AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ

ಚಾಣಕ್ಯ ನೀತಿ: ಕೆಲವರು ಸೂರ್ಯ ಉದಯವಾದ ನಂತರವೂ ಮಲಗುತ್ತಾರೆ. ಇದು ಅವರ ಶ್ರೇಯಸ್ಸಿಗೆ ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ
ಚಾಣಕ್ಯ
TV9 Web
| Edited By: |

Updated on:Aug 08, 2021 | 11:28 AM

Share

ಆಚಾರ್ಯ ಚಾಣಕ್ಯರು ತಮ್ಮ ಅನುಭವದ ಮೂಲಕ ಇಂದಿಗೂ ಅಳವಡಿಕೆಯಾಗುವ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಚಾಣಕ್ಯರು ಹೇಳುವ ನೀತಿ (Chanakya Niti) ಪಾಠವನ್ನು ಜನರು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಂತೋಷವನ್ನು ಕಾಣಬಹುದು. ವ್ಯಕ್ತಿಯು ಹಣಗಳಿಸುವುದು ಮುಖ್ಯ ಎಂದು ಚಾಣಕ್ಯರು (Acharya Chanakya) ಹೇಳುತ್ತಾರೆ. ಹಣದ ಕುರಿತಾದ ನಿರ್ಲಕ್ಷ್ಯ ಹಾಗೂ ಆಲಸ್ಯ ಸ್ವಭಾವದವರು ಎಂದಿಗೂ ಹಣ (Money) ಗಳಿಸುವುದಿಲ್ಲ. ಜತೆಗೆ ಅವರಲ್ಲಿ ಹಣ ಉಳಿಯುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮುಂಜಾನೆ ಮಲಗುವುದು ಕೆಲವರು ಸೂರ್ಯ ಉದಯವಾದ ನಂತರವೂ ಮಲಗುತ್ತಾರೆ. ಇದು ಅವರ ಶ್ರೇಯಸ್ಸಿಗೆ ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಬೆಳಿಗ್ಗೆ ಬೇಗ ಏಳುವ ಅಭ್ಯಾಸದಿಂದ ಶ್ರೇಯಸ್ಸು ತಾನಾಗಿಯೇ ಆಗುತ್ತದೆ. ಜತೆಗೆ ಲಕ್ಷ್ಮಿ ಅಂಥವರ ಮನೆಗೆ ಆಶೀರ್ವದಿಸುತ್ತಾಳೆ ಎಂದು ಚಾಣಕ್ಯರು ಹೇಳುತ್ತಾರೆ.

ಶುಚಿತ್ವ ಕೊರತೆ ಎಲ್ಲಿ ಸ್ವಚ್ಛತೆ ಇಲ್ಲವೋ ಅಲ್ಲಿ ಮಾತಾ ಲಕ್ಷ್ಮೀ ನೆಲೆಸುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳದವರು ಅಥವಾ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದವರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಎಂದಿಗೂ ಇರುವುದಿಲ್ಲ.

ಅತಿಯಾಗಿ ತಿನ್ನುವುದು ಚಾಣಕ್ಯರ ಪ್ರಕಾರ ಅತಿಯಾಗಿ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅವರಲ್ಲಿ ಎಂದಿಗೂ ಹಣ ಉಳಿಯುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಕೆಟ್ಟ ಪದಗಳನ್ನು ಮಾತನಾಡುವುದು ಯಾವಾಗಲೂ ಒಳ್ಳೆಯ ಮಾತುಗಳನ್ನಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಪ್ರಿಯವಾಗಿ ಮಾತನಾಡುವವರು ಹೆಚ್ಚು ಸ್ನೇಹವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಜನರ ಪ್ರೀತಿಯನ್ನು ಗಳಿಸುತ್ತಾರೆ. ಕಠಿಣವಾಗಿ ಮಾತನಾಡುವುದರಿಂದ ಸಂಬಂಧಗಳು ಹಾಳುಗುತ್ತವೆ. ಅಂಥವರ ಮನೆಗೆ ಎಂದಿಗೂ ಲಕ್ಷ್ಮಿ ದೇವಿ ಆಶೀರ್ವದಿಸುವುದಿಲ್ಲ.

ಇದನ್ನೂ ಓದಿ:

Chanakya Niti: ಆರೋಗ್ಯವಾಗಿರಲು ಈ ವಿಷಯಗಳನ್ನು ನೆನಪಿನಲ್ಲಿಡಿ – ಚಾಣಕ್ಯ ನೀತಿ

Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ

(Chanakya niti those people are not get money check in kannada)

Published On - 11:28 am, Sun, 8 August 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್