AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ

ಚಾಣಕ್ಯ ನೀತಿ: ಸಾಧಿಸುವ ಗುರಿಯಿದ್ದಾಗ ಕೆಲವೊಂದಿಷ್ಟು ವಿಷಯಗಳನ್ನು ನೆನಪಿನಲ್ಲಿಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಗುರಿಯ ಕುರಿತಾಗಿ ಹೆಚ್ಚಿನ ಗಮನವಿರಬೇಕು ಎಂದು ಹೇಳಿದ್ದಾರೆ.

Chanakya Niti: ಜೀವನದಲ್ಲಿ ಯಶಸ್ಸು ಕಾಣಲು ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸಿ
ಚಾಣಕ್ಯ ನೀತಿ
TV9 Web
| Edited By: |

Updated on:Aug 16, 2021 | 2:22 PM

Share

ಆಚಾರ್ಯ ಚಾಣಕ್ಯ ತಮ್ಮ ಅನುಭವಗಳ ಮೂಲಕ ಅನೇಕ ನೀತಿ ಸಾರವನ್ನು ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಯಶಸ್ಸಿಗಾಗಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಶ್ರಮಪಟ್ಟು ಕೆಲಸ ಮಾಡಿದರೂ ಸಹ ಪದೇ ಪದೇ ಸೋಲೇ ಕಾಣುತ್ತಿದ್ದೀರಿ ಎಂದಾದರೆ ಚಾಣಕ್ಯರ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬಹುದು.

ಸಾಧಿಸುವ ಗುರಿಯಿದ್ದಾಗ ಕೆಲವೊಂದಿಷ್ಟು ವಿಷಯಗಳನ್ನು ನೆನಪಿನಲ್ಲಿಡಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಗುರಿಯ ಕುರಿತಾಗಿ ಹೆಚ್ಚಿನ ಗಮನವಿರಬೇಕು ಎಂದು ಹೇಳಿದ್ದಾರೆ. ಯಾವುದೇ ವ್ಯಕ್ತಿಯು ಕೆಲಸವನ್ನು ಮಾಡುವ ಮೊದಲು ಒಳ್ಳೆಯ ಯೋಜನೆ ಇರಬೇಕು. ಯೋಜನೆ ಇಲ್ಲದೇ ಕೆಲಸ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಯಶಸ್ವಿಯಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತದೆ. ಉತ್ತಮ ಯೋಜನೆಯ ಬಳಿಕ ಕೆಲಸವನ್ನು ನಿರ್ವಹಿಸಿದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಕಠಿಣ ಪರಿಶ್ರಮ ಚಾಣಕ್ಯರ ಪ್ರಕಾರ ಕಠಿಣ ಪರಿಶ್ರಮ ಮುಖ್ಯ. ಯಾವುದೇ ಕೆಲಸ ಯಶಸ್ಸು ಕಾಣಲು ಶ್ರಮಿಸಬೇಕು. ಯಾವುದೇ ಕೆಲಸಕ್ಕಾಗಿ ತೊಡಗಿಸಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಆದ್ದರಿಂದ ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಎಂದಿಗೂ ಹಿಂದೆ ಸರಿಯಬೇಡಿ.

ಯೋಜನೆ ಆಚಾರ್ಯ ಚಾಣಕ್ಯರು ಹೇಳುವಂತೆ ಕೆಲಸ ಮುಗಿದ ಬಳಿಕ ನಂತರ ಯೋಜನೆಯನ್ನು ಇತರರಿಗೆ ಹೇಳಿ. ಆದರೆ ಯಶಸ್ಸಿನ ಮೊದಲೇ ಯೋಜನೆಯನ್ನು ಬಹಿರಂಗಪಡಿಸಬೇಡಿ. ಕೆಲಸದ ಮೊದಲೇ ಯೋಜನೆಯನ್ನು ಬಹಿರಂಗಪಡಿಸಿದರೆ ಅಸೂಯೆ ಪಡುವ ಜನರು ಅಡೆತಡೆಗಳನ್ನು ತಂದೊಡ್ಡುತ್ತಾರೆ. ಆದ್ದರಿಂದ ಕೆಲಸ ಮುಗಿಯುವವರೆಗೂ ಯಶಸ್ಸಿನ ಹಿಂದಿನ ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಇದನ್ನೂ ಓದಿ:

Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ

Chanakya Niti: ಈ 4 ವಿಚಾರಗಳನ್ನು ಮರೆತಷ್ಟೂ ಒಳ್ಳೆಯದು; ನಿಮ್ಮಲ್ಲೂ ಅಂತಹ ಗುಣಗಳಿದ್ದರೆ ದಯವಿಟ್ಟು ಬಿಟ್ಟುಬಿಡಿ

Published On - 2:21 pm, Mon, 16 August 21

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು