ಚೈತ್ರಾ ಕುಂದಾಪುರ ವಂಚನೆ: 10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲ್ಯಾನ್‌! ಸಲೂನ್ ಮಾಲೀಕನಿಂದ ಸ್ಪೋಟಕ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 13, 2023 | 3:18 PM

ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಮತ್ತೊಂದು ಮುಖ ಅನಾವರಣವಾಗಿದೆ. ಎಂಎಲ್​ಎ ಟಿಕೆಟ್​​ ಕೊಡಿಸುವದಾಗಿ ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚಿಸಿರುವುದು ಇದೀಗ ಬಟಾಬಯಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಮೂಲದ ಉದ್ಯಮಿ, ಬಿಲ್ಲವ ಮುಖಂಡ ಗೋವಿಂದಬಾಬು ಪೂಜಾರಿಗೆ ಬರೋಬ್ಬರಿ 5 ಕೋಟಿ ರೂ. ವಂಚನೆ ಮಾಡಲಾಗಿದೆ.

ಚೈತ್ರಾ ಕುಂದಾಪುರ ವಂಚನೆ: 10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲ್ಯಾನ್‌! ಸಲೂನ್ ಮಾಲೀಕನಿಂದ ಸ್ಪೋಟಕ ಮಾಹಿತಿ
ಚೈತ್ರಾ ಕುಂದಾಪುರ
Follow us on

ಚಿಕ್ಕಮಗಳೂರು, ಸೆಪ್ಟೆಂಬರ್​ 13: ಹಿಂದೂ ಪರ ವಾಗ್ಮಿ, ಹಲವಾರು ಭಾಷಣಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ (chaitra kundapura) ಇದೀಗ ಮತ್ತೊಂದು ವಿವಾದಲ್ಲಿ ಸಿಲುಕಿಕೊಂಡಿದ್ದಾರೆ. ಎಂಎಲ್​ಎ ಟಿಕೆಟ್ ಕೊಡಿಸುವದಾಗಿ ಉದ್ಯಮಿಯೊಬ್ಬರಿಗೆ ಕೋಟಿ ಕೋಟಿ ವಂಚಿಸಿರುವುದು ಸದ್ಯ ಬಟಾಬಯಲಾಗಿದೆ. 10 ತಿಂಗಳ ಹಿಂದೆಯೇ ಕೋಟಿ ಕೋಟಿ ದೋಚುವ ಪ್ಲಾನ್​ ಮಾಡಲಾಗಿದೆ. ಗೋವಿಂದ ಬಾಬು ಅವರನ್ನ ನಂಬಿಸಲು ಚೈತ್ರ ಕುಂದಾಪುರ ಹಾಗೂ ತಂಡ ನಕಲಿ ನಾಯಕರನ್ನು ಸೃಷ್ಟಿ ಮಾಡಿದ್ದಾರೆ.

ಸಲೂನ್​ನಲ್ಲಿ ಕೆಲಸ ಮಾಡುವವನು, ಕಬಾಬ್ ಅಂಗಡಿಯವನನ್ನು ತೋರಿಸಿ ವಂಚನೆ

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಟ್ಟಣದ ಲಕ್ಷ್ಮೀ ಆಸ್ಪತ್ರೆ ಮುಂಭಾಗದ ಸಲೂನ್ ಶಾಪ್​​ನಲ್ಲಿ ವೇಷಭೂಷಣ ಸಿದ್ದಪಡಿಸಿ ನಕಲಿ RSS ಪ್ರಚಾರಕ ವಿಶ್ವನಾಥ್​​ ನನ್ನು ಸೃಷ್ಟಿಸಿದ್ದಾರೆ. ರಮೇಶ್, ಚನ್ನಾನಾಯ್ಕ್ ಎಂಬುವವರಿಗೆ ವೇಷ ಹಾಕಿಸಲಾಗಿದೆ. ಚನ್ನಾನಾಯ್ಕ್​​ಗೆ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ವೇಷ ತೊಡಿಸಲಾಗಿದೆ.

ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಮನೆಯಲ್ಲಿ ಆಶ್ರಯ ನೀಡಿದ್ದ ಕಾಂಗ್ರೆಸ್ ಮಾಧ್ಯಮ ವಕ್ತಾರೆಗೂ ಸಂಕಷ್ಟ

ಪ್ರಕರಣ ಕುರಿತಾಗಿ ಕಡೂರಿನ ಸಲೂನ್ ಮಾಲೀಕ ರಾಮು ಹೇಳಿಕೆ ನೀಡಿದ್ದು, ನಮ್ಮ ಸಲೂನ್​ಗೆ ಧನರಾಜ್​ ರೆಗ್ಯುಲರ್ ಕಸ್ಟಮರ್. 8.30 ರ ಸುಮಾರಿಗೆ ನಮ್ಮ ಸಲೂನ್​ಗೆ ಬಂದಿದ್ದರು. ಒಂದು ಫೋಟೋ ತೋರಿಸಿ ಇದೆ ತರಹ ಕಟಿಂಗ್, ಕಲರ್ ಮಾಡುವಂತೆ ಹೇಳಿದರು. ಫೋಟೋದಲ್ಲಿ ಇರುವಂತೆ ನಾನೇ ಕಟಿಂಗ್ ಮಾಡಿದ್ದು‌, ಬೆಳಗ್ಗೆ ಅರ್ಜೆಂಟ್ ಮೀಟಿಂಗ್ ಇದೆ ಎಂದು ಕಟ್ಟಿಂಗ್ ಮಾಡಿಸಿದ್ದರು. ಅವರು ಯಾರನ್ನೋ ಕರೆದುಕೊಂಡು ಬಂದು ಅವರಿಗೂ ಕಟಿಂಗ್ ಮಾಡಿಸಿದರು.

10 ತಿಂಗಳ ಹಿಂದೆಯೇ ನಡೆದಿತ್ತು ಖತರ್ನಾಕ್​ ಪ್ಲ್ಯಾನ್​

10 ತಿಂಗಳ ಹಿಂದೆಯೇ ಕೋಟಿ ಕೋಟಿ ಹಣ ದೋಚಲು ಗ್ಯಾಂಗ್ ಸಂಚು ರೂಪಿಸಿದೆ. ಸಂಘ ಪರಿವಾರದ ಪ್ರಮುಖರ ಜೊತೆ ಸಂಪರ್ಕವಿದೆ ಎಂದು ಚೈತ್ರಾ ತೋರಿಸಿಕೊಂಡಿದ್ದಾರೆ. ಬೈಂದೂರು ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಚಿಕ್ಕಮಗಳೂರಿನ ಸರ್ಕಾರಿ ಅತಿಥಿಗೃಹದಲ್ಲಿ ಗಗನ್ ಕಡೂರು ಪರಿಚಯಿಸಿದ್ದರು. ಪ್ರಧಾನಿ, ಗೃಹ ಸಚಿವಾಲಯದ ಜೊತೆ ನಿಕಟ ಸಂಬಂಧವಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಉಡುಪಿ ಕೃಷ್ಣ ಮಠದ ಬಳಿ ಸಿಕ್ಕ ಚೈತ್ರಾ ಕುಂದಾಪುರ, ಬಂಧನದ ವೇಳೆ ಹೈಡ್ರಾಮಾ

ಸಾಕಷ್ಟು ಪೂರ್ವಸಿದ್ಧತೆ ನಡೆಸಿಯೇ ಕಣಕ್ಕಿಳಿದಿದ್ದ ಚೈತ್ರಾ ಕುಂದಾಪುರ & ಗ್ಯಾಂಗ್, ಸಲೂನ್​ನಲ್ಲಿ ಕೆಲಸ ಮಾಡುವವನು, ಕಬಾಬ್ ಅಂಗಡಿಯವನನ್ನು ತೋರಿಸಿ ವಂಚನೆ ಮಾಡಿದ್ದಾರೆ. ಸಂಘದ ವಿಶ್ವನಾಥ್​ಜೀ ಎನ್ನುವ ಹೆಸರನ್ನು ಪದೇಪದೆ ಹೇಳುತ್ತಿದ್ದ ಚೈತ್ರಾ ಕುಂದಾಪುರ, ಉದ್ಯಮಿ ಗೋವಿಂದಬಾಬು ಪೂಜಾರಿಯನ್ನು ಮರುಳು ಮಾಡಿದ್ದಾರೆ.

ಉದ್ಯಮಿಯನ್ನು ಬಲೆಗೆ ಹಾಕಿಕೊಳ್ಳಲು ಸಹಾಯಕ ಪ್ರಸಾದ್ ಎನ್ನುವವರನ್ನು ಚೈತ್ರಾ ನೆರವು ಪಡೆದಿದ್ದಾರೆ. ಹಣ ಕೈಸೇರಿದ ನಂತರ ವಿಶ್ವನಾಥ್ ಜೀ ಮೃತಪಟ್ಟರು ಎಂದು ಕಥೆ ಕಟ್ಟಿ ನಂಬಿಸಿದ್ದರು. ದೊಡ್ಡಮಟ್ಟದಲ್ಲಿ ಸಂಪರ್ಕವಿರುವ ನಾಯಕಿ ಎಂದು ನಂಬಿಸಿದ್ದ ಪ್ರಸಾದ್ ಬೈಂದೂರು, ಪ್ರತಿಭಾಷಣದಲ್ಲೂ ಗೋವಿಂದಬಾಬು ಹೊಗಳಿ ಅಟ್ಟಕೇರಿಸುತ್ತಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.