ತಿಳಿಯದೆ ತಪ್ಪು ಮಾಡಿದ ನಮ್ಮನ್ನು ತಿದ್ದಿದ ಪೊಲೀಸ್ ಅಧಿಕಾರಿಗಳಿಗೆ ಚಿರಋಣಿಯಾಗಿದ್ದೇನೆ: ವಿನಯ್ ಗೌಡ
ವಿಡಿಯೋದಲ್ಲಿ ವಿನಯ್ ತಮ್ಮ ಅಭಿಮಾನಿಗಳ ಕ್ಷಮೆಯನ್ನೂ ಕೇಳಿದ್ದಾರೆ ಮತ್ತು ತಾನು 18 ಸೆಕೆಂಡುಗಳ ರೀಲ್ಸ್ ಗಾಗಿ ಬಳಸಿದ ಮಚ್ಚು ಫೈಬರ್ದ್ದಾಗಿತ್ತು, ಅದು ಅಸಲಿಗೆ ತನಗೆ ಸೇರಿದ ಪ್ರಾಪರ್ಟಿಯಾಗಿರಲಿಲ್ಲ ಎಂದಿದ್ದಾರೆ. ರಜತ್ ಗೆ ಮಚ್ಚು ನೀಡಿದ್ದರೆ ಪುಷ್ಪಾ ಕ್ಯಾರೆಕ್ಟರ್ ಅಗಿದ್ದ ತನಗೆ ಕೊಟ್ಟ ಪ್ರಾಪರ್ಟಿ ಪಾನ್ ಬೀಡಾ ಆಗಿತ್ತು; ಅದೇನೇ ಆಗಿರಲಿ, ತನ್ನೊಂದಿಗೆ ನಿಂತು ಪ್ರೀತಿ ವಿಶ್ವಾಸಗಳನ್ನು ತೋರಿದ ಅಭಿಮಾನಿಗಳಿಗೆ ಕೃತಜ್ಞತೆಗಳು ಅಂತ ವಿನಯ್ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 29: ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಬಿಗ್ ಬಾಸ್ ಸ್ಪರ್ಧಿ ಮತ್ತು ನಟ ವಿನಯ್ ಗೌಡ ವಿಡಿಯೋವೊಂದನ್ನು ರಿಲೀಸ್ ಮಾಡಿ ಕೆಲ ಸ್ಪಷ್ಟನೆಗಳನ್ನು ನೀಡಿದ್ದಾರೆ. ಸೆಲಿಬ್ರಿಟಿಗಳು ಅನ್ನುವ ಕಾರಣಕ್ಕೆ ಪೊಲೀಸರು ತಮಗೆ ಸ್ಪೆಷಲ್ ಟ್ರೀಟ್ಮೇಂಟ್ ಏನೂ ನೀಡಿಲ್ಲ, ಸಾಮಾನ್ಯ ಅರೋಪಿಗಳಂತೆಯೇ ಟ್ರೀಟ್ ಮಾಡಲಾಗಿದೆ, ಪೊಲೀಸರು ತಮ್ಮಿಂದ ಹಣ ಪಡೆದರು ಅನ್ನೋದು ಶುದ್ಧ ಸುಳ್ಳು, ಅಸಲಿಗೆ ತಿಳಿಯದೆ ತಪ್ಪು ಮಾಡಿದ ತಮ್ಮನ್ನು ತಿದ್ದಿ ತೀಡಿದ ಎಸಿಪಿ ಚಂದನ್, ಚಿಕ್ಕಸ್ವಾಮಿ ಸರ್ ಮತ್ತು ತಿಪ್ಪೇಸ್ವಾಮಿ ಸರ್ಗೆ ಧನ್ಯವಾದ ಹೇಳುತ್ತೇನೆ ಎಂದು ವಿನಯ್ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ