ಚಿಕ್ಕಮಗಳೂರು: ದತ್ತಪೀಠದ 2ನೇ ಹಂತದ ಹೋರಾಟಕ್ಕೆ ಸಿದ್ದತೆ – ಸಿಟಿ ರವಿ

| Updated By: Digi Tech Desk

Updated on: Dec 05, 2022 | 1:53 PM

Datta Peetha: ಈ ಬಾರಿಯ ದತ್ತ ಜಯಂತಿಯಿಂದಲೇ ಐ.ಡಿ. ಪೀಠದಲ್ಲಿರುವುದು ದತ್ತಪೀಠ, ನಾಗೇನಹಳ್ಳಿಯಲ್ಲಿ ಇರುವುದು ಬಾಬಬುಡನ್ ದರ್ಗಾ ಎರಡು ಪ್ರತ್ಯೇಕ ಜಾಗದಲ್ಲಿದೆ ಎನ್ನುವ ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಲಾಗುವುದು ಎಂದು ಸಿ.ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರು: ದತ್ತಪೀಠದ 2ನೇ ಹಂತದ ಹೋರಾಟಕ್ಕೆ ಸಿದ್ದತೆ - ಸಿಟಿ ರವಿ
ಸಿ.ಟಿ ರವಿ
Follow us on

ಚಿಕ್ಕಮಗಳೂರು: 45 ವರ್ಷದ ಹೋರಾಟವಾಗಿ ಹಿಂದೂ ಅರ್ಚಕರ ನೇಮಕವಾಗಿದೆ. ಸುಪ್ರೀಂ ಕೋರ್ಟ್ ವರೆಗೂ ಹೋಗಿ ಒಂದು ಹಂತದಲ್ಲಿ ಜಯ ಸಾಧಿಸದ್ದೇವೆ. ಜಾಗದ ವಿವಾದದಲ್ಲಿ 2ನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಲಾಗುತ್ತಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ದತ್ತಪೀಠ ಹಾಗೂ ದರ್ಗಾ ಎರಡೂ ಗ್ರಾಮಗಳೇ ಬೇರೆ, ಅದನ್ನು ಕ್ಲಬ್ ಮಾಡಿದ್ದೇ ಸರಿಯಲ್ಲ. ಈ ಬಾರಿಯ ದತ್ತಜಯಂತಿಯಿಂದಲೇ ಐ.ಡಿ. ಪೀಠದಲ್ಲಿರುವುದು ದತ್ತಪೀಠ, ನಾಗೇನಹಳ್ಳಿಯಲ್ಲಿ ಇರುವುದು ಬಾಬಬುಡನ್ ದರ್ಗಾ ಎರಡು ಪ್ರತ್ಯೇಕ ಜಾಗದಲ್ಲಿದೆ ಎನ್ನುವ ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಲಾಗುವುದು ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್​ಗಿರಿಯ ದತ್ತಪೀಠ (Datta Peetha) ಕ್ಕೆ ರಾಜ್ಯ ಸರ್ಕಾರ ಇಬ್ಬರು ಅರ್ಚಕರನ್ನು (priest) ನೇಮಕ ಮಾಡಿದೆ. ಶೃಂಗೇರಿ ಮೂಲದ ಶ್ರೀಕಾಂತ್, ಚಿಕ್ಕಬಳ್ಳಾಪುರದ ಸಂದೀಪ್ ಇಬ್ಬರು ಅರ್ಚಕರ ನೇಮಿಸಿದೆ. ಅರ್ಚಕರ ನೇಮಕ ಸಂಬಂಧ ರಾಜ್ಯಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿತ್ತು. ಈ ಆಡಳಿತ ಮಂಡಳಿಯಲ್ಲಿ ಓರ್ವ ಮುಸ್ಲಿಂ ಸದಸ್ಯ ಸೇರಿ 8 ಜನರು ಇದ್ದರು. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿತ್ತು.  ಹೀಗಾಗಿ ಈ ಆಡಳಿತ ಮಂಡಳಿ ಇಬ್ಬರು ಅರ್ಚಕರನ್ನು ನೇಮಿಸಿದೆ.

2018 ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹಿಂದೂ ಅರ್ಚಕರ ನೇಮಕ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ‌ ಸಂಭ್ರಮಿಸಿದ್ದಾರೆ. ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ದತ್ತ ಜಯಂತಿ ವಿಚಾರಕ್ಕೆ ಸಂಬಂಧಿಸಿ ವಿವಾದಿತ ಸ್ಥಳದಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ. ಸರ್ಕಾರ ರಚಿಸಿದ ಸಮಿತಿ, ಭಕ್ತರಿಂದ ಪೂಜಾವಿಧಿ ನಡೆಸಲು ದತ್ತ ಪಾದುಕೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಡಿ. 6, 7, 8 ಮೂರು ದಿನಗಳ ಕಾಲ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅಸ್ತು ಎಂದಿದೆ.

ಸರ್ಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಮಾಡಲಾಗಿದ್ದು ಪ್ರತಿದಿನ ಎರಡೂ ಸಮುದಾಯದವರೂ ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ದತ್ತ ಜಯಂತಿಗೆ ಅನುಮತಿ‌ ನೀಡಲು ಮನವಿ ಸಲ್ಲಿಸಲಾಗಿತ್ತು. ಇದೀಗ ಕೋರ್ಟ್​ ಅನುಮತಿ ನೀಡಿದೆ.

ಇದನ್ನೂ ಓದಿ:Datta peeta: ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ; 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಬಿಜೆಪಿ

ಬಾಬಾಬುಡನ್‌ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Mon, 5 December 22