Love Jihad: ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರ ಹಲ್ಲೆ, 7 ಮಂದಿ ಅರೆಸ್ಟ್

| Updated By: ಆಯೇಷಾ ಬಾನು

Updated on: Feb 09, 2024 | 11:16 AM

ಉಜಿರೆ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ರೂಮನ್ ಎಂಬ ಮುಸ್ಲಿಂ ಯುವಕ ಬಾಲಕಿಯ ಜೊತೆ ಸುತ್ತಾಡುತ್ತಿದ್ದು ಫೋಟೋಸ್, ವಿಡಿಯೋಸ್ ವೈರಲ್ ಆಗಿವೆ. ಈ ಬೆನ್ನಲ್ಲೆ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಬಾಲಕಿಯ ಪೋಷಕರು ಯುವಕನ ಮೇಲೆ ದೂರು ದಾಖಲಿಸಿದ್ದು ಯುವಕ ಭಜರಂಗದಳ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದಾನೆ. ಪೊಲೀಸರು 7 ಕಾರ್ಯಕರ್ತರನ್ನು ಬಂಧಿಸಿದ್ದಾರೆ.

Love Jihad: ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರ ಹಲ್ಲೆ, 7 ಮಂದಿ ಅರೆಸ್ಟ್
ರೂಮನ್, ಆಲ್ದೂರು ಪೊಲೀಸ್ ಠಾಣೆ
Follow us on

ಚಿಕ್ಕಮಗಳೂರು, ಫೆ.09: ಕಾಫಿನಾಡಿನಲ್ಲಿ ಮತ್ತೆ ಲವ್ ಜಿಹಾದ್ (Love Jihad) ಸದ್ದು ಮಾಡುತ್ತಿದೆ. ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಮುಸ್ಲಿಂ (Muslim) ಯುವಕನ ಮೇಲೆ ಭಜರಂಗದಳ ಕಾರ್ಯಕರ್ತರು (Bajrang Dal Workers) ನೈತಿಕ ಪೊಲೀಸ್ ಗಿರಿ (Moral Policing) ನಡೆಸಿದ್ದಾರೆ. ಡ್ಯಾನ್ಸ್ ಮಾಸ್ಟರ್ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು ಭಜರಂಗದಳ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನೂರಾರು ಪೊಲೀಸರ ನಿಯೋಜನೆ ಮಾಡಲಾಗಿದ್ದು 7 ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಉಜಿರೆ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ರೂಮನ್ ಆಲ್ದೂರು ಸಮೀಪದ ಗಾಳಿಗಂಡಿ ನಿವಾಸಿ. ಈತ ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದನಂತೆ. ಅಪ್ರಾಪ್ತ ಬಾಲಕಿಯ ಜೊತೆ ರೂಮನ್ ಸುತ್ತಾಡುತ್ತಿದ್ದ ಫೋಟೋಸ್, ವಿಡಿಯೋಸ್ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಭಜರಂಗದಳ ಕಾರ್ಯಕರ್ತರು ನಿನ್ನೆ ರಾತ್ರಿ ರೂಮನ್​ನನ್ನು ಆಲ್ದೂರಿಗೆ ಕರೆಸಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ರೂಮನ್ ದೂರು ದಾಖಲಿಸಿದ್ದಾನೆ. ಮತ್ತೊಂದೆಡೆ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಕೂಡ ಅಪ್ರಾಪ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ. ಸದ್ಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ರೂಮನ್ ಮತ್ತು ಭಜರಂಗದಳ ಕಾರ್ಯಕರ್ತರ ವಿರುದ್ಧ FIR ದಾಖಲಾಗಿದೆ.

ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇನ್ನು ಹಲ್ಲೆ ‌ನಡೆಸಿದ್ದ 7 ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಭಜರಂಗದಳ ಜಿಲ್ಲಾ ಸಂಚಾಲಕ ಸಿ.ಡಿ‌. ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್, ಪ್ರಜ್ವಲ್ ಬಂಧಿತ ಆರೋಪಿಗಳು. ಮುಂಜಾಗ್ರತಾ ಕ್ರಮವಾಗಿ ಆಲ್ದೂರು ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕೊಪ್ಪಳ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ವೈರಲ್​ ಫೀವರ್, ಚಿಕನ್​​ಗುನ್ಯಾ ರೋಗ- ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ

ಇತ್ತೀಜೆಗೆ ಗದಗದ ಬೆಟಗೇರಿಯ ಮಂಜುನಾಥ ನಗರದಲ್ಲೂ ಲವ್ ಜಿಹಾದ್ ನಡೆದಿತ್ತು. 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕನೊಬ್ಬ ತನ್ನ ಪ್ರೀತಿಯ ಬಲೆ ಬೀಳಿಸಿಕೊಂಡಿದ್ದ. ಈತ ಯುವತಿಯನ್ನು ಬೆಹೆನ್ ಎಂದು ಕರೆಯುತ್ತಿದ್ದ. ಹೀಗಾಗಿ ಯುವತಿಯ ಮನೆಯರು ಈತನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡ ಯುವಕ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮೋಸ ಮಾಡಿದ್ದ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ