Chanakya Niti: ಈ 4 ವಿಚಾರಗಳನ್ನು ಮರೆತಷ್ಟೂ ಒಳ್ಳೆಯದು; ನಿಮ್ಮಲ್ಲೂ ಅಂತಹ ಗುಣಗಳಿದ್ದರೆ ದಯವಿಟ್ಟು ಬಿಟ್ಟುಬಿಡಿ

ಶಿಸ್ತಿನ ಮುಖೇನ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೇ ಹೊರತು ಬೇಕಾಬಿಟ್ಟಿ ಬದುಕಿದರೆ ಅದು ಸಾಧ್ಯವಿಲ್ಲ. ಜತೆಗೆ, ಅಂತಹವರ ಬಳಿ ಸಂಪತ್ತು ನಿಲ್ಲುವುದಿಲ್ಲ ಎಂದು ಚಾಣಕ್ಯ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ನಾವು ಮರೆಯಬೇಕಾದ ಆ ಅಭ್ಯಾಸಗಳು ಯಾವುವು ಎಂದು ತಿಳಿದುಕೊಳ್ಳೋಣ.

Chanakya Niti: ಈ 4 ವಿಚಾರಗಳನ್ನು ಮರೆತಷ್ಟೂ ಒಳ್ಳೆಯದು; ನಿಮ್ಮಲ್ಲೂ ಅಂತಹ ಗುಣಗಳಿದ್ದರೆ ದಯವಿಟ್ಟು ಬಿಟ್ಟುಬಿಡಿ
ಚಾಣಕ್ಯ ನೀತಿ
Follow us
TV9 Web
| Updated By: Skanda

Updated on: Aug 15, 2021 | 6:55 AM

ಚಾಣಕ್ಯ ನೀತಿಗೆ ಭಾರತದಲ್ಲಿ ಅತ್ಯುನ್ನತ ಸ್ಥಾನವಿದೆ. ಧರ್ಮ, ನೈತಿಕತೆ, ರಾಜಕೀಯ, ಸಂಬಂಧ, ಸಾಮಾಜಿಕ ನೀತಿ ಹೀಗೆ ಬೇರೆ ಬೇರೆ ವಲಯಗಳ ವಿಚಾರಗಳನ್ನು ಒಳಗೊಂಡ ಜ್ಞಾನ ಸಂಪತ್ತು ಚಾಣಕ್ಯ ನೀತಿ. ನೈತಿಕ ವಿಚಾರಗಳಿಂದ ಹಿಡಿದು ಬದುಕಿನ ಹಲವು ತತ್ವಗಳಿಗೆ ಪೂರಕವಾಗುವ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಬದುಕಿನಲ್ಲಿ ಹೇಗೆ ಯಶಸ್ವಿಯಾಗಬೇಕು, ಯಾವ ಮಾರ್ಗದಲ್ಲಿ ಸಾಗಬೇಕು, ಏನು ಮಾಡಬೇಕು, ಮಾಡಬಾರದು ಎಂಬ ಒಳಗುಟ್ಟುಗಳನ್ನು ಹೇಳಿಕೊಡುವ ಚಾಣಕ್ಯ ನೀತಿಯನ್ನು ಇಂದಿನ ಕಾಲಕ್ಕೂ ಅನ್ವಯಿಸಬಹುದು. ಹಲವು ಗಂಭೀರ ವಿಚಾರಗಳನ್ನು ಕೃತಿ ಮೂಲಕ ಪ್ರಸ್ತುತಪಡಿಸುವ ಚಾಣಕ್ಯ ಜೀವನ ನೀತಿಗೆ ಸಂಬಂಧಿಸಿದ ಕೆಲ ಮಾತುಗಳನ್ನೂ ಹೇಳಿದ್ದಾರೆ.

ಚಾಣಕ್ಯ ತಮ್ಮ ಕೃತಿಗಳಲ್ಲಿ ಮನುಷ್ಯನ ಜೀವನ ಉತ್ತಮಗೊಳ್ಳುವುದಕ್ಕೆ ಬೇಕಾದ ಕೆಲ ಸಲಹೆಗಳನ್ನು ನೀಡಿದ್ದಾರೆ. ಬದುಕಿನಲ್ಲಿ ಶ್ರಮ, ದುಡಿಮೆ, ಅಂತಃಕರಣ, ಮಾನವೀಯತೆ ಹೇಗೆ ಮುಖ್ಯವೋ ಶಿಸ್ತು ಕೂಡಾ ಅಷ್ಟೇ ಮುಖ್ಯ ಎನ್ನುವ ಅವರು, ಬದುಕಿನಲ್ಲಿ ಅರಿವಿಲ್ಲದೇ ಅಳವಡಿಸಿಕೊಳ್ಳುವ ಅಭ್ಯಾಸಗಳು ಬಡತನಕ್ಕೆ ದಾರಿಯಾಗುತ್ತವೆ ಎಂದು ಎಚ್ಚರಿಸಿದ್ದಾರೆ. ಬಹುಮುಖ್ಯವಾಗಿ ಕೆಲವು ಶಿಸ್ತುಕ್ರಮಗಳು ಜೀವನಕ್ಕೆ ಮುಖ್ಯ ಎನ್ನುವ ಅವರು, ಶಿಸ್ತಿನ ಮುಖೇನ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕೇ ಹೊರತು ಬೇಕಾಬಿಟ್ಟಿ ಬದುಕಿದರೆ ಅದು ಸಾಧ್ಯವಿಲ್ಲ. ಜತೆಗೆ, ಅಂತಹವರ ಬಳಿ ಸಂಪತ್ತು ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ನಾವು ಮರೆಯಬೇಕಾದ ಆ ಅಭ್ಯಾಸಗಳು ಯಾವುವು ಎಂದು ತಿಳಿದುಕೊಳ್ಳೋಣ.

ಅಶುದ್ಧತೆ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ ಅಂತಹವರ ಬದುಕು ಅಸಹನೀಯವಾಗುತ್ತದೆ. ಹೀಗಾಗಿ ಮನೆ, ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯ. ಯಾರು ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅವರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಜತೆಗೆ, ಸಮಾಜದಲ್ಲಿ ಗೌರವಾದರಗಳೂ ಸಿಗುವುದಿಲ್ಲ. ಹೀಗಾಗಿ ಲಕ್ಷ್ಮಿ ಕೃಪೆಗೆ ಪಾತ್ರರಾಗುವುದರೊಂದಿಗೆ ಸಮಾಜದಲ್ಲಿ ಗೌರವ ಪಡೆಯಲು ಶುಭ್ರ ಬಟ್ಟೆಗಳನ್ನು ಧರಿಸುವುದರಿಂದ ಹಿಡಿದು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ತನಕ ಗಮನ ಹರಿಸಬೇಕು.

ಅಸೂಯೆ ಸದಾ ಇನ್ನೊಬ್ಬರಿಗೆ ಕೇಡು ಬಯಸುವವರ ಬಳಿ, ಕಹಿ ಮಾತುಗಳನ್ನು ಆಡುವವರ ಬಳಿ ಲಕ್ಷ್ಮಿ ಸುಳಿಯುವುದಿಲ್ಲ. ಮಾತಿನ ಮೂಲಕ ಇನ್ನೊಬ್ಬರನ್ನು ನೋಯಿಸುವುದು, ಹೀಯಾಳಿಸುವುದು, ಟೀಕಿಸುವುದು ಮಾಡುತ್ತಿದ್ದರೆ ಅವರು ಧನಿಕರಾಗಲಾರರು. ಜತೆಗೆ, ಯಾರ ಸ್ನೇಹವನ್ನೂ ಸಂಪಾದಿಸಲಾರರು ಎನ್ನುವುದು ಚಾಣಕ್ಯರ ಅಭಿಮತ.

ಆಲಸ್ಯ ನಿದ್ರೆ ನಮ್ಮ ದೇಹಕ್ಕೆ ವಿಶ್ರಾಂತಿ ಒದಗಿಸಲು ಅವಶ್ಯಕವಾದರೂ ಅದು ಸೋಮಾರಿತನದ ಸಂಕೇತವಾಗಬಾರದು. ಸೂರ್ಯೋದಯ ಹಾಗೂ ಸೂರ್ಯಾಸ್ತದ ಹೊತ್ತಲ್ಲಿ ಮಲಗಿ ಕಾಲಹರಣ ಮಾಡುವವರು ಲಕ್ಷ್ಮಿ ಕೃಪೆಗೆ ಪಾತ್ರರಾಗುವುದು ಸಾಧ್ಯವಿಲ್ಲ. ಹಾಗೆ ಮಾಡಿದಲ್ಲಿ ಹಣ ಕೈಜಾರಿ ಹೋಗುತ್ತದೆ ಎಂದು ಚಾಣಕ್ಯ ಅಭಿಪ್ರಾಯಪಟ್ಟಿದ್ದಾರೆ.

ಅತಿ ಆಸೆ ಹಣ ಮಾಡಬೇಕು, ಧನಿಕ ಎನ್ನಿಸಿಕೊಳ್ಳಬೇಕು ಎಂಬ ಹಟದಿಂದ ಅಡ್ಡದಾರಿ ಹಿಡಿಯುವವರಿಗೆ ಅದು ತಾತ್ಕಾಲಿಕ ಸುಖವನ್ನಷ್ಟೇ ಕೊಡಬಲ್ಲದು. ಅಪ್ರಮಾಣಿಕತೆ ಕ್ಷಣಿಕ ಲಾಭವನ್ನಷ್ಟೇ ತಂದು ಕೊಡಬಹುದು. ಆದ್ದರಿಂದ ಮೋಸದ ಯೋಚನೆ ನಿಮ್ಮಲ್ಲಿದ್ದರೆ ಅದನ್ನು ದೂರಕ್ಕೆ ತಳ್ಳಿ.

(Chanakya Niti Acharya Chanakya suggests to stay far from bad habits which makes life difficult)

ಇದನ್ನೂ ಓದಿ: Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ 

Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ