ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು

ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ. ಛತ್ರಿಮರ ದೇಗುಲ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. 26 ಕಾಡಾನೆಗಳೊಂದಿಗೆ ರಾತ್ರೋರಾತ್ರಿ ಬೀಟಮ್ಮ ಗ್ಯಾಂಗ್ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ.

ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು
ಬೀಟಮ್ಮ ಗ್ಯಾಂಗ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು

Updated on: Feb 13, 2024 | 10:01 AM

ಚಿಕ್ಕಮಗಳೂರು, ಫೆ.13: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಟಮ್ಮ ಗ್ಯಾಂಗ್ (Beetamma Gang) ಉಪಟಳ ಹೆಚ್ಚಾಗುತ್ತಲೇ ಇದೆ. ಚಿಕ್ಕಮಗಳೂರು (Chikkamagaluru) ಹೊರವಲಯದ ಇಂದಾವರ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಛತ್ರಿಮರ ದೇಗುಲ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. 26 ಕಾಡಾನೆಗಳೊಂದಿಗೆ ರಾತ್ರೋರಾತ್ರಿ ಬೀಟಮ್ಮ ಗ್ಯಾಂಗ್ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ. ಚಿಕ್ಕಮಗಳೂರು ನಗರ ಪ್ರವೇಶಿಸದಂತೆ ಇಂದಾವರ ಗ್ರಾಮದ ಸುತ್ತ ಅರಣ್ಯ ಇಲಾಖೆ, ETF ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ. ಮುತ್ತೋಡಿ ಅರಣ್ಯಕ್ಕೆ ಕಾಡಾನೆ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸಿತ್ತು. ಆಗ ಮುತ್ತೋಡಿ ಅರಣ್ಯದ‌ ಸಮೀಪದ ಗ್ರಾಮಕ್ಕೆ ತೆರಳಿ ಬೀಟಮ್ಮ ಗ್ಯಾಂಗ್ ವಾಪಸ್ ಆಗಿತ್ತು. ಸದ್ಯ ಈಗ ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ.

ಬೀಟಮ್ಮ ಗ್ಯಾಂಗ್ ಬಲಿಷ್ಠವಾಗಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ದಾಳಿ ನಡೆಸಿ ಸಿಕ್ಕ ಆಹಾರ ತಿನ್ನುತ್ತಿವೆ. ಇವುಗಳ ಕಾರ್ಯಚರಣೆಗೆ ಕರೆಸಿದ್ದ ಕುಮ್ಕಿ ಆನೆಗಳ ಮೇಲೂ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಆಗ ರಾತ್ರೋರಾತ್ರಿ ಅರಣ್ಯ ಇಲಾಖೆಯವರು ಮೂಡಿಗೆರೆಯ ಹಳೆ ಕೋಟೆಗೆ ಅಭಿಮನ್ಯು & ಟೀಂ ಅನ್ನ ಸ್ಥಳಾಂತರ ಮಾಡಿದ್ದರು.

ಇದನ್ನೂ ಓದಿ: Belagavi: ಚುನಾವಣೆ ಹೊತ್ತಲ್ಲೇ ಬೆಳಗಾವಿ ಜಿಲ್ಲೆ ವಿಭಜನೆಗೆ ಆಸಕ್ತಿ ತೋರಿಸಿದ ಸರ್ಕಾರ

ಕುಮ್ಕಿ ಕ್ಯಾಂಪ್‌ನಲ್ಲಿದ್ದ ಅಭಿಮನ್ಯು, ಮಹೇಂದ್ರ, ಭೀಮ, ಧನಂಜಯ, ಸುಗ್ರೀವ, ಹರ್ಷ, ಅಶ್ವತ್ಥಾಮ, ಪ್ರಶಾಂತ ಹೆಸರಿನ ಆನೆಗಳು ಮತ್ತಾವರ ಗ್ರಾಮದ ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ನಲ್ಲಿ ಇರಿಸಲಾಗಿತ್ತು. ಆಗ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಇದರಿಂದ ಭಯಗೊಂಡ ಅರಣ್ಯ ಸಿಬ್ಬಂದಿ ಅಭಿಮನ್ಯ ಟೀಮನ್ನು ಮೂಡಿಗೆರೆಗೆ ಶಿಫ್ಟ್ ಮಾಡಿದ್ದರು.

ಅನಾವಶ್ಯಕವಾಗಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕೆಲಸವಿದ್ದರೆ ಬೆಳಗ್ಗೆ ಮಾಡಿಕೊಳ್ಳಿ ಎಂಬ ಮಾತುಗಳನ್ನು ಮೈಕ್ ಮೂಲಕ ಅನೌನ್ಸ್ ಮಾಡಿಸಿದ್ದಾರೆ. ಕಾಫಿ ತೋಟ ಹಾಗೂ ಇತರೆ ಕೆಲಸಗಳಿಗೆ ಅನಾವಶ್ಯಕವಾಗಿ ಹೋಗಬೇಡಿ ಎಂದು ಹೇಳಿದ್ದಾರೆ. ಆದರೆ ಇಲ್ಲಿನ ಜನರಲ್ಲಿ ಆನೆ ಭೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ