AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್

WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್

ಅಕ್ಷಯ್​ ಪಲ್ಲಮಜಲು​​
|

Updated on:Mar 29, 2025 | 5:32 PM

ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಭಾರತದ ಪರವಾಗಿ ಮಾತನಾಡಿದ್ದಾರೆ. ಭಾರತ ಶಾಂತಿ ದಾರಿಯಲ್ಲಿದೆ ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ ಎಂದು ಹೇಳಿದರು. ಭಾರತಕ್ಕೆ ಶಾಶ್ವತ ಸದಸ್ಯತ್ವ ಬೇಕು ಎಂದು ಹೇಳಿದರು.

ದೆಹಲಿ, ಮಾ.29: ನವದೆಹಲಿಯಲ್ಲಿ ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (TV9’s What India Thinks Today) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ (Abdullah Shahid), ಯುದ್ಧದ ನಡುವೆ, ವಿಶ್ವಸಂಸ್ಥೆಯ ರಚನೆಯಲ್ಲಿ ಬದಲಾವಣೆಯ ಬೇಡಿಕೆ ಮತ್ತೆ ಮುಖ್ಯಾಂಶಗಳಲ್ಲಿದೆ. ವಿಶ್ವಸಂಸ್ಥೆ ಇನ್ನು ಮುಂದೆ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದರು. ಅದರೊಳಗೆ ಬದಲಾವಣೆ ಆಗಬೇಕು. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಬಹಳಷ್ಟು ಅಸ್ಥಿರತೆ ಮತ್ತು ಅವ್ಯವಸ್ಥೆ ಇದೆ. ವಿಶ್ವಸಂಸ್ಥೆಯನ್ನು ಈ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಗಿದ್ದರೂ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ಭಾರತ ಯಾವಾಗಲೂ ಶಾಂತಿಯ ಪರವಾಗಿದೆ. ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ.ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ವೇಗಗೊಳಿಸಲು ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಇನ್ನು ಜಗತ್ತಿನಲ್ಲಿ ಆಂತರಿಕ ಸಂಘರ್ಷಗಳು ಮುಂದುವರೆದಿವೆ. ಯುರೋಪ್ ಜೊತೆ ನೇರ ಸಂಪರ್ಕ ಹೊಂದಿರದ ವಿಶ್ವದ ದೇಶಗಳನ್ನು ವಿಶ್ವಸಂಸ್ಥೆ ನಿರ್ಲಕ್ಷಿಸಿದೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 29, 2025 05:07 PM