ಅಮೆರಿಕದಲ್ಲಿ ವಿಪರೀತ ಬಿಸಿಲು, ಕಾಳ್ಗಿಚ್ಚು: ಹಲವು ರಾಜ್ಯಗಳಲ್ಲಿ ಸಂಕಷ್ಟ ಸ್ಥಿತಿ, ಆತಂಕದಲ್ಲಿ ಜನತೆ

ಅಮೆರಿಕದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಾಳ್ಗಿಚ್ಚಿನ ಭೀತಿ ಆವರಿಸಿದೆ.

ಅಮೆರಿಕದಲ್ಲಿ ವಿಪರೀತ ಬಿಸಿಲು, ಕಾಳ್ಗಿಚ್ಚು: ಹಲವು ರಾಜ್ಯಗಳಲ್ಲಿ ಸಂಕಷ್ಟ ಸ್ಥಿತಿ, ಆತಂಕದಲ್ಲಿ ಜನತೆ
ಅಮೆರಿಕದ ಕೃಷಿ ಭೂಮಿಗೂ ಕಾಳ್ಗಿಚ್ಚು ವ್ಯಾಪಿಸುತ್ತಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 11, 2021 | 4:21 PM

ಸ್ಯಾನ್​ಫ್ರಾನ್ಸಿಸ್​ಕೊ: ಅಮೆರಿಕದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಾಳ್ಗಿಚ್ಚಿನ ಭೀತಿ ಆವರಿಸಿದೆ. ಬೆಂಕಿ ಅನಾಹುತವಾಗಬಹುದು ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹಲವು ಗ್ರಾಮ, ನಗರಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಅಮೆರಿಕದ ಪಶ್ಚಿಮ ಪ್ರಾಂತ್ಯಗಳಲ್ಲಿ ಬೆಂಕಿಯ ಉಪಟಳ ಹೆಚ್ಚಾಗಿದೆ. ಒಳನಾಡು ಮತ್ತು ಮರುಭೂಮಿ ಪ್ರದೇಶಗಳಲ್ಲಿ ಉಷ್ಣಾಂಶ ಒಂದೇ ಸಮನೆ ಏರಿಕೆ ಕಾಣುತ್ತಿದೆ. ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಶನಿವಾರ ಉಷ್ಣಾಂಶ 53 ಡಿಗ್ರಿ ಸೆಂಟಿಗ್ರೇಡ್ ತಲುಪಿತ್ತು. ಭಾನುವಾರ 54 ಡಿಗ್ರಿ ಸೆಂಟಿಗ್ರೇಡ್​ ಉಷ್ಣಾಂಶ ವರದಿಯಾಗಿತ್ತು. ಜುಲೈ 1913ರಲ್ಲಿ ದಾಖಲಾಗಿದ್ದ 57 ಡಿಗ್ರಿ ಉಷ್ಣಾಂಶ ಈವರೆಗಿನ ಅತ್ಯುಧಿಕ ಉಷ್ಣಾಂಶ ಎನಿಸಿದೆ.

ನೆವಾಡ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕುರುಚಲು ಕಾಡುಗಳಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ. ದಟ್ಟಕಾಡಿನತ್ತ ವೇಗವಾಗಿ ಮುನ್ನುಗ್ಗುತ್ತಿರುವ ಕಾಳ್ಗಿಚ್ಚಿನ ವೇಗವನ್ನು ಕಡಿಮೆ ಮಾಡುವ ಉಪಾಯಗಳು ಫಲ ನೀಡುತ್ತಿಲ್ಲ. ನೆವಾಡ ರಾಜ್ಯದ ವಾಶೊಯ್ ಕೌಂಟಿ ಪ್ರದೇಶದಲ್ಲಿ ಜನರ ಜೀವ ಮತ್ತು ಆಸ್ತಿಗೆ ಧಕ್ಕೆಯೊದಗುವ ಅಪಾಯ ಎದುರಾಗಿದೆ. ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿ ಅಗ್ನಿಶಾಮಕ ಇಲಾಖೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ಈ ಪ್ರದೇಶದಲ್ಲಿ ಬೀಸುತ್ತಿರುವ ಪ್ರಬಲ ಗಾಳಿಯು ಕಾಳ್ಗಿಚ್ಚು ವೇಗವಾಗಿ ಹಬ್ಬಲು ನೆರವಾಗುತ್ತಿದೆ. ಕೇವಲ ಮೂರು ದಿನಗಳಲ್ಲಿ 311 ಚದರ ಕಿಲೋಮೀಟರ್​ಗಳಷ್ಟು ಪ್ರದೇಶಕ್ಕೆ ಕಾಳ್ಗಿಚ್ಚು ವಿಸ್ತರಿಸಿದೆ. ವಾತಾವರಣದ ಉಷ್ಣಾಂಶ ಮತ್ತು ಕಾಳ್ಜಿಚ್ಚಿನಿಂದ ಉಷ್ಣ ಸಂಬಂಧಿ ಕಾಯಿಲೆಗಳು ಹೆಚ್ಚಾಗಬಹುದು ಎಂದು ರಾಷ್ಟ್ರೀಯ ಹವಾಮಾನ ಸೇವೆ (National Weather Service) ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್​ ಪೂರೈಕೆಯಲ್ಲಿಯೂ ವ್ಯತ್ಯಯವಾಗಬಹುದು ಎಂದು ಕ್ಯಾಲಿಫೋರ್ನಿಯಾ ಪವರ್​ ಗ್ರಿಡ್​ ಎಚ್ಚರಿಸಿದೆ.

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದ ಜನರು ಸಹಜವಾಗಿಯೇ ಹವಾನಿಯಂತ್ರಕಗಳ ಬಳಕೆ ಹೆಚ್ಚು ಮಾಡಿದ್ದಾರೆ. ಇದರ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸುತ್ತಿರುವ ಕಾಳ್ಗಿಚ್ಚಿನಿಂದ ಪವರ್​ ಗ್ರಿಡ್​ನ ಹೆಚ್ಚಿನ ಸಾಮರ್ಥ್ಯದ ವೈರ್​ಗಳಿಗೂ ಧಕ್ಕೆಯಾಗುವ ಅಪಾಯವಿದೆ ಎಂದು ಕ್ಯಾಲಿಫೋರ್ನಿಯಾ ಪವರ್​ ಗ್ರಿಡ್​ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಪಾಮ್​ ಸ್ಪ್ರಿಂಗ್ಸ್​ನಲ್ಲಿ ಸತತ ನಾಲ್ಕನೇ ದಿನ ಉಷ್ಣಾಂಶ 49 ಡಿಗ್ರಿ ಸೆಂಟಿಗ್ರೇಡ್ ದಾಟಿದೆ. ಕ್ಯಾಲಿಫೋರ್ನಿಯಾದ ಕೃಷಿ ವಲಯದ ಕಣಿವೆಗಳಲ್ಲಿ ಉಷ್ಣಾಂಶ 44 ಡಿಗ್ರಿ ತಲುಪಿದೆ. ಈವರೆಗೆ ದಾಖಲಾದ ತಾಪಮಾನದ ಗರಿಷ್ಠ ಪ್ರಮಾಣಕ್ಕಿಂತ ಇದು ಕೇವಲ ಒಂದು ಡಿಗ್ರಿಯಷ್ಟು ಕಡಿಮೆ. ಲಾಸ್​ವೆಗಾಸ್​ನಲ್ಲಿ ಶನಿವಾರ 47 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಈವರೆಗೆ ದಾಖಲಾಗಿರುವ ಗರಿಷ್ಠ ಪ್ರಮಾಣದ ಉಷ್ಣಾಂಶ.

ಇದನ್ನೂ ಓದಿ: ಅಮೆರಿಕ, ಕೆನಡಾದಲ್ಲಿ ಬಿಸಿಗಾಳಿ ಹಾವಳಿಗೆ 200 ಸಾವು: 49.5 ಡಿಗ್ರಿ ಸೆಂಟಿಗ್ರೇಡ್​ಗೆ ಏರಿದ ಉಷ್ಣಾಂಶ

ಇದನ್ನೂ ಓದಿ: Paytm IPO: ಪೇಟಿಎಂ ಆಡಳಿತ ಮಂಡಳಿಯಲ್ಲಿ ಚೀನೀ ನಾಗರಿಕರಿರುವ ಹುದ್ದೆಗಳಿಗೆ ಭಾರತೀಯರು, ಅಮೆರಿಕನ್ನರ ನೇಮಕ

(Heat Wave in America California wildfire Spreads in US West Region)

Published On - 4:21 pm, Sun, 11 July 21

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ