ಚಿಕ್ಕಮಗಳೂರು: ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ಆರೋಪ; ಪೋಷಕರಿಂದ ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 05, 2024 | 3:23 PM

ಚಿಕ್ಕಮಗಳೂರು ನಗರದಲ್ಲಿ ಕಾಫಿ ಗೋಡನ್​ನಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಕಾರಣವೇ ಇಲ್ಲದೆ ಶಿಕ್ಷಕಿ ದೀಪಾ ಎಂಬುವವರು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದರಂತೆ, ಇದರಿಂದ ಗಾಯಗೊಂಡಿರುವ ಮಕ್ಕಳು ಶಾಲೆಯಲ್ಲಿ ಕಣ್ಣೀರು ಹಾಕುತ್ತಿದ್ದು, ಶಿಕ್ಷಕಿ ವಿರುದ್ಧ 40 ಮಕ್ಕಳು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚಿಕ್ಕಮಗಳೂರು: ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ಆರೋಪ; ಪೋಷಕರಿಂದ ಆಕ್ರೋಶ
ಚಿಕ್ಕಮಗಳೂರಿನ ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ಆರೋಪ
Follow us on

ಚಿಕ್ಕಮಗಳೂರು, ಮಾ.05: ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ಗಂಭೀರ ಆರೋಪ ಚಿಕ್ಕಮಗಳೂರಿನ ಅಂಬೇಡ್ಕರ್ ವಸತಿ ಶಾಲೆ(Ambedkar Residential school)ಯಲ್ಲಿ ಕೇಳಿಬಂದಿದೆ. ಈ ಹಿನ್ನಲೆ ಪೋಷಕರಿಂದ ಶಿಕ್ಷಕಿ ದೀಪಾ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತವಾಗಿದೆ. ಕಾರಣವೇ ಇಲ್ಲದೆ ಶಿಕ್ಷಕಿ ದೀಪಾ ಎಂಬುವವರು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದರಂತೆ, ಇದರಿಂದ ಗಾಯಗೊಂಡಿರುವ ಮಕ್ಕಳು ಶಾಲೆಯಲ್ಲಿ ಕಣ್ಣೀರು ಹಾಕುತ್ತಿದ್ದು, ಶಿಕ್ಷಕಿ ವಿರುದ್ಧ 40 ಮಕ್ಕಳು ಸೇರಿದಂತೆ ಪೋಷಕರು ಲಿಖಿತ ದೂರು ನೀಡಿದ್ದಾರೆ.

ಇನ್ನು ಗಂಭೀರ ದೂರು ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಶಿಕ್ಷಕಿ ಅಮಾನತ್ತಿಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮತ್ತೊಂದು ಕಡೆ ಮೂಲಭೂತ ಸೌಕರ್ಯವಿಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಒಂದೇ ಕೊಠಡಿಯಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ
ಸಾಮಗ್ರಿಗಳ ಜೊತೆ ಚಾಪೆಯ ಮೇಲೆ ಮಲಗುತ್ತಿದ್ದಾರೆ.

ಇದನ್ನೂ ಓದಿ:ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ; ಮುಸ್ಲಿಂ ಬಾಲಕನಿಗೆ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದ ಉತ್ತರ ಪ್ರದೇಶದ ಶಿಕ್ಷಕಿಯಿಂದ ಸಮರ್ಥನೆ

ಕಾಫಿ ಗೋಡೋನ್ ನಲ್ಲಿ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ಮರೀಚಿಕೆ

ವಸತಿ ಶಾಲೆ ನಡೆಸಲು ಅಧಿಕಾರಿಗಳು, ಕಾಫಿ ಗೋಡೋನ್​ನನ್ನು ತಿಂಗಳಿಗೆ 1.93 ಲಕ್ಷಕ್ಕೆ ಬಾಡಿಗೆ ಪಡೆದಿದ್ದಾರೆ. ಆದರೆ, ಇಲ್ಲಿ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ಮರೀಚಿಕೆ ಆಗಿದೆ. ಈ ಮಧ್ಯೆ ವಿದ್ಯಾರ್ಥಿಗಳಿಗೆ  ಶಿಕ್ಷಕಿಯಿಂದ ಹಲ್ಲೆ, ಇದರಿಂದ ಮೂಲಭೂತ ಸೌಕರ್ಯ ಸೇರಿದಂತೆ ಹಲ್ಲೆ ಮಾಡಿರುವ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಹಲ್ಲೆ ಸಂಬಂಧಿಸಿದಂತೆ ಶಿಕ್ಷಕಿ ವಿರುದ್ಧ ವಾರ್ಡನ್ ಚಿಕ್ಕಮಗಳೂರು ನಗರ ಪೊಲೀಸ್ ‌ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಂಬೇಡ್ಕರ್ ಶಾಲೆಯ ಶಿಕ್ಷಕಿ ಮತ್ತು ಸಿಬ್ಬಂದಿ ನಡುವೇ ಕಿತ್ತಾಟ

ವಿದ್ಯಾರ್ಥಿಗಳಿಗೆ ಶಿಕ್ಷಕಿಯಿಂದ ಚಿತ್ರಹಿಂಸೆಯ ಆರೋಪಕ್ಕೆ ಟ್ವೀಸ್ಟ್​ ಸಿಕ್ಕಿದೆ. ಶಿಕ್ಷಕಿ ದೀಪಾ ವರ್ಸಸ್ ರೇಖಾ ನಡುವಿನ ಗಲಾಟೆಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಸಹಾಯಕ ವಾರ್ಡನ್ ರೇಖಾ ಎಂಬುವವರೊಂದಿಗೆ ಆತ್ಮೀಯವಾಗಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾತ್ರ ಶಿಕ್ಷಕಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Tue, 5 March 24