
ಚಿಕ್ಕಮಗಳೂರು: ಬೈಕ್-ಟಿಪ್ಪರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾತ ಮತ್ತು ಮೊಮ್ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಘಟನೆ ನಡೆದಿದೆ.
ಬೈಕ್ನಲ್ಲಿದ್ದ ಮಲ್ಲಪ್ಪ(57) ಮತ್ತು ಉತ್ಸವ್(12) ಮೃತ ದುರ್ದೈವಿಗಳು. ಮೃತರು ಬೀರೂರಿನ ಬಳಿಗನೂರು ಗ್ರಾಮದವರು. ಬೈಕ್ ಡಿಕ್ಕಿ ಹೊಡೆದ ಬಳಿಕ ಟಿಪ್ಪರ್ ಲಾರಿ ರಸ್ತೆ ಬದಿ ಮರಕ್ಕೆ ಅಪ್ಪಳಿಸಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:02 pm, Mon, 25 May 20