ಚಿಕ್ಕಮಗಳೂರು: ತಾಲೂಕಿನ ಕೆ.ಬಿ.ಹಾಳ್ ಗ್ರಾಮದ ಬಸವರಾಜ್ ಎನ್ನುವವರ ಕುಟುಂಬಕ್ಕೆ ಶಾಲೆಯ ಜಾಗವನ್ನ ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಗ್ರಾಮಸ್ಥರು ಮನೆ ಕಟ್ಟುವುದಕ್ಕೂ ಬಿಡದೆ ಮನೆಗೆ ಹೋಗದಂತೆ ಬಹಿಷ್ಕಾರ ಹಾಕಿದ್ದಾರೆ. ಮನೆಯ ಕಾಂಪೌಂಡ್ ಒಡೆದು ಹಾಕಿದ ಗ್ರಾಮಸ್ಥರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನೀರಿನ ಪೈಪ್ಗಳನ್ನ ಒಡೆದು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಮಹಿಳೆಯರ ಮೇಲೆಯೂ ಹಲ್ಲೆ ಮಾಡಲಾಗಿದೆ.
ಇನ್ನು 1977-78ರಲ್ಲಿ ಊರಿಗೆ ಟ್ಯಾಂಕ್ ಕಟ್ಟುವುದಕ್ಕೆ ಇದೇ ಕುಟುಂಬ ಜಾಗವನ್ನ ದಾನ ಮಾಡಿದ್ದರು. ಟ್ಯಾಂಕ್ ಕಟ್ಟಿ ಉಳಿದ ಜಾಗದಲ್ಲಿ ಮನೆ ನಿರ್ಮಿಸಿದ್ದಾರೆ. ಈಗ ಮನೆ ಇರುವ ಜಾಗ ಶಾಲೆಗೆ ಸೇರಬೇಕೆಂದು ಊರಿನ ಜನ ಕಿರಿಕ್ ಮಾಡಲು ಶುರು ಮಾಡಿದ್ದಾರೆ. ಇದೀಗ ಮನೆ ಕಟ್ಟೋಕು ಆಗದೆ ವಾಸ ಮಾಡುವುದಕ್ಕೂ ಆಗದೆ ಕುಟುಂಬಸ್ಥರು ಕಂಗಾಲಾಗಿದ್ದು, ಊರಿನ ಗ್ರಾಮಸ್ಥರು ನಮ್ಮ ಮೇಲೆ ದ್ವೇಷ ಮಾಡುತ್ತಿದ್ದಾರೆಂದು ನೊಂದ ಕುಟುಂಬ ಆರೋಪ ಮಾಡಿದ್ದಾರೆ.
ಬೆಂಗಳೂರು ನಗರದ ವುಡನ್ ಶಾಪ್‌ನಲ್ಲಿ ಅಗ್ನಿ ಅವಘಡ
ಬೆಂಗಳೂರು: ನಗರದ ಕೊಡಿಗೆಹಳ್ಳಿಯ ವುಡನ್ ಶಾಪ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎರಡು ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಇನ್ನು ಈ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ