ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಸಿ.ಟಿ. ರವಿ (CT Ravi) ಮತ್ತೊಂದು ಸುತ್ತು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಒಬ್ಬರು ಯೋಜನೆ ನಾನೇ ಕೊಟ್ಟೆ ಅಂತಿದ್ದಾರೆ. ಆದರೆ ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ. ಅರ್ಧಂಬರ್ದ ತುಂಬಿದ ಕೊಡ ಮಾತ್ರ ಅಲುಗಾಡುತ್ತದೆ! 84 ಕೋಟಿ ಜನರಿಗೆ ಕೇಂದ್ರ ಉಚಿತವಾಗಿ ರೇಷನ್ ಕೊಟ್ಟಿದೆ. ಪ್ರಧಾನಿ ಮೋದಿಯವರು (PM Narendra Modi) ಎಂದೂ ಎದೆಬಡಿದುಕೊಂಡಿಲ್ಲ. ನಾನು ಕೊಟ್ಟೆ ನಾನು ಕೊಟ್ಟೆ ಎಂದು ಅವರು ಎದೆ ಬಡಿದುಕೊಂಡಿಲ್ಲ. ಅನ್ನಭಾಗ್ಯ ಯೋಜನೆಗೆ (Annabhagya) ಕೇಂದ್ರ 90% ಹಣವನ್ನು ಕೊಡುತ್ತಿತ್ತು. 10 ಪರ್ಸೆಂಟ್ ಹಣ ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿತ್ತು. 32 ರೂಪಾಯಿಯಲ್ಲಿ 29 ರೂ. ಕೇಂದ್ರ ಸರ್ಕಾರ ಕೊಡುತ್ತಿತ್ತು. ಈ ಯೋಜನೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ 3 ರೂ. ಕೊಡುತ್ತಿತ್ತು. 29 ರೂ. ಕೊಟ್ಟವರು ನಾನು ಕೊಟ್ಟೆ ಅಂತ ಎಂದೂ ಹೇಳಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ಸಿ.ಟಿ. ರವಿಗೆ ವಯಸ್ಸೇ ಆಗಲ್ಲ, ಏನು ಇದರ ಗುಟ್ಟು!? ಸಿಎಂ ಬೊಮ್ಮಾಯಿ ಪ್ರಶ್ನೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪವರ್ ಇದೆ. ಅದರ ಮೇಯಿನ್ ಜನರೇಟರ್ ಸಿ.ಟಿ. ರವಿಯವರು. ನಾನು ಸಿಟಿ ರವಿ ಅವರನ್ನು 20ಕ್ಕೂ ಹೆಚ್ಚು ವರ್ಷಗಳಿಂದ ನೋಡುತ್ತಿದ್ದೇನೆ. ಸಿ.ಟಿ. ರವಿಗೆ ವಯಸ್ಸೇ ಆಗಲ್ಲ. ಏನು ನಿನ್ನ ಗುಟ್ಟು ಅಂತಾ ಇವತ್ತು ಕೂಡ ಕೇಳ್ದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿ.ಟಿ. ರವಿಯವರನ್ನ ಹಾಡಿ ಹೊಗಳಿದರು.
Published On - 6:43 pm, Wed, 18 May 22