ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಮುಖಂಡರ ನಡುವೆ ಹೊಡೆದಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಅಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ಮುಖಂಡರ ಜಗಳ ಬೀದಿಗೆ ಬಿದ್ದಿದೆ.ಮೂಡಿಗೆರೆ ತಾಲೂಕು ಅಧ್ಯಕ್ಷ ಹುದ್ದೆಗಾಗಿ ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದಿದ್ದು, ಗಲಾಟೆಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರೊಬ್ಬರಿಗೆ ಗಾಯವಾಗಿದೆ. ಇನ್ನು ಬೀದಿಯಲ್ಲಿ ಹೊಡೆದಾಡುಕೊಂಡಿರುವ ವಿಡಿಯೋ ಫುಲ್ ವೈರಲ್ ಆಗಿದೆ.

ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಮುಖಂಡರ ನಡುವೆ ಹೊಡೆದಾಟ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 09, 2024 | 7:35 PM

ಚಿಕ್ಕಮಗಳೂರು, (ಫೆಬ್ರವರಿ 09): ಲೋಕಸಭಾ ಚುನಾವಣೆ (Loksabha Elections 2024) ಸಂಬಂಧ ಕರ್ನಾಟಕ ಬಿಜೆಪಿಯಲ್ಲಿರುವ ಅಸಮಾಧಾನಗಳನ್ನು ಬಿವೈ ವಿಜಯೇಂದ್ರ(BY Vijayendra) ಹಾಗೂ ಯಡಿಯೂರಪ್ಪ (BS Yediyurappa) ಒಂದೊಂದಾಗಿಯೇ ಬಗೆಹರಿಸುತ್ತಿದ್ದಾರೆ. ಇದರ ಮಧ್ಯೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ (Chikkamagaluru BJP) ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮೂಡಿಗೆರೆ ತಾಲೂಕು ಅಧ್ಯಕ್ಷ ನೇಮಕ ವಿಚಾರದಲ್ಲಿ ಬಿಜೆಪಿ ಮುಖಂಡರು ಹೊಡೆದಾಡಿಕೊಂಡಿದ್ದಾರೆ.ಬೀದಿಯಲ್ಲಿ ಹೊಡೆದಾಟದ ವಿಡಿಯೋ ವೈರಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಮೂಡಿಗೆರೆ ನೂತನ ಅಧ್ಯಕ್ಷರನ್ನಾಗಿ ಗಜೇಂದ್ರ ಅವರನ್ನು ನೇಮಕ ಮಾಡಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಇನ್ನುಳಿದ ಆಕಾಂಕ್ಷಿಗಳ ಆಕ್ರೋಶದ ಕಟ್ಟೆ ಹೊಡೆದಿದೆ. ಕೆ.ಸಿ.ರತನ್ ಹಸ್ತ ಕ್ಷೇಪದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟಣ್ಣ ಹಾಗೂ ಮತ್ತೋರ್ವ ಆಕಾಂಕ್ಷಿ ಭರತ್ ಗಲಾಟೆ ಮಾಡಿದ್ದಾರೆ. ಈ ವೇಳೆ .ರತನ್ ಅವರಿಗೆ ಗಾಯವಾಗಿದೆ.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಕಪ್ಪು ಪಟ್ಟಿ ಪ್ರದರ್ಶನ: ಕೈ ಕಾರ್ಯಕರ್ತರಿದ್ದ ಕಟ್ಟಡದ ಮೇಲೆ ಕಲ್ಲು ತೂರಿದ ಬಿಜೆಪಿಗರು

ಮೂಡಿಗೆರೆ ಬಿಜೆಪಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ 12 ಮಂದಿ ಆಕಾಂಕ್ಷಿಗಳಿದ್ದರು. ಈ ಪೈಕಿ ಇಂದು ಗಜೇಂದ್ರ ಅವರನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ರೊಚ್ಚಿಗೆದ್ದ ಇನ್ನೊಂದು ಗುಂಪು ಗಲಾಟೆ ಮಾಡಿದೆ. ಮೂಡಿಗೆರೆ ಪಟ್ಟಣದ ಬಿಜೆಪಿ ಕಚೇರಿಯ ಮುಂಭಾಗ ಹೊಡೆದಾಟ ನಡೆದಿದ್ದು, ಇದರಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರತನ್ ಅವರಿಗೆ ಗಾಯವಾಗಿದ್ದು,ಕೂಡಲೇ ಅವರನ್ನು ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ