Islamic New Year 2021: ಇಂದಿನಿಂದ ಮುಸ್ಲಿಮರ ಹೊಸ ವರ್ಷ ಆರಂಭ, ವರ್ಷಾಚರಣೆಯ ಹಿಂದಿದೆ ವೀರ ಹುತಾತ್ಮನ ದುಃಖದ ಕಥೆ

Moharrum 2021: ಇಡೀ ಜಗತ್ತಿಗೆ ಜನವರಿ 1ರಂದು ಹೊಸ ವರ್ಷವಾದರೂ ಆಯಾ ಧರ್ಮಗಳು ತಮ್ಮದೇ ಆದ ಹೊಸ ವರ್ಷಗಳನ್ನು ಆಚರಿಸುತ್ತವೆ. ಹಿಂದೂಗಳಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾದ್ರೆ, ಮುಸ್ಲಿಮರಿಗೆ ಮೊಹರಂ ಹೊಸ ವರ್ಷ. ಹಾಗಾದ್ರೆ ಬನ್ನಿ ಮುಸ್ಲಿಮರ ಹೊರ ವರ್ಷ ಆಚರಣೆ ಹಾಗೂ ಅದರ ಹಿಂದಿನ ಇತಿಹಾಸವನ್ನು ತಿಳಿಯೋಣ.

Islamic New Year 2021: ಇಂದಿನಿಂದ ಮುಸ್ಲಿಮರ ಹೊಸ ವರ್ಷ ಆರಂಭ, ವರ್ಷಾಚರಣೆಯ ಹಿಂದಿದೆ ವೀರ ಹುತಾತ್ಮನ ದುಃಖದ ಕಥೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Aug 10, 2021 | 11:29 AM

ಇಸ್ಲಾಮಿಕ್ ಕ್ಯಾಲೆಂಡರ್(ಹಿಜರಿ ಕ್ಯಾಲೆಂಡರ್) ಪ್ರಕಾರ ಮೊಹರಂ ತಿಂಗಳಿಂದ ಮುಸ್ಲಿಮರಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಾಗೂ ಇದು ರಂಜಾನ್ ನಂತರ ಬರುವ ಎರಡನೇ ಪವಿತ್ರ ತಿಂಗಳು. ಇದು ಮೊಹರಂನಿಂದ ಆರಂಭವಾಗಿ ದುಲ್ ಅಲ್-ಹಿಜ್ಜಾದೊಂದಿಗೆ ಕೊನೆಯಾಗುತ್ತೆ.

ಹಿಜರಿ ಕ್ಯಾಲೆಂಡರ್ ಪ್ರಕಾರ ಮೊಹರಂ ತಿಂಗಳು ಇಸ್ಲಾಮಿಕ್ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಹೀಗಾಗಿ ಇದನ್ನು ಹಿಜ್ರಿ ಹೊಸ ವರ್ಷ ಎಂದೂ ಕರೆಯುತ್ತಾರೆ, ಇಸ್ಲಾಮಿಕ್ ಕ್ಯಾಲೆಂಡರ್ 354 ಅಥವಾ 355 ದಿನಗಳನ್ನು ಹೊಂದಿದೆ. ಗ್ರೆಗೋರಿಯನ್ ಕ್ಯಾಲೆಂಡರ್‌ಗೆ(Gregorian calendar) ಹೋಲಿಸಿದರೆ, ಇದು ಸರಿಸುಮಾರು 11 ದಿನಗಳು ಕಡಿಮೆ ಇರುತ್ತದೆ. ಇಸ್ಲಾಮಿಕ್ ಹೊಸ ವರ್ಷವು ಮೊಹರಂನಿಂದ ಪ್ರಾರಂಭವಾಗುತ್ತದೆ. ಇದನ್ನು ರಂಜಾನ್ ನಂತರ ಎರಡನೇ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ದುಲ್ ಅಲ್-ಹಿಜ್ಜಾದೊಂದಿಗೆ ಕೊನೆಗೊಳ್ಳುತ್ತದೆ. ಈ ವರ್ಷ, ಹಿಜರಿ ಹೊಸ ವರ್ಷವು ಆಗಸ್ಟ್ ಎರಡನೇ ವಾರದಲ್ಲಿ ಆರಂಭವಾಗಲಿದೆ.

ಇಸ್ಲಾಮಿಕ್ ಹೊಸ ವರ್ಷದ 2021 ದಿನಾಂಕ ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ, ಇಸ್ಲಾಮಿಕ್ ಹೊಸ ವರ್ಷದ ಮೊದಲ ದಿನ ಆಗಸ್ಟ್ 10 ಮಂಗಳವಾರ ಬರುತ್ತದೆ. ಆಗಸ್ಟ್ 9 ರಂದು ಭಾರತದ ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್ ಕದಹ್ 29 ನೇ ದಿನವನ್ನು ಆಚರಿಸಲಿದೆ. ಮೊಹರಂ ತಿಂಗಳು ಆಗಸ್ಟ್ 10 ರಿಂದ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಆರಂಭವಾಗುತ್ತದೆ. ಆಗಸ್ಟ್ 9 ರಂದು ಹುಣ್ಣಿಮೆ ಇದೆ. ಆಗಸ್ಟ್ 9 ರಂದು ಚಂದ್ರನನ್ನು ನೋಡದಿದ್ದರೆ, ಆಗಸ್ಟ್ 11 ರಿಂದ ಮೊಹರಂ ಆರಂಭವಾಗುತ್ತದೆ.

ವರ್ಷಾರಂಭದ ಇತಿಹಾಸ ಇಸ್ಲಾಮಿಕ್ ಪುರಾಣಗಳ ಪ್ರಕಾರ, ಇಸ್ಲಾಮಿಕ್ ಹೊಸ ವರ್ಷವು ಕ್ರಿಸ್ತಶಕ 622 ರಲ್ಲಿ ಪ್ರವಾದಿ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಮೆಕ್ಕಾದಿಂದ ಮದೀನಾಕ್ಕೆ ವಲಸೆ ಹೋಗುವುದರೊಂದಿಗೆ ಆರಂಭವಾಯಿತು. ಮುಂಬರುವ ವರ್ಷವನ್ನು ಹಿಜ್ರಿ 1443 ಎಎಚ್ ಎಂದು ಪರಿಗಣಿಸಲಾಗುತ್ತದೆ (ಲ್ಯಾಟಿನ್ ಭಾಷೆಯಲ್ಲಿ ಎಎಚ್ ಎಂದರೆ ಅನ್ನೋ ಹೆಗಿರೇ ಅಥವಾ ಹಿಜ್ರಾ ವರ್ಷ). ಹುಜ್ರಿ 1443 AH ಪ್ರವಾದಿ ಮೊಹಮ್ಮದ್ ವಲಸೆಯಿಂದ ಬಂದು 1443 ವರ್ಷಗಳಾಗಿವೆ ಎಂದು ಸೂಚಿಸುತ್ತದೆ.

ಈ ದಿನವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಯಾವುದೇ ದೊಡ್ಡ ಆಚರಣೆಗಳನ್ನು ಮಾಡಲಾಗುವುದಿಲ್ಲ. ಈ ದಿನದ ನೆನಪಿಗಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳು ಸಾರ್ವಜನಿಕ ರಜೆಯನ್ನು ಘೋಷಿಸಿವೆ.

ಇದರೊಂದಿಗೆ, ಪವಿತ್ರ ಮುಹರಂನ ಮೊದಲ 10 ದಿನಗಳು ಮುಸ್ಲಿಂ ಸಮುದಾಯಕ್ಕೆ, ವಿಶೇಷವಾಗಿ ಶಿಯಾ ಮುಸ್ಲಿಮರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಅವಧಿಯಲ್ಲಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಹಾಗೂ ಪತಿ ಹಜರತ್ ಅಲಿ ಮಗ ಹುಸೇನ್ ಇಬ್ನ್ ಅಲಿ ಅಲ್-ಹುಸೇನ್ ಮೊಹರಂ ತಿಂಗಳ 10ನೇ ದಿನ ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಅವರು ಕ್ರಿಸ್ತಶಕ 680 ರಲ್ಲಿ ನಿಧನರಾದರು. ಹೀಗಾಗಿ ಮೊಹರಂ ತಿಂಗಳ ಆರಂಭದಿಂದ 10 ದಿನಗಳ ಕಾಲ ಪುಣ್ಯ ಸ್ಮರಣೆ ನಡೆಯುತ್ತೆ.

ಇದನ್ನೂ ಓದಿ: ಪಾಕ್​​ನ ಸಿಂಧ್​ನಲ್ಲಿ 60 ಮಂದಿ ಹಿಂದೂಗಳು ಇಸ್ಲಾಂಗೆ ಮತಾಂತರ; ಬಲವಂತವಾಗಿ ನಡೆಯುತ್ತಿದೆ ಈ ಪ್ರಕ್ರಿಯೆ

Published On - 7:23 am, Tue, 10 August 21