ಚಿಕ್ಕಮಗಳೂರು: ಬಿಜೆಪಿ ಮುಖಂಡನ (BJP leader) ಹತ್ಯೆಯಾಗಿ 5 ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಹಾಗಾಗಿ ಹಂತಕರ ಬಂಧನ ಮಾಡದ ಹಿನ್ನೆಲೆ ಬಿಜೆಪಿ ಮುಖಂಡನ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. 5 ವರ್ಷದ ಹಿಂದೆಯೇ ಬಿಜೆಪಿ ಮುಖಂಡ ಹಾಗೂ ಸಿ.ಟಿ ರವಿ ಆಪ್ತನಾಗಿದ್ದ ಅನ್ವರ್ನನ್ನು ನಗರದ ಗೌರಿ ಕಾಲುವೆ ಬಳಿ ಚಾಕುವಿನಿಂದ 13 ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಹತ್ಯೆಗೊಳಗಾದ ಅನ್ವರ್ ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ.
ಬಿಜೆಪಿ ಸರ್ಕಾರ ಇದ್ದಾಗಲೂ ಸರಿಯಾದ ತನಿಖೆ ನಡೆಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ವರ್ ಹತ್ಯೆ ಪ್ರಕರಣವನ್ನ ಹಿಂದಿನ ಬಿಜೆಪಿ ಸರ್ಕಾರ ಸಿಐಡಿಗೆ ಒಪ್ಪಿಸಿದ್ದರು. 5 ವರ್ಷವಾದರೂ ಹಂತಕರನ್ನು ಬಂಧಿಸಿಲ್ಲ. ಹಾಗಾಗಿ ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ದುರ್ಗದಲ್ಲಿ ಎರಡು ಲಾರಿಗಳ ನಡುವೆ ಡಿಕ್ಕಿ: ಸಹ ಚಾಲಕ ಸೇರಿದಂತೆ 9 ಜಾನುವಾರು ಸಾವು
ಬೆಂಗಳೂರು ಗ್ರಾಮಾಂತರ: ಕಾಲೇಜು ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿ ಸಮೀಪ ಬಂಧಿತನಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆಂಧ್ರದ ಹಿಂದೂಪುರ ಮೂಲದ ಶಿವಪ್ಪ (25) ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಸಮೇತ ಬಂಧಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯ ಬಂಧಿಸಿದ್ದು, 7 ಲಕ್ಷ ರೂಪಾಯಿ ಮೌಲ್ಯದ 9 ಕೆಜಿ 580 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಕೋಲಾರ: ಭೂ ಮಾಫಿಯಾದಲ್ಲಿ ತೊಡಗಿದ್ದ ನಿವೃತ್ತ ಪ್ರೊಫೆಸರ್ 5 ಜನರನ್ನು ಬಂಧಿಸುವ ಮೂಲಕ ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಉಪನ್ಯಾಸಕ ಗೋವಿಂದಪ್ಪ, ಸುರೇಶ್ ಬಾಬು, ಜಯರಾಂ, ದೂರಿ ಪೆಂಚಯ್ಯ, ಆದಿ ನಾರಾಯಣ ಬಂಧಿತರು.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು
ಕೋಲಾರ ತಾಲ್ಲೂಕಿನ ಮಿಟ್ಟಕಲ್, ಕಾಳಹಸ್ತಿಪುರ, ಕುಂಬಾರಹಳ್ಳಿ ಬಳಿಯ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ಮಾರಾಟಕ್ಕೆ ಯತ್ನಿಸಿದ್ದರು. 5 ಜನರ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಕುಂಬಾರಹಳ್ಳಿಯ ಸರ್ವೇ ನಂ 32 ಜಮೀನ ಮಾರಾಟ ಯತ್ನ ವೇಳೆ ಸಿಕ್ಕಿ ಬಿದಿದ್ದಾರೆ. ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.