ಚಿಕ್ಕಮಗಳೂರು: ಕರೆಂಟ್ ಇಲ್ಲದೆ ವಸತಿ ಶಾಲೆಯ ಮಕ್ಕಳ ಪರದಾಟ, ಬೀದಿ ದೀಪದ ಬೆಳಕಲ್ಲಿ ಓದು

| Updated By: ಆಯೇಷಾ ಬಾನು

Updated on: Feb 13, 2024 | 12:18 PM

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೈಮರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯ ವಸತಿ ಶಾಲೆಯಲ್ಲಿ ಕರೆಂಟ್ ಇಲ್ಲದೆ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ. ಸಾಲದಕ್ಕೆ ಇಂಧನ ಸಚಿವರೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು. ಅಷ್ಟೆ ಅಲ್ಲದೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಕೂಡ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು: ಕರೆಂಟ್ ಇಲ್ಲದೆ ವಸತಿ ಶಾಲೆಯ ಮಕ್ಕಳ ಪರದಾಟ, ಬೀದಿ ದೀಪದ ಬೆಳಕಲ್ಲಿ ಓದು
ಕರೆಂಟ್ ಇಲ್ಲದೆ ವಸತಿ ಶಾಲೆಯ ಮಕ್ಕಳ ಪರದಾಟ
Follow us on

ಚಿಕ್ಕಮಗಳೂರು, ಫೆ.13: ಸರ್ಕಾರಿ ವಸತಿ ಶಾಲೆಯಲ್ಲಿ ವಿದ್ಯುತ್ (Electricity Cut) ಇಲ್ಲದೆ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುವಂತಹ ಪರಿಸ್ಥಿತಿಗೆ ಬಂದಿಳಿದಿದ್ದಾರೆ. ಚಿಕ್ಕಮಗಳೂರು (Chikkamagaluru) ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕೈಮರದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯ ವಸತಿ ಶಾಲೆಯಲ್ಲಿ ಕರೆಂಟ್ ಇಲ್ಲದೆ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿದ್ದಾರೆ. ಹಾಗಾದ್ರೆ, ಸರ್ಕಾರಿ ವಸತಿ ಶಾಲೆಯಲ್ಲಿ ಯುಪಿಎಸ್ ಇಲ್ವಾ ಎಂಬ ಪ್ರಶ್ನೆ ಕೂಡ ಮೂಡೋದು ಸಹಜ.‌ ಮುಂದಿನ ತಿಂಗಳಿಂದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ನಡೆಯುತ್ತಿದೆ.

ಸರ್ಕಾರ ಲೋಡ್ ಶೆಡ್ಡಿಂಗ್ ಹೆಸರಲ್ಲಿ ಕರೆಂಟ್ ತೆಗೆಯುತ್ತಿದ್ದರೆ ಮಕ್ಕಳು ಹೇಗೆ ಓದುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಇದರ ಜೊತೆ, ಸರ್ಕಾರಿ ವಸತಿ ಶಾಲೆಯಲ್ಲೇ ಕರೆಂಟ್ ಇಲ್ಲದೆ ಮಕ್ಕಳು ಸಂಜೆ ವೇಳೆ ಶಾಲೆ ಕಟ್ಟಡದಿಂದ ಹೊರಬಂದು ಕಾಂಪೌಂಡ್ ಒಳಗೆ ಬೀದಿ ದೀಪದ ಸೋಲಾರ್ ವಿದ್ಯುತ್ ಕೆಳಗೆ ಓದುತ್ತಿದ್ದಾರೆ. ವಿದ್ಯುತ್ ಇಲ್ಲದೆ ಇರುವುದರಿಂದ ಬೀದಿ ದೀಪದ ಕೆಳಗೆ ಓದುತ್ತಿರುವ ಶಾಲಾ ಹೆಣ್ಣು ಮಕ್ಕಳಿಗೆ ಏನಾದ್ರು ಸಮಸ್ಯೆಯಾದರೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಸಾಲದಕ್ಕೆ ಇಂಧನ ಸಚಿವರೇ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು. ಅಷ್ಟೆ ಅಲ್ಲದೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಕೂಡ ಟಿ.ಡಿ.ರಾಜೇಗೌಡ. ಈ ಎನ್.ಆರ್.ಪುರ ತಾಲೂಕು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಆಡಳಿತದ ವ್ಯಾಪ್ತಿಗೆ ಸೇರಲಿದೆ.

ಇದನ್ನೂ ಓದಿ: Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್​ ತಂತ್ರಜ್ಞಾನ ಅಳವಡಿಕೆ: ಏನಿದರ ವಿಶೇಷ, ಇಲ್ಲಿದೆ ವಿವರ

ಹೀಗೆ ಸರ್ಕಾರಿ ವಸತಿ ಶಾಲೆಯಲ್ಲೇ ವಿದ್ಯುತ್ ಇಲ್ಲದೆ ಮಕ್ಕಳು ಸೋಲಾರ್ ಬೀದಿ ದೀಪದ ಕೆಳಗೆ ಓದುತ್ತಿರುವ ವಿಡಿಯೋ ವೈರಲ್ ಆಗಿದ್ದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹೆಣ್ಣು ಮಕ್ಕಳು ಇರುವ ವಸತಿ ಶಾಲೆ ಸರ್ಕಾರ ಕೂಡಲೇ ವಸತಿ ಶಾಲೆಗೆ ಯುಪಿಎಸ್ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ