ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ; ಮುಸ್ಲಿಂ ಬಾಲಕನಿಗೆ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದ ಉತ್ತರ ಪ್ರದೇಶದ ಶಿಕ್ಷಕಿಯಿಂದ ಸಮರ್ಥನೆ

ಇದು ಸಣ್ಣ ವಿಚಾರ ಎಂದು ನಾನು ರಾಜಕಾರಣಿಗಳಿಗೆ ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಸೇರಿದಂತೆ ನಾಯಕರು ಟ್ವೀಟ್ ಮಾಡಿದ್ದಾರೆ, ಆದರೆ ಟ್ವೀಟ್ ಮಾಡುವುದು ಅಷ್ಟು ದೊಡ್ಡ ವಿಷಯವಲ್ಲ. ಈ ರೀತಿಯ ದೈನಂದಿನ ವಿಷಯಗಳನ್ನು ವೈರಲ್ ಮಾಡಿದರೆ ಶಿಕ್ಷಕರು ಹೇಗೆ ಕಲಿಸುತ್ತಾರೆ ಎಂದು ಅವರು ಹೇಳಿದರು. ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಜರಾಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ

ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ; ಮುಸ್ಲಿಂ ಬಾಲಕನಿಗೆ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದ ಉತ್ತರ ಪ್ರದೇಶದ ಶಿಕ್ಷಕಿಯಿಂದ ಸಮರ್ಥನೆ
ತ್ರಿಪ್ತ ತ್ಯಾಗಿ
Follow us
ರಶ್ಮಿ ಕಲ್ಲಕಟ್ಟ
|

Updated on: Aug 26, 2023 | 8:42 PM

ದೆಹಲಿ ಆಗಸ್ಟ್ 26: ಉತ್ತರ ಪ್ರದೇಶದ(Uttar Pradesh) ಶಾಲೆಯೊಂದರಲ್ಲಿ ಮುಸ್ಲಿಂ (Muslim) ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿ ಅವರ ಕೈಯಿಂದ ಏಟು ತಿನ್ನುತ್ತಿರುವ ಬಾಲಕನ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಆ ತರಗತಿಯ ಶಿಕ್ಷಕಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಇದೊಂದು ಸಣ್ಣ ವಿಚಾರ ಎಂದು ಆಕೆ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಘಟನೆಯಲ್ಲಿ ಯಾವುದೇ ಕೋಮುವಾದಿ ಕೋನವನ್ನು ನಿರಾಕರಿಸಿದ ತ್ರಿಪ್ತ ತ್ಯಾಗಿ, ಹುಡುಗ ತನ್ನ ಹೋಮ್ ವರ್ಕ್ ಮಾಡದ ಕಾರಣ ಕೆಲವು ವಿದ್ಯಾರ್ಥಿಗಳಲ್ಲಿ ಕಪಾಳಮೋಕ್ಷ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು. “ಮಗುವಿನ ಪೋಷಕರಿಂದ ಅವನೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವಂತೆ ಒತ್ತಡವಿತ್ತು. ನನಗೆ ಅಂಗವೈಕಲ್ಯತೆ ಇದೆ. ಆದ್ದರಿಂದ ಅವ ಹೋಮ್ ವರ್ಕ್ ಮಾಡಲಿ ಎಂದು ನಾನು ಕೆಲವು ವಿದ್ಯಾರ್ಥಿಗಳಲ್ಲಿ ಅವನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದೆ ಎಂದು ಅವರು ಹೇಳಿದರು.

ಇದು ಧರ್ಮದ ಮೇಲಿನ ದ್ವೇಷ ಎಂದು ತೋರಿಸುವುದಕ್ಕಾಗಿ ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಮಗುವಿನ ಸೋದರಸಂಬಂಧಿ ತರಗತಿಯಲ್ಲಿ ಕುಳಿತಿದ್ದರು. ಅವರು ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ, ನಂತರ ಅದನ್ನು ಎಡಿಟ್ ಮಾಡಲಾಗಿದೆ ಎಂದು ಅವರು ವಿಡಿಯೊದಲ್ಲಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದನ್ನು ಉಲ್ಲೇಖಿಸಿದ್ದಾರೆ.

ವಿಡಿಯೊ ಕ್ಲಿಪ್ ವೈರಲ್ ಆದ ನಂತರ ಇದು “ಸಣ್ಣ ವಿಚಾರ” ಎಂದು ಹೇಳಿ ತ್ಯಾಗಿ ಕ್ಷಮೆ ಕೇಳಿದ್ದಾರೆ. “ಇದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ, ಆದರೆ ಇದು ಅನಗತ್ಯವಾಗಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.

ಇದು ಸಣ್ಣ ವಿಚಾರ ಎಂದು ನಾನು ರಾಜಕಾರಣಿಗಳಿಗೆ ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಸೇರಿದಂತೆ ನಾಯಕರು ಟ್ವೀಟ್ ಮಾಡಿದ್ದಾರೆ, ಆದರೆ ಟ್ವೀಟ್ ಮಾಡುವುದು ಅಷ್ಟು ದೊಡ್ಡ ವಿಷಯವಲ್ಲ. ಈ ರೀತಿಯ ದೈನಂದಿನ ವಿಷಯಗಳನ್ನು ವೈರಲ್ ಮಾಡಿದರೆ ಶಿಕ್ಷಕರು ಹೇಗೆ ಕಲಿಸುತ್ತಾರೆ ಎಂದು ಅವರು ಹೇಳಿದರು.

ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಜರಾಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ. “ಪೋಷಕರು ಆರಂಭದಲ್ಲಿ ದೂರು ನೀಡಲು ಒಪ್ಪಲಿಲ್ಲ ಆದರೆ ಇಂದು ಬೆಳಿಗ್ಗೆ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಂಗಾರಿ ಹೇಳಿದರು.

ಇದನ್ನೂ ಓದಿ: ಉತ್ತರ ಪ್ರದೇಶ: ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಮಕ್ಕಳಿಗೆ ಸೂಚಿಸಿದ ಶಿಕ್ಷಕಿ, ಇದು ಕೋಮುವಾದ ಎಂದ ನೆಟ್ಟಿಗರು

ಮಕ್ಕಳ ಕಲ್ಯಾಣ ಸಮಿತಿಯು ಮಗು ಮತ್ತು ಅವನ ಪೋಷಕರಿಗೆ ಸಲಹೆ ನೀಡಿದೆ ಎಂದು ಬಂಗಾರಿ ಹೇಳಿದ್ದಾರೆ.”ನನ್ನ ಮಗನಿಗೆ 7 ವರ್ಷ. ಈ ಘಟನೆ ಆಗಸ್ಟ್ 24 ರಂದು ಸಂಭವಿಸಿದೆ. ಶಿಕ್ಷಕರು ನನ್ನ ಮಗುವಿಗೆ ಪದೇ ಪದೇ ಥಳಿಸಿದ್ದಾರೆ. ನನ್ನ ಮಗನಿಗೆ ಒಂದು ಅಥವಾ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ಅವನು ಭಯಗೊಂಡಿದ್ದಾನೆ” ಎಂದು ಮಗುವಿನ ತಂದೆ ಇಂದು ಹೇಳಿದರು.

ಶಾಲೆಯ ವಿರುದ್ಧ ಆರೋಪ ಹೊರಿಸುವುದಿಲ್ಲ ಎಂದು ಬಾಲಕನ ತಂದೆ ನಿನ್ನೆ ಹೇಳಿದ್ದರು, ಆದರೆ ಇನ್ನು ಮುಂದೆ ತನ್ನ ಮಗುವನ್ನು ಈ ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷಾತೀತವಾಗಿ  ರಾಜಕಾರಣಿಗಳು ಕೂಡ ಘಟನೆಯನ್ನು ದ್ವೇಷದ ಅಪರಾಧ ಎಂದು ಖಂಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್