Muharram 2021: ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?

ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಕಣ್ಣೀರಿನ ಹಬ್ಬವಾಗುತ್ತದೆ. ಶೋಕಾಚರಣೆಯಾಗುತ್ತದೆ.

Muharram 2021: ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?
ಮೊಹರಂ ಹಬ್ಬದ ಇತಿಹಾಸ, ಮಹತ್ವವೇನು?
Follow us
TV9 Web
| Updated By: ಆಯೇಷಾ ಬಾನು

Updated on: Aug 16, 2021 | 6:54 AM

ಮೊಹರಂ ಮುಸ್ಲಿಮರಿಗೆ ಪ್ರಮುಖ ತಿಂಗಳುಗಳಲ್ಲಿ ಒಂದಾಗಿದೆ ಹಾಗೂ ಇದು ಇಸ್ಲಾಮಿಕ್ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಮೊಹರಂ ತಿಂಗಳು ಆರಂಭವಾಗುತ್ತಿದ್ದಂತೆ ಇಸ್ಲಾಮ್ ಧರ್ಮದವರಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಾಗೂ ಮೊಹರಂ ಹಬ್ಬ ಕೂಡ ಆರಂಭವಾಗುತ್ತದೆ. ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತೆ.

ಹಿಜ್ರಿ ಕ್ಯಾಲೆಂಡರ್ ಅನ್ನು(Hijri Calender) ಪ್ರಕಾರ, ಮೊಹರಂ ಇಸ್ಲಾಮಿಕ್ ಹೊಸ ವರ್ಷದ ಮೊದಲ ತಿಂಗಳು ಮತ್ತು ಇದನ್ನು ಪವಿತ್ರ ತಿಂಗಳು ಎಂದು ಕೂಡ ಮುಸ್ಲಿಮರು ಪರಿಗಣಿಸುತ್ತಾರೆ. ಮುಸ್ಲಿಮರಿಗೆ ರಂಜಾನ್ ಕೂಡ ಪವಿತ್ರ ತಿಂಗಳಾಗಿದ್ದು ಈ ತಿಂಗಳಲ್ಲಿ 30 ದಿನಗಳ ಕಾಲ ಉಪವಾಸವಿಟ್ಟು ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಅಂತಿಮ ದಿನದಂದು ಅಮಾವಾಸ್ಯೆಯನ್ನು ನೋಡಿದ ನಂತರ ಮೊಹರಂ ಆರಂಭವಾಗುತ್ತದೆ.

ಮೊಹರಂ ಏಕೆ ಆಚರಿಸಲಾಗುತ್ತದೆ? ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬ. ಈ ಹಬ್ಬದಲ್ಲಿ ಹಿಂದೂಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಮೊಹರಂನ 10 ನೇ ದಿನವನ್ನು ಅಶುರಾ(Ashura) ಎಂದು ಕರೆಯುತ್ತಾರೆ. ಇದು ಮುಸ್ಲಿಮರಿಗೆ ಮಹತ್ವದ ದಿನವಾಗಿದೆ. ಸುನ್ನಿ ಮತ್ತು ಶಿಯಾ ಮುಸ್ಲಿಮರು ಮೊಹರಂ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅನೇಕ ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ನ ಹೊಸ ವರ್ಷದ ಆರಂಭವಾಗಿದೆ. ಶಾಂತಿಯ ಪ್ರತಿಬಿಂಬವಾಗಿದೆ. ಆದ್ರೆ ಇಸ್ಲಾಂನ ಶಿಯಾವನ್ನು ಅನುಸರಿಸುವ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ, ಪಶ್ಚಾತಾಪದ ದಿನವಾಗಿದೆ.

ಶಿಯಾ ಮುಸ್ಲಿಮರಿಗೆ, ಮೊಹರಂ ತಿಂಗಳು, ಪ್ರವಾದಿ ಮೊಹಮ್ಮದ್ ಪೈಗಂಬರ್ರ ಮೊಮ್ಮಗ ಹುಸೇನ್ ಇಬ್ನ್ ಅಲಿಯ ಸಾವನ್ನು ನೆನಪಿಸುತ್ತದೆ. ಖಲೀಫಾ ಯಜಿದ್ನಿಂದ ಕ್ರಿಸ್ತಶಕ 680 ರಲ್ಲಿ ಆಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಹುಸೇನ್ ನನ್ನು ಕೊಲ್ಲಲಾಯಿತು. ಹೀಗಾಗಿ ಅನೇಕ ಶಿಯಾಗಳು ಈ ತಿಂಗಳ ಪ್ರವಾದಿಯ ಕುಟುಂಬದ ಶೌರ್ಯವನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.

ಇದನ್ನು ಹೇಗೆ ಆಚರಿಸಲಾಗುತ್ತದೆ? ಅನೇಕ ಮುಸ್ಲಿಮರು ಆಶುರಾ ದಿನದಂದು ಉಪವಾಸವನ್ನು ಮಾಡುತ್ತಾರೆ, ಹಾಗೆಯೇ ಮೊಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಗಳಲ್ಲಿ ತೊಡಗುತ್ತಾರೆ. ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ, ಈ ವೇಳೆ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ.

ಏನಿದು ಯುದ್ಧ? ಪ್ರವಾದಿ ಮೊಹಮ್ಮದ್ ಅವರ ಉಪದೇಶಗಳನ್ನು ಅವರ ಮೊಮ್ಮಕಳು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಮೊಹಮ್ಮದ್ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿರುತ್ತಾರೆ. ಮೊಹಮ್ಮದ್ ರ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗುತ್ತಾರೆ. ಈ ದಂಪತಿಗೆ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್ ಎಂಬ ಇಬ್ಬರು ಮಕ್ಕಳಿರುತ್ತಾರೆ. ಹಜರತ್ ಅಲಿ ಅವರ ಬಳಿಕ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಸರ್ವ ದುರ್ಗುಣಗಳ ಸಂಪನ್ನನಾಗಿದ್ದ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಹೀಗಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ಯಜೀದ್ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕ ಇಮಾಮ್ ಹುಸೇನ್ಗೆ ಕೋಪವಿರುತ್ತದೆ. ಕೊನೆಗೆ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ. ಕೊನೆಗೆ ಇಮಾಮ್ ಹುಸೇನ್ ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

ಯಾವುದೇ ಬೇಡಿಗೆಗಳನ್ನು ಒಪ್ಪದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಕಣ್ಣೀರಿನ ಹಬ್ಬವಾಗುತ್ತದೆ. ಶೋಕಾಚರಣೆಯಾಗುತ್ತದೆ.

muharram 2021 2

ಬೆಂಕಿ ತುಳೀಯುವುದು

ಇದನ್ನೂ ಓದಿ: Islamic New Year 2021: ಇಂದಿನಿಂದ ಮುಸ್ಲಿಮರ ಹೊಸ ವರ್ಷ ಆರಂಭ, ವರ್ಷಾಚರಣೆಯ ಹಿಂದಿದೆ ವೀರ ಹುತಾತ್ಮನ ದುಃಖದ ಕಥೆ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ