ಚಿಕ್ಕಮಗಳೂರು: ಕಾರಿನ ಮೇಲೆ ಒಂಟಿ ಸಲಗ ದಾಳಿ; ಮೂವರಿಗೆ ಗಂಭೀರ ಗಾಯ, ಒಬ್ಬರ ಸ್ಥಿತಿ ಚಿಂತಾಜನಕ
ಚಿಕ್ಕಮಗಳೂರು: ಕಾರಿನಲ್ಲಿ ಹೋಗುತ್ತಿದ್ದವರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ನಡೆದಿದೆ. ಕಾಡಾನೆ ದಾಳಿಯಿಂದ ಮೂವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಒಮ್ನಿ ಕಾರಿನಲ್ಲಿ ಜೋಳ್ದಾಳ್ನಿಂದ ಹೊರನಾಡು ದೇವಸ್ಥಾನದ ಕಡೆಗೆ 9 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಕಾಡಾನೆ ಮಧ್ಯೆ ದಾರಿಯಲ್ಲಿ ಏಕಾಏಕಿ ಅಡ್ಡಬಂದಿದೆ. ಗಾಬರಿಯಿಂದ ಕಾರನ್ನ ರಿವರ್ಸ್ ತೆಗೆಯುವ ವೇಳೆ ಓಡಿಸಿಕೊಂಡ ಬಂದ ಒಂಟಿ ಸಲಗ ಕಾರನ್ನ ಪಲ್ಟಿ ಮಾಡಿದೆ. ಪರಿಣಾಮ ಚಂದ್ರೇಗೌಡ ಎಂಬುವರಿಗೆ […]
ಚಿಕ್ಕಮಗಳೂರು: ಕಾರಿನಲ್ಲಿ ಹೋಗುತ್ತಿದ್ದವರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ನಡೆದಿದೆ. ಕಾಡಾನೆ ದಾಳಿಯಿಂದ ಮೂವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಒಮ್ನಿ ಕಾರಿನಲ್ಲಿ ಜೋಳ್ದಾಳ್ನಿಂದ ಹೊರನಾಡು ದೇವಸ್ಥಾನದ ಕಡೆಗೆ 9 ಮಂದಿ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಕಾಡಾನೆ ಮಧ್ಯೆ ದಾರಿಯಲ್ಲಿ ಏಕಾಏಕಿ ಅಡ್ಡಬಂದಿದೆ. ಗಾಬರಿಯಿಂದ ಕಾರನ್ನ ರಿವರ್ಸ್ ತೆಗೆಯುವ ವೇಳೆ ಓಡಿಸಿಕೊಂಡ ಬಂದ ಒಂಟಿ ಸಲಗ ಕಾರನ್ನ ಪಲ್ಟಿ ಮಾಡಿದೆ. ಪರಿಣಾಮ ಚಂದ್ರೇಗೌಡ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅವನೀಶ್ ಎಂಬ ಮಗು ಸೇರಿದಂತೆ ಶೃತಿ, ಮೋಹಿನಿ ಹಾಗೂ ರಾಧಾಮ್ಮ ಎಂಬುವರಿಗೆ ಗಾಯಗಳಾಗಿದ್ದು, ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲು ಮಾಡಲಾಗಿದೆ. ಕುಂದೂರು-ಸಾರಗೋಡುವಿನಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿದೆ. ಈ ಕಾಡಿನ ಮಧ್ಯೆಯೇ ರಸ್ತೆಗಳು ಹಾದುಹೋಗಿವೆ. ಇದೇ ರಸ್ತೆಯಲ್ಲಿ ಜೋಳ್ದಾಳ್ನಿಂದ ಹೊರಟು ಆಲ್ದೂರು-ಕುಂದೂರು ಮಾರ್ಗವಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗಲು ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಕುಂದೂರು ಬಳಿಯ ಬಿ.ಸಿ ರೋಡ್ ಎಂಬಲ್ಲಿ ಒಂಟಿ ಸಲಗ ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿದೆ. ದಾಳಿ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಆಕ್ರೋಶ ಕುಂದೂರು-ಸಾರಗೋಡು ಭಾಗದಲ್ಲಿ ಕಾಡಾನೆಗಳ ದಾಳಿ ಆಗಾಗ ನಡೀತಲೇ ಇದ್ದು, ಬೆಳೆ ಹಾನಿ ಹೆಚ್ಚಾಗಿದೆ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ದಿನನಿತ್ಯ ಕಾಡಾನೆಗಳ ಭಯದಲ್ಲೇ ಜೀವನ ಮಾಡುವ ಅನಿವಾರ್ಯತೆ ಎದುರಾಗಿದೆ. ದಯವಿಟ್ಟು ಒಂಟಿ ಸಲಗವನ್ನ ಸೆರೆ ಹಿಡಿಯಿರಿ ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ
Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ
ಆಗಸ್ಟ್ 15 ಕೆಂಪುಕೋಟೆಯಿಂದ ಪ್ರಧಾನಿ ಭಾಷಣ ಮಾಡುವುದೇಕೆ? ಮೊಘಲರು ಕಟ್ಟಿಸಿದ ಕೋಟೆಯ ರೋಚಕ ಕಥೆ ಇಲ್ಲಿದೆ
(Elephant Attack on omni car at Chikmagalur and serious injury for many peoples)