ತಪ್ಪು ಸೈಜ್​ನ ಶೂ ಡೆಲಿವರಿ ಮಾಡಿದ ಕಂಪನಿ: 10 ಸಾವಿರ ರೂ. ದಂಡ ವಿಧಿಸಿದ ಆಯೋಗ

|

Updated on: Dec 11, 2023 | 7:54 PM

ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೊ ಕಂಪನಿಗೆ 10,000 ರೂಪಾಯಿ ದಂಡ ವಿಧಿಸಿದೆ.

ತಪ್ಪು ಸೈಜ್​ನ ಶೂ ಡೆಲಿವರಿ ಮಾಡಿದ ಕಂಪನಿ: 10 ಸಾವಿರ ರೂ. ದಂಡ ವಿಧಿಸಿದ ಆಯೋಗ
Ajio
Follow us on

ಚಿಕ್ಕಮಗಳೂರು, ಡಿಸೆಂಬರ್​ 11: ಚಿಕ್ಕಮಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು (CDRC) ರಿಲಯನ್ಸ್ ರಿಟೇಲ್ ಲಿಮಿಟೆಡ್ ಒಡೆತನದ ಇ-ಕಾಮರ್ಸ್ ವೆಬ್‌ಸೈಟ್ ಅಜಿಯೊ (Reliance Retail Ltd-owned e-commerce website Ajio) ಕಂಪನಿಗೆ 10,000 ರೂಪಾಯಿ ದಂಡ ವಿಧಿಸಿದೆ. ಅಜಿಯೊ ಕಂಪನಿಯು 9,294 ರೂಪಾಯಿ ಮೌಲ್ಯದ ತಪ್ಪಾದ ಸೈಜ್​ನ Nike ಶೂಗಳನ್ನು ​ನೀಡಿದ್ದಕ್ಕಾಗಿ ಮತ್ತು ನಂತರ ಸರಿಯಾದ ಸೈಜ್​ ಶೂಗಳನ್ನು ಗ್ರಾಹಕರಿಗೆ (Costumer) ನೀಡಲು ನಿರಾಕರಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಹರೀಶ್​ ಎಂಬುವರು ಅಕ್ಟೋಬರ್​ 15 ರಂದು ತಮ್ಮ ಇಬ್ಬರು ಮಕ್ಕಳಿಗೆ Ajio ಆ್ಯಪ್​ನಲ್ಲಿ Nike ಕಂಪನಿಯ ಮೂರು ಜೋಡಿ ಶೂಗಳನ್ನು ಆರ್ಡ್​​ರ್​ ಮಾಡಿದ್ದರು. ಇದಕ್ಕೆ 14,443 ರೂ. ಪಾವತಿಸಿದ್ದರು. ಆದರೆ Nike Air Zoom Vomero ಕಂಪನಿಯು UK-9 ಮತ್ತು UK-8 ನಂಬರ್​ನ ತಪ್ಪು ಸೈಜ್​​ನ ಶೂಗಳನ್ನು ಡೆಲಿವರಿ ಮಾಡಿತು.

ಹೀಗಾಗಿ ಹರೀಶ್​ ಅವರು ಎಕ್ಸ್ಚೇಂಜ್ ಮಾಡುವಂತೆ Ajio ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರು. ಆದರೆ ಕಂಪನಿಯು ಇದಕ್ಕೆ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹರೀಶ್​ ಅವರು ಸಿಡಿಆರ್​ಸಿ ಮೊರೆ ಹೋದರು. ಸೇವಾ ನ್ಯೂನತೆ, ಪರಿಹಾರವಾಗಿ 20,000 ರೂ. ಮತ್ತು ಪಾವತಿಸಿದ್ದ 9,294 ರೂ. ಹಣವನ್ನು ಮರಳಿಸುವಂತೆ ಹರೀಶ್​ ಅವರು ಸಿಡಿಆರ್​ಸಿಯಲ್ಲಿ ದಾವೆ ಹೂಡಿದರು.

ಇದನ್ನೂ ಓದಿ: ಚಿಕನ್​ ಇಲ್ಲದ ಬಿರಿಯಾನಿ ನೀಡಿದ ತಪ್ಪಿಗೆ 1000 ರೂ. ದಂಡ ಕಟ್ಟಿದ ಹೋಟೆಲ್​ ಮಾಲಿಕ

ಸರಿಯಾದ ಗಾತ್ರದೊಂದಿಗೆ ಬೂಟುಗಳನ್ನು ವಿತರಿಸಲು ವಿಫಲವಾದ ಅಜಿಯೊ ತಪ್ಪಿತಸ್ಥವೆಂದು ಕಂಡುಹಿಡಿದಿದೆ. ಹೀಗಾಗಿ Ajio 9,294 ರೂ. ಅನ್ನು ಮರುಪಾವತಿಸಬೇಕು. ಜೊತೆಗೆ 10,000 ರೂ. ಪರಿಹಾರ ಮತ್ತು ದಾವೆ ವೆಚ್ಚಗಳಿಗೆ ವ್ಯಯಿಸಿದ 5,000 ರೂ. ಅನ್ನು ಗ್ರಾಹಕರಿಗೆ ನೀಡಬೇಕು ಎಂದು ಸೂಚಿಸಿದೆ.

ಈ ಮೊತ್ತವನ್ನು ಒಂದು ತಿಂಗಳೊಳಗೆ ನೀಡಬೇಕು. ವಿಫಲವಾದರೆ ಅದು ವಾರ್ಷಿಕ ಶೇ 8 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಎನ್.ಆರ್.ಚೆನ್ನಕೇಶವ ನೇತೃತ್ವದಲ್ಲಿ ಸದಸ್ಯ ಮಂಜುನಾಥ ಎಂ.ಬಮ್ಮನಕಟ್ಟಿ ಅವರನ್ನೊಳಗೊಂಡ ಆಯೋಗ ಈ ಆದೇಶ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:52 pm, Mon, 11 December 23