WITT Summit 2025: ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ, ಆದರೆ ಅದನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ: ಅನಿಲ್ ಅಗರ್ವಾಲ್
ದೇಶದಲ್ಲಿ ಸಾಕಷ್ಟು ತೈಲ, ಅನಿಲ ಮತ್ತು ಚಿನ್ನದ ನಿಕ್ಷೇಪಗಳಿವೆ, ಅವುಗಳನ್ನು ಪತ್ತೆಹಚ್ಚಿ ಕೊರೆಯಬೇಕಾಗಿದೆ ಎಂದು ಹೇಳಿದರು. ಗಣಿಗಾರಿಕೆ ಭಾರತದಲ್ಲಿ ಪ್ರಾರಂಭವಾದರೆ, ತೈಲ, ಅನಿಲ ಮತ್ತು ಚಿನ್ನಕ್ಕಾಗಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಅದಕ್ಕಾಗಿ ನಾವು ಮೊದಲು ಅದನ್ನು ಸರಿಯಾಗಿ ಉಪಯೋಗಿಸಬೇಕು ಎಂದು ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಹೇಳಿದ್ದಾರೆ.
ದೆಹಲಿ, ಮಾ.29: ಟಿವಿ9 ನೆಟ್‌ವರ್ಕ್‌ನ ಜಾಗತಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ 2025 ರ (what india thinks today) ಮೂರನೇ ಆವೃತ್ತಿಯ ಎರಡನೇ ದಿನದಂದು ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಉದ್ಯಮಶೀಲತೆ ಸಂವಾದದಲ್ಲಿ ಪ್ರಧಾನ ಮಂತ್ರಿ ಮೋದಿ ಭಾಗವಹಿಸಿದ್ದರು. ಅಲ್ಲಿ ಅವರು ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಖನಿಜಗಳು ದೇಶದಲ್ಲಿವೆ ಎಂದು ಹೇಳಿದರು.ಈ ವೇಳೆ ಈ ಖನಿಜಗಳನ್ನು ಹೇಗೆ ಹೊರತೆಗೆಯಬಹುದು ಎಂಬುದನ್ನು ಅವರು ವಿವರಿಸಿದರು.ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ, ಆದರೆ ಇದರ ಹೊರತಾಗಿಯೂ ನಾವು ತೈಲ, ಅನಿಲ, ಚಿನ್ನ ಮತ್ತು ಇತರ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತೇವೆ ಎಂದು ಅನಿಲ್ ಅಗರ್ವಾಲ್ ಹೇಳಿದರು. ದೇಶದಲ್ಲಿ ಗಣಿಗಾರಿಕೆ ಆರಂಭವಾದರೆ ದೇಶವು ಇತರ ದೇಶಗಳನ್ನು ಅವಲಂಬಿಸಬೇಕಾಗಿಲ್ಲ ಎಂದು ಅವರು ಹೇಳಿದರು. ಇದರೊಂದಿಗೆ, ಅನಿಲ್ ಅಗರ್ವಾಲ್ ಗಣಿಗಾರಿಕೆ ವ್ಯವಹಾರವನ್ನು ಪ್ರಾರಂಭಿಸಿದಾಗ, ಪರಿಸರವಾದಿಗಳು ಮತ್ತು ಅನೇಕ ಕಾರ್ಯಕರ್ತರು ಅವರಿಗೆ ಕಿರುಕುಳ ನೀಡಿದರು ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೆಸಲ ಮುಂದುವರಿಸಿದ್ದೇನೆ, ಅದಕ್ಕೆ ಇವತ್ತು ಇದೇ ಜನರು ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ