Karnataka Breaking Kannada Highlights: 91ನೇ ವಯಸ್ಸಿನಲ್ಲೂ ಹಲವು ಸಮಸ್ಯೆ ಕಣ್ಣು ಮುಂದೆ ಬರುತ್ತೆ: ನಾಳೆ ಸುದ್ದಿಗೋಷ್ಠಿ ಕರೆದ ಹೆಚ್.ಡಿ.ದೇವೇಗೌಡ
Mann Ki Baat 104th Episode Highlights Updates: ಕರ್ನಾಟಕದಲ್ಲಿ 130ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ಬರ ತಾಲೂಕುಗಳನ್ನು ಘೋಷಣೆ ಮಾಡಿ ಅಂತ ಸರ್ಕಾರದ ಮೇಲೆ ವಿಪಕ್ಷಗಳು ಒತ್ತಡ ಹಾಕುತ್ತಿವೆ. ಇನ್ನು ಆಪರೇಷನ್ ಹಸ್ತ ಕೂಡ ಜೋರಾಗಿದ್ದು, ಬಿಜೆಪಿಯ ಕೆಲ ಹಾಲಿ ಮತ್ತು ಮಾಜಿ ಶಾಸಕರು ಸಿಎಂ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಕರ್ನಾಟಕದಲ್ಲಿ ಜೂ.1ರಿಂದ ಆ.24ರವರೆಗೆ ವಾಡಿಕೆ ಮಳೆ 651 ಮಿ.ಮೀ. ಆಗಬೇಕಿದ್ದು, ವಾಸ್ತವಿಕ ಮಳೆ 487 ಮಿ.ಮೀ. ಆಗಿದೆ. ಶೇ.25ರಷ್ಟು ಕೊರತೆಯುಂಟಾಗಿದೆ. ಇದರಿಂದ ಸುಮಾರು 130ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ಬರ ತಾಲೂಕುಗಳನ್ನು ಘೋಷಣೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ ಬರ ಘೋಷಣೆ ಕುರಿತು ಮುಂದಿನ ವಾರ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಆಪರೇಷನ್ ಹಸ್ತ ಜೋರಾಗಿದೆ ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್‌ನತ್ತ ದೃಷ್ಟಿ ಹಾಯಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪಕ್ಷದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೊಗಳಿ ಮಾತನಾಡಿದ್ದಾರೆ. ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
LIVE NEWS & UPDATES
-
Karnataka Breaking Kannada Live: ಹೆಚ್‌ಡಿಡಿ ಮನಸ್ಸು ಮಾಡಿದ್ದರೆ ಎಷ್ಟು ಬೇಕಾದರೂ ಹಣ ಮಾಡಬಹುದಿತ್ತು
HDD ಶ್ರಮಕ್ಕೆ ಸರಿಯಾದ ಫಲ ಸಿಕ್ಕಿಲ್ಲ ಎನ್ನುವುದು ನಮಗೂ ಗೊತ್ತಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕಾದರೂ ಹಣ ಮಾಡಬಹುದಿತ್ತು. ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡರು ಒಪ್ಪಿಗೆ ಕೊಟ್ಟಿರಲಿಲ್ಲ. ಸಾಕಷ್ಟು ಹಣ ಸಿಗುತ್ತೆ ಎಂದು ಗೊತ್ತಿತ್ತು, ಆದ್ರೂ ಒಪ್ಪಿಗೆ ನೀಡಿರಲಿಲ್ಲ. ಇಂತಹ ವ್ಯಕ್ತಿತ್ವವನ್ನು ಗುರುತಿಸಬೇಕು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
-
Karnataka Breaking Kannada Live: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಶ್ರಮ ತಾವೆಲ್ಲರೂ ನೋಡಿದ್ದೇವೆ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಶ್ರಮ ತಾವೆಲ್ಲರೂ ನೋಡಿದ್ದೇವೆ. ಚಾಮರಾಜಪೇಟೆಯಲ್ಲಿರುವ ಡಾ.ಅಂಬರೀಶ್ ಸಭಾಂಗಣದಲ್ಲಿ ಹೆಚ್.ಡಿ ದೇವೇಗೌಡ ದಂಪತಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥಶ್ರೀ ಹೇಳಿದರು. ಹಗಲಿರುಳು ತಮ್ಮ ಶಕ್ತಿಯನ್ನು ಒಂದೇ ಕ್ಷೇತ್ರಕ್ಕೆ HDD ಮೀಸಲಿಟ್ಟಿದ್ದಾರೆ ಎಂದರು.
-
Karnataka Breaking Kannada Live: ನಾಳೆ ಬೆಳಗ್ಗೆ 11 ಗಂಟೆಗೆ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದೇನೆ: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ
ನಾಳೆ ಬೆಳಗ್ಗೆ 11 ಗಂಟೆಗೆ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಇಡೀ ರಾಜ್ಯದ ಪರಿಸ್ಥಿತಿ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ. ಎಲ್ಲಾ ನೋಡ್ತಿರುವೆ, ಚಪ್ಪಲಿ ಹಾಕಿಲ್ಲ, ಹಳೆಯದ್ದು ನೆನಪಿಸಿಕೊಳ್ಳಲ್ಲ. ರಾಜ್ಯದ ಸಮಸ್ಯೆ ನೋಡುತ್ತಿದ್ದೇನೆ. 91ನೇ ವಯಸ್ಸಿನಲ್ಲೂ ಹಲವು ಸಮಸ್ಯೆ ಕಣ್ಣು ಮುಂದೆ ಬರುತ್ತೆ ಎಂದಿದ್ದಾರೆ.
Karnataka Breaking Kannada Live: ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು
Karnataka Breaking Kannada Live: ಎಂ.ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ತಾರ? ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
Karnataka Breaking Kannada Live: ಚೀನಾದಲ್ಲಿ ಯಾವುದೇ ಚರ್ಚ್, ಮಸೀದಿ, ದೇವಾಲಯಗಳು ಇಲ್ಲ
ಚೀನಾದಲ್ಲಿ ಯಾವುದೇ ಚರ್ಚ್, ಮಸೀದಿ, ದೇವಾಲಯಗಳು ಇಲ್ಲ. ವಿಧಾನಸೌಧದಲ್ಲಿ ಪ್ರಾರ್ಥನೆಗೆ ಅವಕಾಶ ಕೋರಿ JDS MLC ಪತ್ರ ವಿಚಾರವಾಗಿ ಮಾತನಾಡಿದ ಅವರು, ಪ್ರಾರ್ಥನೆಗೆ ಅವಕಾಶವಿಲ್ಲವೆಂದು ಸುಪ್ರೀಂಕೋರ್ಟ್ ಈ ಹಿಂದೆಯೇ ಹೇಳಿದೆ. ಈಗ ಅವಕಾಶ ನೀಡಿದರೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಆಗುತ್ತೆ. ಒಂದು ವೇಳೆ ಪ್ರಾರ್ಥನೆಗೆ ಅವಕಾಶ ನೀಡಿದರೆ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿದರು.
Karnataka Breaking Kannada Live: ‘ಚಂದ್ರಯಾನ-3’ ಯಶಸ್ಸಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಪೂಜೆ: ಮುತಾಲಿಕ್ ಹೇಳಿದ್ದಿಷ್ಟು
ಈ ವಿಚಾರದಲ್ಲಿ ಬುದ್ಧಿಜೀವಿಗಳು ಮೂಗು ತೂರಿಸುವುದು ಬೇಡ. ಆಧ್ಯಾತ್ಮ, ವಿಜ್ಞಾನ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಇದರಲ್ಲಿ ಬುದ್ಧಿ ಜೀವಿಗಳು ಮೂಗು ತೂರಿಸುವುದು ಮೂರ್ಖತನ. ಇಂಥವರು ಭಾರತದಲ್ಲಿ ಹುಟ್ಟಬಾರದಿತ್ತು, ಚೀನಾದಲ್ಲಿ ಹುಟ್ಟಬೇಕಿತ್ತು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
Karnataka Breaking Kannada Live: ಇಸ್ರೋ ವಿಜ್ಞಾನಿಗಳು ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ
ಇಸ್ರೋ ವಿಜ್ಞಾನಿಗಳು ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು. ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಪ್ರೋತ್ಸಾಹ, ಅಭಿನಂದನೆ ಸಲ್ಲಿಸಿದ್ದಾರೆ.
Karnataka Breaking Kannada Live: ನಾಳೆ ದಿಢೀರ್ ಸುದ್ದಿಗೋಷ್ಠಿ ಕರೆದ ಶಂಕರಪಾಟೀಲ್ ಮುನೇನಕೊಪ್ಪ
ಮಾಜಿ ಸಚಿವ, ಧಾರವಾಡ ಜಿಲ್ಲೆ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಹುಬ್ಬಳ್ಳಿಯಲ್ಲಿ ನಾಳೆ ಮಧ್ಯಾಹ್ನ 12ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ N.H.ಕೋನರೆಡ್ಡಿ ವಿರುದ್ಧ ಸೋತಿದ್ದರು. ಜಿಲ್ಲೆಯ ಇಬ್ಬರು ಕಾಂಗ್ರೆಸ್ ಸೇರಬಹುದು ಎಂದು ಸಚಿವ ಲಾಡ್ ಹೇಳಿದ್ದರು. ಹಾಗಾಗಿ ಶಂಕರಪಾಟೀಲ್ ಮುನೇನಕೊಪ್ಪ ನಡೆ ತೀವ್ರ ಕುತೂಹಲ ಕೆರಳಿಸಿದ್ದಾರೆ.
Karnataka Breaking Kannada Live: ಸಚಿವ ಶರಣಪ್ರಕಾಶ ಪಾಟೀಲ್ ಕಾಲಿಗೆಬಿದ್ದು ಮನವಿ
ಕೊವಿಡ್ ವೇಳೆ ಕರ್ತವ್ಯ ನಿರ್ವಹಿಸಿದವರಿಗೆ ಭತ್ಯೆ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಕಾಲಿಗೆಬಿದ್ದು ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಮನವಿ ಮಾಡಿದ್ದಾರೆ. ವೈದ್ಯಕೀಯ ಸಮ್ಮೇಳನದಲ್ಲಿ ಭಾಗಿಯಾಗಲು ಸಚಿವರು ಗದಗಕ್ಕೆ ಬಂದಿದ್ದು, ಈ ವೇಳೆ ಸಚಿವರ ಭೇಟಿಯಾಗಿ ವಿಶೇಷ ಭತ್ಯೆ ನೀಡುವಂತೆ ಮನವಿ ಸಲ್ಲಿಸಲಾಗಿದೆ.
Karnataka Breaking Kannada Live:ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದರು
ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದರು. ಅವರು ಯಾಕೆ ಉಲ್ಟಾ ಹೊಡೆದರು ಅಂದ್ರೆ, ಅದೇ ಅಜ್ಜಯ್ಯನ ಶಕ್ತಿ. ನಾನೇನಾದ್ರೂ ತಪ್ಪು ಮಾಡಿದ್ದರೆ ತಾನೆ ಯೋಚನೆ ಮಾಡಬೇಕಿರುತ್ತೆ. ಪಾಪ… ಗುತ್ತಿಗೆದಾರರದ್ದು ತಪ್ಪಿಲ್ಲ, ಕೆಲ ರಾಜಕೀಯದವರು ಮಾಡಿದ್ದು, ರಾಜಕೀಯದವರು ಮಿಸ್ ಗೈಡ್ ಮಾಡಿ ಗುತ್ತಿಗೆದಾರರ ದಿಕ್ಕು ತಪ್ಪಿಸಿದರು ಎಂದು ನೊಣವಿನಕೆರೆ ಅಜ್ಜಯ್ಯನ ಮಠದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Karnataka Breaking Kannada Live: ರಾಜೀವ್ ಗಾಂಧಿ ವಿವಿ ಸ್ಥಳಾಂತರ ಬೇಡ: ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
Karnataka Breaking Kannada Live: ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದ್ರೂ?
ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬಂದಾಗ ನನ್ನ ಎನರ್ಜಿ ಹೆಚ್ಚಾಗುತ್ತೆ. ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು, ಶ್ರೀಗಳು ಆಶೀರ್ವದಿಸುತ್ತಾರೆ ಎಂದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಅಜ್ಜಯ್ಯನ ಮಠದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದ್ರೂ ಎಂದು ಪ್ರಶ್ನಿಸಿದ್ದಾರೆ.
Karnataka Breaking Kannada Live: ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಭೇಟಿ ನೀಡಿದ್ದಾರೆ. ಗಂಗಾಧರ ಅಜ್ಜಯ್ಯನ ಗದ್ದುಗೆ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡಿದ್ದಾರೆ.
Karnataka Breaking Kannada Live: ಸರ್ಕಾರ ಉಳಿಯುತ್ತೋ, ಇಲ್ವೋ? ಅನುಮಾನ ವ್ಯಕ್ತಪಡಿಸಿದ ಹೆಚ್ಡಿ ಕುಮಾರಸ್ವಾಮಿ
Karnataka Breaking Kannada Live: ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಕೋಲ್ಡ್ ವಾರ್: ಜಾರಕಿಹೊಳಿ ಹೇಳಿದ್ದೇನು?
Karnataka Breaking Kannada Live: ಚಂದ್ರನ ಮೇಲೆ 10 ಸೆಂಟಿಮೀಟರ್ ಕೊರೆದು ಪರೀಕ್ಷೆ
ಚಂದ್ರನ ಮೇಲೆ 10 ಸೆಂಟಿಮೀಟರ್ ನೆಲ ಕೊರೆದು ಪ್ರಜ್ಞಾನ್ ರೋವರ್ ಪರೀಕ್ಷೆ ನಡೆಸಿದೆ. ಟ್ವೀಟ್ ಮೂಲಕ ಇಸ್ರೋ ಮಾಹಿತಿ ಹಂಚಿಕೊಂಡಿದೆ. ದಕ್ಷಿಣ ಧ್ರುವದಲ್ಲಿ ‘ChaSTE’ ಪರೀಕ್ಷೆಯನ್ನು ರೋವರ್ ನಡೆಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಜ್ಞಾನ್ ರೋವರ್ ಸಂಚಾರ ಇತಿಹಾಸದಲ್ಲೇ ಭಾರತದ ಮಹತ್ವದ ಹೆಜ್ಜೆಯಾಗಿದೆ.
Chandrayaan-3 Mission: Here are the first observations from the ChaSTE payload onboard Vikram Lander.
ChaSTE (Chandra’s Surface Thermophysical Experiment) measures the temperature profile of the lunar topsoil around the pole, to understand the thermal behaviour of the moon’s… pic.twitter.com/VZ1cjWHTnd
— ISRO (@isro) August 27, 2023
Karnataka Breaking Kannada Live: ಚಂದ್ರಯಾನ-3 ಮತ್ತೊಂದು ದೊಡ್ಡ ಅಪ್ಡೇಟ್
ಚಂದ್ರಯಾನ-3 ಮತ್ತೊಂದು ದೊಡ್ಡ ಅಪ್ಡೇಟ್ ನೀಡಿದ್ದು, ಚಂದ್ರನ ತಾಪಮಾನ ಪರೀಕ್ಷಾ ವರದಿಯನ್ನು ರೋವರ್ ಕಳುಹಿಸಿದೆ. 50 ಡಿಗ್ರಿ ಸೆಲ್ಸಿಯಸ್ನಿಂದ ಮೈನಸ್ 10 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನವಿದ್ದು, ಹಗಲಿನಲ್ಲಿ ಚಂದ್ರನ ತಾಪಮಾನ ಪತ್ತೆ ಹಚ್ಚಲಾಗಿದೆ.
Karnataka Breaking Kannada Live: ನನ್ನ, ಎಂ.ಪಿ.ರೇಣುಕಾಚಾರ್ಯ ಭೇಟಿಗೆ ರಾಜಕೀಯ ಅರ್ಥ ಬೇಡ
ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ, ಸೌಹಾರ್ದಯುತ ಭೇಟಿ ಅಷ್ಟೇ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ S.S.ಮಲ್ಲಿಕಾರ್ಜುನ್ ಹೇಳಿದರು. ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾರೂ ಮಾತನಾಡಿಲ್ಲ. ನನ್ನ, ಎಂ.ಪಿ.ರೇಣುಕಾಚಾರ್ಯ ಭೇಟಿಗೆ ರಾಜಕೀಯ ಅರ್ಥ ಬೇಡ. ಟೀ ಕುಡಿಸಿ ಕಳುಹಿಸಿದ್ದೇನೆ, ಬೇರೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು.
Karnataka Breaking Kannada Live: 10 ರೂ.ಗೆ ಸಿಗುವ ವಸ್ತುವಿಗೆ 100 ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ
ಈ ಹಿಂದೆಯೇ ನಾವು ಬೊಮ್ಮಾಯಿ ಸರ್ಕಾರಕ್ಕೆ ತನಿಖೆಗೆ ಆಗ್ರಹಿಸಿದ್ದೆವು. 10 ರೂ.ಗೆ ಸಿಗುವ ವಸ್ತುವಿಗೆ 100 ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದ್ದೆವು, ತನಿಖೆ ಮಾಡುವುದು ಸೂಕ್ತ ಎಂದು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Karnataka News Live: ಪ್ರಧಾನಿ ಮೋದಿ ಪ್ರಚಾರಕ್ಕೆ 5000 ಕೋಟಿ ರೂ. ಖರ್ಚು ಮಾಡುತ್ತಾರೆ; ಸಂತೋಷ್ ಲಾಡ್
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ 5000 ಕೋಟಿ ರೂ. ಖರ್ಚು ಮಾಡುತ್ತಾರೆ. ಬಿಜೆಪಿಯ ಎಲ್ಲ ಹಗರಣಗಳನ್ನು ತನಿಖೆ ಮಾಡುತ್ತೇವೆ. 100 ಪರ್ಸೆಂಟ್ ತನಿಖೆ ಮಾಡುತ್ತೇವೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕಾಲದಲ್ಲಿ ಈ ದೇಶದ ಬಜೆಟ್ ಎಷ್ಟಿತ್ತು. ಇವತ್ತು ಇವರು ನೆಹರುಗೆ ಬೈತಾರೆ. ನಮ್ಮ ದೇಶ ಫುಟ್ ಪಾತ್ ಮೇಲೆ ಇತ್ತು. ಚಪ್ಪಲಿ ಹಾಕಲಾಗದ ಕಾಲದಲ್ಲಿ ನೆಹರು ಇಸ್ರೋ ನಿರ್ಮಿಸಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದರು.
Karnataka News Live: ಪ್ರತಿ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿವೆ; ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಪ್ರತಿ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿವೆ. ಅಧಿಕೃತವಾಗಿ ಅಥವಾ ಪರೋಕ್ಷವಾಗಿ ಮೈತ್ರಿ ಮಾಡಿಕೊಂಡಿರುತ್ತಾರೆ. 2018 ಹಾಗೂ 2023ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರು. ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಎದುರಿಸುತ್ತೇವೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
Karnataka News Live: ಪಕ್ಷ ಸೂಚಿಸಿದ್ರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ; ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆ ಇಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷ ಸೂಚಿಸಿದರೆ ನಾನು ಅಭ್ಯರ್ಥಿಯಾಗುತ್ತೇನೆ. ಪಕ್ಷದ ಮಾತನ್ನು ನಾನು ಕೇಳಲೇಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲಬೇಕು. ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸಿದ್ದಾರೆ. ಬಿಜೆಪಿ ದುರಾಡಳಿತ ನೋಡಿ ಬೇಸತ್ತು ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನ ಜಾರಿಗೊಳಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲೋಕೆ ತಂತ್ರಗಾರಿಕೆ ಮಾಡಬೇಕು ಎಂದರು.
Karnataka News Live: ಆಶ್ರಯ ಸಮಿತಿ ಅಧ್ಯಕ್ಷರಾಗಿ ಯತೀಂದ್ರ ಸಿದ್ದರಾಮಯ್ಯ ನೇಮಕ
ಮೈಸೂರು: ಆಶ್ರಯ ಸಮಿತಿ ಅಧ್ಯಕ್ಷರಾಗಿ ಯತೀಂದ್ರ ಸಿದ್ದರಾಮಯ್ಯ ನೇಮಕ ಮಾಡಿ 15 ದಿನಗಳ ಹಿಂದೆಯೇ ಆದೇಶ ಹೊರಡಿಸಲಾಗಿದೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ವರುಣಾ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಯನ್ನು ಆಲಿಸುತ್ತೇನೆ ಎಂದರು.
Karnataka News Live: ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ತರುತ್ತಿದ್ದೇವೆ; ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಫೇಕ್ ನ್ಯೂಸ್ ತಡೆಗಟ್ಟಲು ಕಾನೂನು ತರುತ್ತಿದ್ದೇವೆ. ಕೆಲವು ನಾಯಕರ ಬಗ್ಗೆ ತೇಜೋವಧೆ ಮಾಡಲಾಗುತ್ತಿದೆ. ನಕಲಿ ಸುದ್ದಿ ತಡೆಗಟ್ಟಲು ಗೃಹ ಇಲಾಖೆಯಿಂದ ಕಾನೂನು ಜಾರಿ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
Karnataka News Live: ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್; ಗೆಲುವಿಗೆ ಹಲವು ಅಪ್ಪಂದಿರು, ಸೋಲಿಗೆ ಒಬ್ಬನೇ ತಂದೆ; ಪರಮೇಶ್ವರ
ಹಾಸನ: ಚಂದ್ರಯಾನ-3 ಯಶಸ್ಸಿನ ಕ್ರೆಡಿಟ್ ಒಂದು ರೀತಿ ಗೆಲುವಿಗೆ ಹಲವು ಅಪ್ಪಂದಿರು, ಸೋಲಿಗೆ ಒಬ್ಬನೇ ತಂದೆ ಎಂಬಂತಾಗಿದೆ ಎಂದು ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ಎಲ್ಲರೂ ನಾನು ಮಾಡಿದ್ದು, ಚಂದ್ರಯಾನಕ್ಕೆ ಹೊರಟಿದ್ದೆ ಅಂತಾರೆ. ಆದರೆ ಹಗಲು-ರಾತ್ರಿ ದುಡಿದಿದ್ದು ವಿಜ್ಞಾನಿಗಳು-ಡಾ.ಪರಮೇಶ್ವರ್ ನಮ್ಮ ವಿಜ್ಞಾನಿಗಳಿಗೆ ವಿಶೇಷವಾದ ಅಭಿನಂದನೆ ಹೇಳಬೇಕು. ಪ್ರಧಾನಿ, ಸಿಎಂ, ನಾವೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳಬಹುದು. ಆದರೆ ಇದು ಇಡೀ ದೇಶದ ಕ್ರೆಡಿಟ್ ಎಂದರು.
Mann Ki Baat Live: ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನೇ ಖರೀದಿಸಿ; ಪ್ರಧಾನಿ ಮೋದಿ
ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನು ಖರೀದಿಸಿ. ಹಬ್ಬದ ಸಮಯದಲ್ಲಿ ಸ್ವಚ್ಚತೆ ಕಡೆಗೂ ಗಮನವಿರಲಿ. ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಮಾತು ಮುಗಿಸಿದರು.
Mann Ki Baat Live: ಪುರಾತನ ಪುರಾತನ ವಸ್ತುಗಳ ಶೋಧನೆಯಲ್ಲಿ ಬೆಂಗಳೂರಿನ ಧನ್ಪಾಲ್ ಪರಿಶ್ರಮ ಅನಂತ
ಬೆಂಗಳೂರಿನ ಧನ್ಪಾಲ್ ಎಂಬುವರು ಪುರಾತನ ವಸ್ತುಗಳ ಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಪರಿಶ್ರಮದಿಂದ ಅನೇಕ ಪುರಾತನ ವಸ್ತುಗಳು ಈಗ ನಮಗೆ ನೋಡಲು ಸಿಗುತ್ತಿವೆ.
Mann Ki Baat Live: ಇಂದು ತೆಲುಗು ಭಾಷೆ ದಿನ
ಸಂಸ್ಕೃತ ಭಾಷೆ ಅತಿ ಪುರಾತನ ಭಾಷೆಯಾಗಿದೆ. ಇದರಲ್ಲಿ ದೇಶದ ಸಂಸ್ಕೃತಿ ಅಡಗಿದೆ. ಹಾಗೇ ಭಾರತ ಮತ್ತೊಂದು ಪುರಾತನ ಭಾಷೆ ತೆಲಗು. ಇಂದು ತೆಲುಗು ಭಾಷೆ ದಿನ ಎಂದು ಹೇಳಿದರು.
Mann Ki Baat Live: ಈ ಬಾರಿ ಅತಿ ಹೆಚ್ಚು ಧ್ವಜಗಳನ್ನು ಖರೀದಿ
ಸ್ವಾತಂತ್ರ್ಯೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನ ಕರೆ ನೀಡಲಾಗಿತ್ತು. ಈ ಬಾರಿ ಅತಿ ಹೆಚ್ಚು ಧ್ವಜಗಳನ್ನು ಖರೀದಿಸಲಾಗಿದೆ. ನಮ್ಮ ಮಣ್ಣು ನಮ್ಮ ದೇಶ ಅಭಿಯಾನದ ಅಡಿ ದೇಶದ ವಿವಿಧ ಪ್ರದೇಶಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ಈ ಮಣ್ಣಿನಿಂದ ಅಮೃತ ವಾಟಿಕಾ ನಿರ್ಮಾಣ ಮಾಡಲಾಗುತ್ತದೆ ಎಂದರು.
Mann Ki Baat Live: ಭಾರತದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ 40 ರಾಷ್ಟ್ರಗಳ ಅಧ್ಯಕ್ಷರು ಭಾಗಿ
ಚಂದ್ರಯಾನ-3 ಯಶಸ್ಸಿನಿಂದ ದೇಶದಲ್ಲಿ ಉತ್ಸಾಹ ತುಂಬಿದೆ. ಭವಿಷ್ಯದ ದಿನಗಳಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಲಿದೆ. ಎಲ್ಲರ ಪರಿಶ್ರಮದಿಂದ ಯಶಸ್ವಿ ಸಿಕ್ಕಿದೆ. ಜಿ-20 ಶೃಂಗಸಭೆಗೆ ಭಾರತ ಎಲ್ಲ ಪೂರ್ವತಯಾರಿ ಮಾಡಿಕೊಂಡಿದೆ. 40 ರಾಷ್ಟ್ರಗಳ ಅಧ್ಯಕ್ಷರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗುತ್ತಾರೆ. ಭಾರತದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
Mann Ki Baat Live: ವರ್ಲ್ಡ್ ಯೂನಿವರ್ಸಿಟಿ ಗೇಮ್ನಲ್ಲಿ ಭಾಗಿಯಾದ ಕ್ರೀಡಾಪಟುಗಳಿಗೆ ಪ್ರಧಾನಿ ಅಭಿನಂದನೆ
ಈ ಬಾರಿ ನಡೆದ ವರ್ಲ್ಡ್ ಯೂನಿವರ್ಸಿಟಿ ಗೇಮ್ನಲ್ಲಿ ಭಾಗಿಯಾಗಿ ಮೆಡಲ್ಗೆದ್ದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿಯವರು ಅಭಿನಂದನೆ ಸಲ್ಲಿಸಿದರು. ಈ ಗೇಮ್ನಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶದ ಕ್ರೀಡಾಪಟು ಪ್ರಗತಿ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
Mann Ki Baat Live: ದೆಹಲಿಯಲ್ಲಿ ನಡೆಯುವ ಜಿ20 ಸಭೆ ಬಹಳ ಮುಖ್ಯವಾಗಿದೆ
ಮುಂದಿನ ತಿಂಗಳು ನಡೆಯುವ ಜಿ20 ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ವಿವಿಧ ದೇಶಗಳು ಭಾಗಿಯಾಗಲಿವೆ. ವಾರಣಾಸಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 800 ಶಾಲೆಯಲ್ಲಿ ಮಕ್ಕಳು ಭಾಗಿಯಾಗಿದ್ದರು. ಇನ್ನು ಸೂರತ್ನಲ್ಲಿ ನಡೆದ ಸಭೆಲ್ಲಿ 15 ರಾಜ್ಯದ 15 ಲಕ್ಷ ಮಹಿಳೆಯರು ಭಾಗಿಯಾಗಿದ್ದರು.
Mann Ki Baat Live: ಪ್ರಧಾನಿ ನರೇಂದ್ರ ಮೋದಿಯವರ 104ನೇ ಮನ್ ಕೀ ಬಾತ್ ಆರಂಭ
ಪ್ರಧಾನಿ ನರೇಂದ್ರ ಮೋದಿಯವರ 104ನೇ ಮನ್ ಕೀ ಬಾತ್ ಕಾರ್ಯಕ್ರಮ ಆರಂಭವಾಗಿದ್ದು, ಮೊದಲಿಗೆ ಚಂದ್ರಯಾನ-3 ಯಶಸ್ವಿಗೆ ಕಾರಣರಾದ ವಿಜ್ಞಾನಿಗಳಿಗೆ ಅಭಿನಂದಿಸಿದರು.
Karnataka News Live: ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮೊಬೈಲ್ ಯುನಿಟ್ ಜಾರಿಗೆ; ದಿನೇಶ್ ಗುಂಡೂರಾವ್
ಹುಬ್ಬಳ್ಳಿ: ಮೊದಲು ಕಾಲರಾ, ಟಿಬಿ ಹೀಗೆ ಸಾಂಕ್ರಾಮಿಕ ರೋಗಗಳಿಂದ ಜನ ಸಾವನ್ನಪ್ಪುತ್ತಿದ್ದರು. ಆದರೆ ಈಗ ಆ ಸಾಂಕ್ರಾಮಿಕ ರೋಗಗಳಿಂದ ಜನರಿಗೆ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸಲು ಇಲಾಖೆಯಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆಲ್ಲ ಕಾರಣ ನಮ್ಮ ಜೀವನ ಶೈಲಿ, ಜೆನೆಟಿಕ್ ಸಮಸ್ಯೆ ಕಾರಣ. ನಮ್ಮ ಇಲಾಖೆಯೇ ಅವರ ಹತ್ರ ಹೋಗುವ ಯೋಜನೆ ರೂಪಿಸಿದ್ದೇವೆ. ಮೊಬೈಲ್ ಯುನಿಟ್ ಮಾಡುವ ಯೋಚನೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Karnataka News Live: ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ರಾಜಕಾರಣ ಬೇಡ
ಗದಗ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರಾಜಕಾರಣ ಬೆರೆಸುವ ಅವಶ್ಯಕತೆ ಇಲ್ಲ. ರಾಜ್ಯದ ರೈತರ ಹಿತವನ್ನು ಕಾಪಾಡುವುದಕ್ಕೆ ನಮ್ಮ ಸರ್ಕಾರ ಬದ್ಧವಿದೆ. ರಾಜ್ಯಾದ್ಯಂತ ಮಳೆ ಕೊರತೆಯಾಗಿರುವುದು ನಿಜ ಎಂದು ಗದಗದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
Karnataka News Live: ಜೈಲಿನಿಂದ ಪರಾರಿಯಾದ ಅತ್ಯಾಚಾರ ಪ್ರಕರಣದ ಆರೋಪಿ
ದಾವಣಗೆರೆ: ನಗರದ ಉಪಕಾರಾಗೃಹ ಗೋಡೆ ಮೇಲಿಂದ ಜಿಗಿದು ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾಗಿದ್ದಾನೆ. ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಸಂತ್(23) ಪರಾರಿಯಾದ ಆರೋಪಿ. ಕಾಲಿಗೆ ಪೆಟ್ಟಾದರು ಎಲ್ಲಿಯೂ ಕೂರದೆ ಕುಂಟುತ್ತಲೇ ಓಡಿ ಹೋಗಿ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ.
Karnataka News Live: ಕೋಲಾರ; 3 ದಿನಗಳಲ್ಲಿ 560 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು
ಕೋಲಾರ: ಜಿಲ್ಲೆಯ ಶ್ರೀನಿವಾಸಪುರದ ಹಲವು ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. 3 ದಿನಗಳಲ್ಲಿ 560 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ.
Karnataka News Live: ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಒತ್ತುವರಿ ತೆರವು
ರಾಯಚೂರು: ಲಿಂಗಸಗೂರು ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಜೆಸಿಬಿ ಸದ್ದು ಮಾಡಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದ ಮುಖ್ಯಯ ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ಮಳಿಗೆಗಳು, ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 50 ಫೀಟ್ ರಸ್ತೆ ಅಗಲೀಕರಣವಿದ್ದು, ಬಸ್ ಸ್ಟ್ಯಾಂಡ್ ವೃತ್ತದಿಂದ ಅತಿಥಿ ಹೋಟೆಲ್ ವರೆಗೆ ಪುರಸಭೆ ಅಧಿಕಾರಿಗಳು ತೆರವು ಮಾಡಲಾಗುತ್ತಿದೆ.
Karnataka News Live: ಆಪರೇಷನ್ ಹಸ್ತಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿ ?
ಬೆಂಗಳೂರು: ಆಪರೇಷನ್ ಹಸ್ತಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಖುದ್ದು ಎಂಟ್ರಿಕೊಟ್ಟರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಜನರ ಅಹವಾಲು ಆಲಿಸುವ ನೆಪದಲ್ಲಿ ಮೂರನೇ ಬಾರಿಗೆ ಯಶವಂತಪುರ ಕ್ಷೇತ್ರಕ್ಕೆ ಹೋಗಿದ್ದಾರೆ. ನಿನ್ನೆ (ಆ.26) ಕನಕಪುರ ರಸ್ತೆಯ ಅಪಾರ್ಟ್ಮೆಂಟ್ ನಿವಾಸಿಗಳ ಅಹವಾಲು ಆಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಬಿಜೆಪಿಗರ ಮೇಲಿನ ಬೇಸರ ಹೊರಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ತನಗೆ ಬಿಜೆಪಿ ನಾಯಕರು ಆಹ್ವಾನವನ್ನೇ ನೀಡಲಿಲ್ಲ ಎಂದಿದ್ದಾರೆ.
Karnataka News Live: ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ; ಕಾರ್ಯಕ್ರಮ ರೂಪುರೇಷೆ ಕುರಿತು ಸಭೆ
ಮೈಸೂರು: ಆಗಸ್ಟ್ 30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಚಾಲನಾ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ಹೆಚ್.ಸಿ.ಮಹದೇವಪ್ಪ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ‘ಗೃಹಲಕ್ಷ್ಮೀ’ ಯೋಜನೆ ಕಾರ್ಯಕ್ರಮದ ಯಶಸ್ವಿಗಾಗಿ ಅಧಿಕಾರಿಗಳು, ಕಾರ್ಯಕರ್ತರ ಜೊತೆ ಸಭೆ ಸರಣಿ ಸಭೆ ನಡೆಸುತ್ತಿದ್ದಾರೆ.
Karnataka News Live: ಇಂದಿನಿಂದ 3 ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲೆ ಪ್ರವಾಸ
ಮೈಸೂರು: ಇಂದಿನಿಂದ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಂದು ರಾತ್ರಿ 8 ಗಂಟೆಗೆ ಮೈಸೂರಿಗೆ ತೆರಳಲಿದ್ದಾರೆ. ನಾಳೆ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಆ.30ರಂದು ಗೃಹಲಕ್ಷ್ಮೀ ಚಾಲನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
Published On - Aug 27,2023 8:06 AM