ಇದ್ರೂ, ವಿರೋಧದ ನಡುವೆಯೂ ಪಟಾಕಿ ಸಿಡಿಸಿದ್ದಾರೆ. ಇದನ್ನ ತಡೆಯಲು ಹೋದ ಪೊಲೀಸರಿಗೆ ಬಜರಂಗದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಚಿಕ್ಕಮಗಳೂರು: ಶೋಭಾಯಾತ್ರೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ, 7 ಕಾರ್ಯಕರ್ತರ ವಿರುದ್ಧ FIR
ಮಸೀದಿ ಮುಂದೆ ಪಟಾಕಿ ಸಿಡಿಸಿದ ಕಾರ್ಯಕರ್ತರು
Edited By:

Updated on: Dec 24, 2023 | 3:15 PM

ಚಿಕ್ಕಮಗಳೂರು, ಡಿ.24: ಶೋಭಾಯಾತ್ರೆ ವೇಳೆ ಬಜರಂಗದಳದ ಕಾರ್ಯಕರ್ತರು (Bajrang Dal) ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಸಂಬಧ 7 ಕಾರ್ಯಕರ್ತರ ವಿರುದ್ಧ FIR ದಾಖಲಾಗಿದೆ. ಚಿಕ್ಕಮಗಳೂರಿನ ಆಲ್ದೂರು ಪಟ್ಟಣದಲ್ಲಿ ಶೋಭಾ ಯಾತ್ರೆ (Shobhayatra) ವೇಳೆ ಮಸೀದಿ ಮುಂದೆಯೇ ಪಟಾಕಿ ಹಚ್ಚಿದ ಕಾರ್ಯಕರ್ತರನ್ನು ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಮಸೀದಿ ಮುಂದೆ ಪಟಾಕಿ ಸಿಡಿಸದಂತೆ ಪೊಲೀಸರ ಸೂಚನೆ ಇದ್ರೂ, ವಿರೋಧದ ನಡುವೆಯೂ ಪಟಾಕಿ ಸಿಡಿಸಿದ್ದಾರೆ. ಇದನ್ನ ತಡೆಯಲು ಹೋದ ಪೊಲೀಸರಿಗೆ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ವಿರೋದಧ ನಡುವೆಯೂ ಏಕಾಏಕಿ ಪಟಾಕಿ ಹಚ್ಚಿದ್ದರಿಂದ ಕೆಲ ಪೊಲೀಸರಿಗೆ ಗಾಯವಾಗಿದೆ. ಹೀಗಾಗಿ ಹಲ್ಲೆಗೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಂಜು, ಸುನಿಲ್ ಸೇರಿದಂತೆ 7 ಜನರ ಮೇಲೆ FIR ದಾಖಲಿಸಲಾಗಿದೆ. ಗಾಯಗೊಂಡಿದ್ದ ಪೊಲೀಸರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಶೋಭಾಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸಿ.ಟಿ ರವಿ ಅವರು ಭಾಗಿಯಾಗಿದ್ದರು.

ಇದನ್ನೂ ಓದಿ: ಒಂದೇ ಮತದಿಂದ ರಾಜ್ಯಸಭಾ ಚುನಾವಣೆ ಸೋತಿದ್ದ ಅವಿನಾಶ್​ ಪಾಂಡೆಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಿದ ಕಾಂಗ್ರೆಸ್​

ಇಂದಿನಿಂದ ದತ್ತ ಜಯಂತಿ ಆರಂಭ

ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಇಂದಿನಿಂದ ದತ್ತಜಯಂತಿ ಆರಂಭವಾಗಿದೆ. ಇದೆ ಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಜೊತೆ ಶ್ರೀ ರಾಮಸೇನೆ ಕೂಡ ದತ್ತಜಯಂತಿ ಆಚರಣೆ ಮಾಡುವುದಾಗಿ ಘೋಷಿಸಿದ್ದು ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಾಗಿದೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.

ರಾಜ್ಯದಾದ್ಯಂತ ಡಿ.17 ರಂದು 25 ಸಾವಿರಕ್ಕೂ ಅಧಿಕ ಹಿಂದೂ ಸಂಘಟನೆ ಕಾರ್ಯಕರ್ತರು ದತ್ತಮಾಲಾ ಧಾರಣೆ ಮಾಡಿದ್ದು ಇಂದಿನಿಂದ ಇನಾಂ ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ ಆಚರಣೆ ಆರಂಭಗೊಳ್ಳಲಿದೆ. ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರಿಂದ ಅನುಸೂಯ ಜಯಂತಿ ಅಂಗವಾಗಿ ಸಂಕೀರ್ತನಾ ಯಾತ್ರೆ ನಡೆಸಿ ನಂತರ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆದು ಹೋಮ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Sun, 24 December 23