ಚಿಕ್ಕಮಗಳೂರಿನಲ್ಲಿ ಹನಿಟ್ರ್ಯಾಪ್ ನಡೆಸುತ್ತಿದ್ದ ಆರೋಪದಡಿ 6 ಮಹಿಳೆಯರೂ ಸೇರಿ 13 ಜನರು ಬಂಧನ

| Updated By: guruganesh bhat

Updated on: Aug 17, 2021 | 8:12 PM

ಬಂಧಿತ ಆರೋಪಿಗಳಿಂದ 1 ಲಕ್ಷ 97 ಸಾವಿರ ನಗದು, 5 ಕಾರುಗಳು, 17 ಮೊಬೈಲ್, 24 ಸಿಮ್ ಕಾರ್ಡ್ ಮತ್ತು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹನಿಟ್ರ್ಯಾಪ್ ನಡೆಸುತ್ತಿದ್ದ ಆರೋಪದಡಿ 6 ಮಹಿಳೆಯರೂ ಸೇರಿ 13 ಜನರು ಬಂಧನ
ಸಾಂಕೇತಿಕ ಚಿತ್ರ
Follow us on

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಆರೋಪದಡಿ ಗ್ಯಾಂಗ್ಒಂದನ್ನು ಪೊಲೀಸರು ಬಂಧಿಸಿದ್ದಾರೆ. 6 ಮಹಿಳೆಯರು ಸೇರಿ 13 ಜನರ ತಂಡ ಇದಾಗಿದ್ದು, ಮೋಸದಿಂದ ಹನಿಟ್ರ್ಯಾಪ್ ನಡೆಸಿ ವಂಚಿಸುತ್ತಿದ್ದರು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ. ಮೊದಲು ಈ ತಂಡದ 6 ಮಹಿಳೆಯರು  ಪುರುಷರನ್ನು ತಮ್ಮತ್ತ ಸೆಳೆದು ನಗ್ನ ವಿಡಿಯೋ ಮಾಡುತ್ತಿದ್ದರು.  ಈ ತಂಡದ ಮಹಿಳೆಯರು ಸಾರ್ವಜನಿಕರನ್ನು ಮೊದಲು ತಮ್ಮತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದರು. ಆ ಬಳಿಕ ಪೊಲೀಸರ ಸೋಗಿನಲ್ಲಿ ಎಂಟ್ರಿ ಕೊಡುತ್ತಿದ್ದ ಪುರುಷರ ತಂಡ ಹಣ ಕೊಟ್ಟರೆ ಎಫ್ಐಆರ್ ದಾಖಲಿಸುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿತ್ತು ಎಂದು ಪೊಲೀಸರು ಬಂಧಿತ ಗುಂಪಿನ ಕುರಿತು ಮಾಹಿತಿ ನೀಡಿದ್ದಾರೆ.

ನಂತರ ಮೋಸ ಹೋದವರು ಹಣ ಕೊಟ್ಟ ಬಳಿಕವೂ ಹನಿಟ್ರಾಪ್ ಗ್ಯಾಂಗ್ ನಿರಂತರ ಕಿರುಕುಳ ಕೊಡುತ್ತಿತ್ತು. ಮೋಸ ಹೋದವರ ಬಳಿ ಪದೇ ಪದೇ ಹಣ ನೀಡುವಂತೆ ಒತ್ತಡ ಹೇರುತ್ತಿತ್ತು. ಆ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿತ್ತು. ಜತೆಗೆ ಕುಟುಂಬ ಸದಸ್ಯರಿಗೂ ವಿಡಿಯೋ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿತ್ತು ಈ ಹನಿಟ್ರ್ಯಾಪ್ ತಂಡ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 1 ಲಕ್ಷ 97 ಸಾವಿರ ನಗದು, 5 ಕಾರುಗಳು, 17 ಮೊಬೈಲ್, 24 ಸಿಮ್ ಕಾರ್ಡ್ ಮತ್ತು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಚಿಕ್ಕಮಗಳೂರು ನಗರ, ಸಕಲೇಶಪುರ ಮೂಲದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: 

ಮರಳಿ ತಾಯ್ನಾಡಿಗೆ ಬರಬೇಡ, ಭಾರತದಲ್ಲೇ ಉಳಿದುಬಿಡು ಎನ್ನುತ್ತಿದ್ದಾರೆ ಪೋಷಕರು; ಮೈಸೂರಿನಲ್ಲಿರುವ ಅಪ್ಘನ್ ವಿದ್ಯಾರ್ಥಿಗಳ ಅಳಲು

ಚಿಕ್ಕಮಗಳೂರು: ಕಾರಿನ ಮೇಲೆ ಒಂಟಿ ಸಲಗ ದಾಳಿ; ಮೂವರಿಗೆ ಗಂಭೀರ ಗಾಯ, ಒಬ್ಬರ ಸ್ಥಿತಿ ಚಿಂತಾಜನಕ

(Chikkamagaluru Police arrest 10 people including 6 women who accused ran a Honeytrap)