AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ಜಲ ಪೂಜನೀಯ, ಪಾರಂಪರಿಕ ಮತ್ತು ಪೌರಾಣಿಕ: ಜೀವ ಜಲಕ್ಕೆ ಇದೆ ಸರ್ವಶ್ರೇಷ್ಠ ಸ್ಥಾನ, ಏನದು ತಿಳಿಯೋಣ

Holy Water: ಜೀವ ಜಲ ಎಂಬುದು ಪೂಜನೀಯ, ಪೌರಾಣಿಕ ಮತ್ತು ಪಾರಂಪರಿಕವೂ ಹೌದು. ಜೀವ ಜಲಕ್ಕೆ ಸರ್ವಶ್ರೇಷ್ಠ ಸ್ಥಾನವಿದೆ. ಆದರೆ ಇಂದು ಸ್ನಾನದ ಬಗ್ಗೆ ತಿಳಿದುಕೊಳ್ಳುತ್ತಾ, ಸ್ನಾನ ಮತ್ತು ನೀರಿನ ವಿಚಾರವಾಗಿ ಮಾಹಿತಿ ಅರಿಯೋಣ.

ಜೀವ ಜಲ ಪೂಜನೀಯ, ಪಾರಂಪರಿಕ ಮತ್ತು ಪೌರಾಣಿಕ: ಜೀವ ಜಲಕ್ಕೆ ಇದೆ ಸರ್ವಶ್ರೇಷ್ಠ ಸ್ಥಾನ, ಏನದು ತಿಳಿಯೋಣ
ಜೀವ ಜಲ ಪೂಜನೀಯ, ಪಾರಂಪರಿಕ ಮತ್ತು ಪೌರಾಣಿಕ: ಜೀವ ಜಲಕ್ಕೆ ಇದೆ ಸರ್ವಶ್ರೇಷ್ಠ ಸ್ಥಾನ, ಏನದು ತಿಳಿಯೋಣ
TV9 Web
| Updated By: ಆಯೇಷಾ ಬಾನು|

Updated on:Aug 17, 2021 | 7:57 AM

Share

ಜೀವ ಜಲ ಎಂಬುದು ಪೂಜನೀಯ, ಪೌರಾಣಿಕ ಮತ್ತು ಪಾರಂಪರಿಕವೂ ಹೌದು. ಜೀವ ಜಲಕ್ಕೆ ಸರ್ವಶ್ರೇಷ್ಠ ಸ್ಥಾನವಿದೆ. ಆದರೆ ಇಂದು ಸ್ನಾನದ ಬಗ್ಗೆ ತಿಳಿದುಕೊಳ್ಳುತ್ತಾ, ಸ್ನಾನ ಮತ್ತು ನೀರಿನ ವಿಚಾರವಾಗಿ ಮಾಹಿತಿ ಅರಿಯೋಣ. ಜೀವ ಜಲವೆಂಬುದು ಪವಿತ್ರ. ಅಸಲಿಗೆ ಜಲ ಎಂಬುದು ಇಲ್ಲದಿದ್ದರೆ ಜೀವ ಎಲ್ಲ ಎಂಬುದು ಸರ್ವವಿಧಿತ. ಜೀವನದ ಆರಂಭದಿಂದ ಹಿಡಿದು ಜೀವನದ ಅಂತ್ಯ ಕಾಲದವರೆಗೂ ನೀರು ಬೇಕೇಬೇಕು. ಬನ್ನೀ, ಯಾವ ಯಾವ ಧರ್ಮದಲ್ಲಿ, ನೀರನ್ನು ಅತ್ಯಂತ ಪವಿತ್ರ ಎಂದು ಕರೆಯಲಾಗಿದೆ ನೋಡೋಣ.

ಮನುಷ್ಯನ ಶರೀರ ಪಂಚ ತತ್ತ್ವಗಳಿಂದ ಕೂಡಿದೆ. ಪ್ರಾಣ ದಾತ ನೀರಿಗೆ ಸನಾತನ ಧರ್ಮದಲ್ಲಿ ಅತ್ಯಂತ ಹೆಚ್ಚು ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಬಹುಶಃ ನೀರು ಇಲ್ಲದೆ ಯಾವುದೇ ಕಾರ್ಯ ಪೂರ್ಣವಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಗಂಗಾ ಜಲಕ್ಕೆ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ಇತರೆ ಧರ್ಮಗಳಲ್ಲಿಯೂ ಇದನ್ನು ಕಾಣಬಹುದು.

ಹಿಂದೂ ಧರ್ಮದಲ್ಲಿದೆ ಗಂಗಾ ಜಲಕ್ಕೆ ಅತ್ಯಂತ ಪವಿತ್ರ ಸ್ಥಾನ:

ಹೌದು, ಹಿಂದೂ ಧರ್ಮದಲ್ಲಿ ಗಂಗಾ ಜಲಕ್ಕೆ ಅತ್ಯಂತ ಪವಿತ್ರ ಸ್ಥಾನ ನೀಡಲಾಗಿದೆ. ಸನಾತನ ಪರಂಪರೆಯಲ್ಲಿ ಮನುಷ್ಯನ ಉಗಮದಿಂದ ಮರಣದವರೆಗೂ ನೀರಿನ ಮಹತ್ವ ಗುಪ್ತಗಾಮಿನಿಯಂತೆ ಹರಿಯುತ್ತದೆ. ನಾನಾ ಧರ್ಮ ಕಾರ್ಯಗಳಿಂದ ಹಿಡಿದು ಎಲ್ಲ ಸಂಸ್ಕಾರಗಳಲ್ಲಿಯೂ ನೀರಿನ ಉಪಯೋಗ ಕಾಣಬಹುದು.

ನೀರಿನ ಜೊತೆ ಅನೇಕ ಆಧ್ಯಾತ್ಮಕ ಶಕ್ತಿಗಳು ಬೆಸೆದಿವೆ. ಗಂಗಾ ಜಲವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಪವಿತ್ರ ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡಲು ಇಡೀ ವಿಶ್ವದ ಮಂದಿ 12 ವರ್ಷ ಕಾಲ ಕಾಯುತ್ತಾರೆ. 1 2 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳದಲ್ಲಿ ಸ್ನಾನ ಮಾಡಿ, ಗಂಗಾ ಜಲವನ್ನು ಪಾತ್ರೆಗಳಲ್ಲಿ ತುಂಬಿಕೊಂಡು ತೆಗೆದುಕೊಂಡು ಹೋಗುತ್ತಾರೆ. ಪವಿತ್ರ ಗಂಗಾ ಜಲ ಸೇವನೆಯಿಂದ ಜೀವನ ಸಾರ್ಥಕತೆ ಕಾಣಬಹುದು, ಅಷ್ಟೇ ಅಲ್ಲ; ಜೀವನ ಮುಕ್ತಿ ಪಡೆಯಲು ಸಹ ಜೀವನದ ಕೊನೆಗಾಲದಲ್ಲಿ ಮೂರು ಬಾರಿ ಗಂಗಾ ಜಲ ಬಾಯಿಗೆ ಬಿಡುತ್ತಾರೆ. ಅದರಿಂದ ಜೀವನ ಮುಕ್ತಿ ಸಿಗುತ್ತದೆ ಎಂಬುದು ನಂಬಿಕೆ. ಅಷ್ಟೇ ಅಲ್ಲ; ಕೊನೆಗೆ ಗಂಗಾ ನದಿಯಲ್ಲಿ ಅಸ್ಥಿಯನ್ನು ವಿಸರ್ಜಸುವುದು ಸಹ ಮಾನವ ಜನ್ಮದ ಮುಕ್ತಿಗೆ ಸೋಪಾನ ಎಂಬುದು ಹಿಂದೂಗಳ ಪವಿತ್ರ ನಂಬಿಕೆ.

ಸಿಖ್​ ಜನಾಂಗದಲ್ಲಿ ಪವಿತ್ರ ಸರೋವರಗಳ ನೀರಿಗೆ ಇದೆ ಮಹತ್ವ: ಸಿಖ್​ ಧರ್ಮದಲ್ಲಿಯೂ ನೀರಿಗೆ ಮಹತ್ವಪೂರ್ಣಸ್ಥಾನ ನೀಡಲಾಗಿದೆ. ಸಿಖ್​ ಜನಾಂಗದಲ್ಲಿ ಪವಿತ್ರ ಸರೋವರ. ಹಾಗಾಗಿಯೇ ಪ್ರಮುಖ ಗುರುದ್ವಾರಗಳಲ್ಲಿ ಪವಿತ್ರ ಸರೋವರಗಳಿದ್ದು, ಆ ಸರೋವರದ ನೀರಿಗೆ ಪಾವಿತ್ರ್ಯತೆ ಕಲ್ಪಿಸಲಾಗಿದೆ. ಅಮೃತಸರದಲ್ಲಿರುವ ಪವಿತ್ರ ಸ್ವರ್ಣಮಂದಿರದಲ್ಲಿಯೂ ಸರೋವರ ಇದೆ. ಅಮೃತದಂತಹ ಆ ಸರೋವರದ ನೀರಿಗೆ ಅಮೃತದ ಸ್ಥಾನವಿದೆ. ಅದಕ್ಕೆ ಅಮೃತ ಜಲ ಎಂದು ಕರೆಯುತ್ತಾರೆ.

ಇನ್ನು ಕ್ರೈಸ್ತ ಧರ್ಮದಲ್ಲಿಯೂ ಇದೆ ನೀರಿಗೆ ಪವಿತ್ರ ಸ್ಥಾನ: ಬೇರೆ ಬೇರೆ ಧರ್ಮಗಳಲ್ಲಿ ನೀರಿಗೆ ಪವಿತ್ರ ಸ್ಥಾನ ನೀಡಿರುವಂತೆ ಕ್ರೈಸ್ತ ಧರ್ಮದಲ್ಲಿಯೂ ನೀರಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಮಗುವಿನ ಬ್ಯಾಪ್ಟಿಸ್ಟ್​ ಮಾಡುವ ಕಾಲದಲ್ಲಿ ಪವಿತ್ರ ಜಲ ಪ್ರೋಕ್ಷಣೆ ನಡೆಯುತ್ತದೆ. ಇನ್ನೂ ಕ್ರೈಸ್ತ ಧರ್ಮದಲ್ಲಿ ಇಂತಹ ಅನೇಕ ಕಾಲ ಘಟ್ಟಗಳಲ್ಲಿ ನೀರಿನ ಬಳಕೆ ನಡೆಯುತ್ತೆ.

ಇಸ್ಲಾಂನಲ್ಲಿಯೂ ನೀರಿಗೆ ಪವಿತ್ರ ಸ್ಥಾನವಿದೆ:

ಮುಸಲ್ಮಾನರಲ್ಲಿಯೂ ನೀರಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಮುಸಲ್ಮಾನರು ಪವಿತ್ರ ಹಜ್​ ಯಾತ್ರೆ ಕೈಗೊಳ್ಳುತ್ತಾರೆ. ಆ ವೇಳೆ ಮೆಕ್ಕಾದಲ್ಲಿರುವ ಬಾವಿಗಳಲ್ಲಿ ಸಂಗ್ರಹಿಸಿ ತರುವ ನೀರಿಗೆ ‘ಆಬೆ ಜಮ್ ಜಮ್​’ ಎಂದು ಕರೆಯುತ್ತಾರೆ. ಅಬೆ ಜಮ್ ಜಮ್ ಅನ್ನು ದರ್ಗಾಗಳಲ್ಲಿಯೂ ಕೊಡುತ್ತಾರೆ. ಚಿಕ್ಕ ಚಿಕ್ಕ ಬಾಟಲಿಗಳಲ್ಲಿ ಸಂಗ್ರಹಿಸಿ, ಪವತ್ರ ಜಲವನ್ನು ತರುತ್ತಾರೆ. ಈ ಪವಿತ್ರ ನೀರಿನ ಸೇವನೆಯಿಂದ ಜೀವನದ ಸಕಲ ಸಂಕಷ್ಟಗಳೂ ದೂರವಾಗುತ್ತವೆ ಎಂಬ ನಂಬಿಕೆಯಿದೆ.

(religious importance and significance of holy water in different religions)

Published On - 7:56 am, Tue, 17 August 21