ಪಾಕ್ನ ಸಿಂಧ್ನಲ್ಲಿ 60 ಮಂದಿ ಹಿಂದೂಗಳು ಇಸ್ಲಾಂಗೆ ಮತಾಂತರ; ಬಲವಂತವಾಗಿ ನಡೆಯುತ್ತಿದೆ ಈ ಪ್ರಕ್ರಿಯೆ
ಪಾಕಿಸ್ತಾನದ ಸಿಂಧ್ನಿಂದ ಹೀಗೆ ಮತಾಂತರದ ಬಗ್ಗೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ನಲ್ಲಿ 13 ವರ್ಷದ ಬಾಲಕಿ ಕವಿತಾ ಎಂಬುವಳನ್ನು ಅಪಹರಿಸಿ, ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು.
ಇಸ್ಲಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತದ ಮಲ್ಟಿ ಎಂಬ ಪ್ರದೇಶದಲ್ಲಿ ಸುಮಾರು 60 ಮಂದಿ ಹಿಂದುಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಅಲ್ಲಿನ ಮುನ್ಸಿಪಲ್ ಅಧ್ಯಕ್ಷನ ಎದುರಿಗೇ ಈ ಮತಾಂತರ ನಡೆದಿದ್ದು, ಇವರ ಬಳಿ ಒತ್ತಾಯ ಪೂರ್ವಕವಾಗಿ ಇಸ್ಲಾಂನ ಪ್ರಮಾಣವಚನ ಓದಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಕೇವಲ 4.5 ಮಿಲಿಯನ್ಗಳಷ್ಟೇ ಅಂದರೆ ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2ರಷ್ಟು ಮಾತ್ರ ಹಿಂದೂಗಳಿದ್ದಾರೆ. ಅದರಲ್ಲೂ ಈ ಸಿಂಧ್ ಪ್ರಾಂತದಲ್ಲೇ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ. ಇಲ್ಲಿನ ಪುರಸಭೆ ಅಧ್ಯಕ್ಷ ಅಬ್ದುಲ್ ರವೂಫ್ ನಿಜಾಮಾನಿಯೇ ಖುದ್ದಾಗಿ ನಿಂತು ಮತಾಂತರ ನಡೆಸುತ್ತಿರುವುದು ಗೊತ್ತಾಗಿದೆ. ಅವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿ, ಇವತ್ತು ನನ್ನ ನೇತೃತ್ವದಲ್ಲಿ 60 ಹಿಂದೂಗಳು ಮುಸ್ಲಿಂ ಧರ್ಮ ಸ್ವೀಕರಿಸಿದರು. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಹಾಗೇ, ಒಂದಷ್ಟು ಜನರನ್ನು ಕೂರಿಸಿಕೊಂಡು ಅವರಿಗೆ ಇಸ್ಲಾಂ ಬಗ್ಗೆ ಬೋಧಿಸುತ್ತಿರುವ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಪಾಕಿಸ್ತಾನದ ಸಿಂಧ್ನಿಂದ ಹೀಗೆ ಮತಾಂತರದ ಬಗ್ಗೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ನಲ್ಲಿ 13 ವರ್ಷದ ಬಾಲಕಿ ಕವಿತಾ ಎಂಬುವಳನ್ನು ಅಪಹರಿಸಿ, ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು. ಆಕೆಯನ್ನು ಮಧ್ಯದಲ್ಲಿ ಕೂರಿಸಿ, ಹಲವು ಮುಸ್ಲಿಂ ಮುಖಂಡರು ಸೇರಿ ಮತಾಂತರ ಮಾಡಿದ ಪ್ರಕ್ರಿಯೆಯ ವಿಡಿಯೋ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ: ‘ಇದರಲ್ಲಿ ಯಾರೇ ಇದ್ರೂ ಬಿಡಲ್ಲ‘; ವಂಚನೆ ಪ್ರಯತ್ನದ ಬಗ್ಗೆ ದರ್ಶನ್ ಎಚ್ಚರಿಕೆ
60 Hindus forcibly converted to Islam in Sindh province of Pakistan