Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ

ಚಾಣಕ್ಯ ನೀತಿ: ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಪದೇ ಪದೇ ವಿಫಲವಾಗುತ್ತಿದ್ದರೆ ಏನು ಮಾಡಬೇಕು ಎಂಬುದರ ಕುರಿತಾಗಿ ಆಚಾರ್ಯ ಚಾಣಕ್ಯರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ
ಚಾಣಕ್ಯ
Follow us
TV9 Web
| Updated By: shruti hegde

Updated on: Aug 15, 2021 | 1:47 PM

ಆಚಾರ್ಯ ಚಾಣಕ್ಯ ತನ್ನ ಅನುಭವಗಳ ಮೂಲಕ ಕೆಲವೊಂದಿಷ್ಟು ಸಲಹೆಗಳನ್ನು ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಆಚಾರ್ಯರ ಮಾತುಗಳನ್ನು ಜೀವನದಲ್ಲಿ ಪಾಲಿಸುವ ಮೂಲಕ ಸಕಲ ಸಂಪತ್ತನ್ನು ಗಳಿಸಬಹುದು. ಜತೆಗೆ ಜನರಿಂದ ಗೌರವವನ್ನು ಗಿಟ್ಟಿಸಿಕೊಳ್ಳಬಹುದು. ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಪದೇ ಪದೇ ವಿಫಲವಾಗುತ್ತಿದ್ದರೆ ಏನು ಮಾಡಬೇಕು ಎಂಬುದರ ಕುರಿತಾಗಿ ಆಚಾರ್ಯ ಚಾಣಕ್ಯ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಬಹುದಾಗಿದೆ.

ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಸಹ ಆಸೆ ಈಡೇರದಿದ್ದಾಗ ಮಾರ್ಗವನ್ನು ಬದಲಾಯಿಸಿ. ಆದರೆ ಎಂದಿಗೂ ಅದರ ತತ್ವವನ್ನು ಬದಲಾಯಿಸಬೇಡಿ. ಮರ ಯಾವಾಗಲೂ ಎಲೆಗಳನ್ನು ಉದುರಿಸಿ ಹೊಸ ಎಲೆಗಳನ್ನು ಪಡೆಯುತ್ತದೆಯೇ ಹೊರತು ಬೇರನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಗುರಿಯನ್ನು ತಲುಪಬೇಕು ಅಂದಾದಾಗ ಅದೆಷ್ಟೋ ಕಷ್ಟಗಳು ಎದುರಾಗುತ್ತವೆ. ಅವುಗಳನ್ನೆಲ್ಲಾ ಎದುರಿಸಿದರೆ ಮಾತ್ರ ಗುರಿಯನ್ನು ಸಾಧಿಸಲು ಸಾಧ್ಯ. ಎಂದಿಗೂ ಕೂಡಾ ಹತಾಶನಾಗದೇ ಗುರಿಯತ್ತ ಮುನ್ನುಗ್ಗಬೇಕು ಎಂದು ಹೇಳಿದ್ದಾರೆ. ನೀವು ಗುರಿಯತ್ತ ಸಾಗಲು ರೂಪಿಸಿರುವ ಮಾರ್ಗವನ್ನು ಎಂದಿಗೂ ಪರಿಶೀಲಿಸಿ. ಮಾರ್ಗ ಸರಿಯಾಗಿದ್ದಲ್ಲಿ ಮಾತ್ರ ಯಶಸ್ಸು ಕಾಣಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಕ್ರಮೇಣ ಮರವು ಎಲೆಗಳನ್ನು ಉದುರಿಸುತ್ತದೆಯೋ ಹೊರತು ಮೂಲವಾದ ಬೇರನ್ನು ಎಂದಿಗೂ ಬಿಡುವುದಿಲ್ಲ. ನಿಮ್ಮ ಗುರಿಯು ಯಾವಾಗಲೂ ಬೇರಿನಂತೆಯೇ ಇರಬೇಕು. ಎಂದಿಗೂ ಸಹ ಗುರಿಯನ್ನು ಬದಲಾಯಿಸಬಾರದು. ಅಗತ್ಯವಿದ್ದರೆ ತಂತ್ರಗಳನ್ನು ಬದಲಾಯಿಸಬಹುದೇ ವಿನಃ ಎಂದಿಗೂ ತತ್ವವನ್ನು ಬದಲಾಯಿಸಬೇಡಿ ಎಂದು ಹೇಳಿದ್ದಾರೆ. ಶ್ರಮವಹಿಸಿ ಕೆಲಸ ಮಾಡಿದರೆ ನಿಜವಾಗಿಯೂ ಗುರಿ ಸಾಧಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಇದನ್ನೂ ಓದಿ:

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ

Chanakya Niti: ಆರೋಗ್ಯವಾಗಿರಲು ಈ ವಿಷಯಗಳನ್ನು ನೆನಪಿನಲ್ಲಿಡಿ – ಚಾಣಕ್ಯ ನೀತಿ