ಬಾಹ್ಯಾಕಾಶಕ್ಕೆ ಸ್ತ್ರೀ ರೋಬೋಟ್ ವ್ಯೋಮ್​​ಮಿತ್ರ ಕಳಿಸಲು ಸರ್ಕಾರ ಚಿಂತನೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಸಾಂಕ್ರಾಮಿಕ ರೋಗದಿಂದಾಗಿ ಗಗನ್‌ಯಾನ್‌ ಯೋಜನೆಯು ವಿಳಂಬವಾಗಿದೆ. ಈಗ ನಾವು ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಮೊದಲ ಪ್ರಾಯೋಗಿಕ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದೇವೆ. ಗಗನಯಾತ್ರಿಗಳನ್ನು ಮರಳಿ ಕರೆತರುವುದು ಅವರನ್ನು ಕಳುಹಿಸುವಷ್ಟೇ ಮುಖ್ಯವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಬಾಹ್ಯಾಕಾಶಕ್ಕೆ ಸ್ತ್ರೀ ರೋಬೋಟ್ ವ್ಯೋಮ್​​ಮಿತ್ರ ಕಳಿಸಲು ಸರ್ಕಾರ ಚಿಂತನೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 26, 2023 | 7:29 PM

ದೆಹಲಿ ಆಗಸ್ಟ್ 26: ಭಾರತವು ಗಗನ್‌ಯಾನ್‌ ಮಿಷನ್‌ನಲ್ಲಿ  (Gaganyaan mission)ಮಹಿಳಾ ರೋಬೋಟ್ ” ವ್ಯೋಮ್​​ಮಿತ್ರ “(Vyommitra) ಅನ್ನು ಕಳುಹಿಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh) ಎನ್‌ಡಿಟಿವಿ ಜಿ20 ಕಾನ್ಕ್ಲೇವ್‌ನಲ್ಲಿ ತಿಳಿಸಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಾಯೋಗಿಕ ಬಾಹ್ಯಾಕಾಶ ಹಾರಾಟವನ್ನು ಪ್ರಯತ್ನಿಸಲಾಗುವುದು. ನಂತರದ ಕಾರ್ಯಾಚರಣೆಯಲ್ಲಿ ಮಹಿಳಾ ರೋಬೋಟ್ “ವ್ಯೋಮ್​​ಮಿತ್ರ” ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಗಗನ್‌ಯಾನ್‌ ಯೋಜನೆಯು ವಿಳಂಬವಾಗಿದೆ. ಈಗ ನಾವು ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಮೊದಲ ಪ್ರಾಯೋಗಿಕ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದೇವೆ. ಗಗನಯಾತ್ರಿಗಳನ್ನು ಮರಳಿ ಕರೆತರುವುದು ಅವರನ್ನು ಕಳುಹಿಸುವಷ್ಟೇ ಮುಖ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಎರಡನೇ ಕಾರ್ಯಾಚರಣೆಯಲ್ಲಿ, ಮಹಿಳಾ ರೋಬೋಟ್ ಇರುತ್ತದೆ. ಅವರು ಎಲ್ಲಾ ಮಾನವ ಚಟುವಟಿಕೆಗಳನ್ನು ಅನುಕರಿಸುತ್ತಾರೆ. ಎಲ್ಲವೂ ಪರಿಪೂರ್ಣವಾಗಿದ್ದರೆ, ನಾವು ಮುಂದುವರಿಯಬಹುದು ಎಂದಿದ್ದಾರೆ ಸಿಂಗ್.

ಚಂದ್ರಯಾನ-3 ಲ್ಯಾಂಡರ್ ಅಂತಿಮವಾಗಿ ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಪರ್ಶಿಸಿದ ಹೊತ್ತಿನ ಅನುಭವವನ್ನು ವಿವರಿಸಿದ ಅವರು ಇಸ್ರೋ ತಂಡದೊಂದಿಗೆ ನಿಕಟ ಸಂಬಂಧ ಹೊಂದಿರುವವರು, ನಾವು ಆತಂಕಗೊಂಡಿದ್ದೆವು. ಚಂದ್ರಯಾನ-3 ನೌಕೆಯು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಹೊರಟಾಗ ನನ್ನ ಮೊದಲ ಆತಂಕದ ಕ್ಷಣವಾಗಿತ್ತು.ಲ್ಯಾಂಡಿಂಗ್ ತುಂಬಾ ಸುಗಮವಾಗಿತ್ತು ಎಂದು ಸಿಂಗ್ ಹೇಳಿದ್ದಾರೆ. ಚಂದ್ರನ ಇಳಿಯುವಿಕೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ದೇಶದ ಪ್ರಯಾಣದಲ್ಲಿ ಕ್ವಾಂಟಮ್ ಜಿಗಿತವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿಯವರ ಭಾಷಣಗಳ ಸಂಕಲನಸಬ್​​​ ಕಾ ಸಾಥ್, ಸಬ್​​​ ಕಾ ವಿಕಾಸ್, ಸಬ್​​​ ಕಾ ವಿಶ್ವಾಸ್ ಸಂಚಿಕೆ 2 ಮತ್ತು 3 ಬಿಡುಗಡೆ

“ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರವನ್ನು ಚುರುಕುಗೊಳಿಸಿದ್ದರಿಂದ ಇದು ಸಂಭವಿಸಿದೆ. ಸುಮಾರು 2019 ರವರೆಗೆ ಶ್ರೀಹರಿಕೋಟಾದ ಗೇಟ್‌ಗಳನ್ನು ಮುಚ್ಚಲಾಗಿತ್ತು, ಆದರೆ ಈ ಬಾರಿ ಮಾಧ್ಯಮಗಳು ಮತ್ತು ಶಾಲಾ ಮಕ್ಕಳನ್ನು ಆಹ್ವಾನಿಸಲಾಗಿದೆ. ಈ ಬಾರಿ ಅದು ಜನರ ಒಡೆತನದಲ್ಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ಅದೇ ವೇಳೆ ಬಾಹ್ಯಾಕಾಶ ಯೋಜನೆಗಳಿಗೆ ಧನಸಹಾಯವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರವಾಗಿದೆ. ಯುಎಸ್ಎಸ್ಆರ್, ಯುಎಸ್ ಮತ್ತು ಚೀನಾ ನಂತರ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡರ್ ಅನ್ನು ಇಳಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್