ಚಿಕ್ಕಮಗಳೂರು: ಅರ್ಜಿ ಸಲ್ಲಿಸದೆಯೂ, ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಂಡ ಭೂಗಳ್ಳರು ಬಯಲಿಗೆ ಬಿದ್ದರು!

| Updated By: ಸಾಧು ಶ್ರೀನಾಥ್​

Updated on: Dec 08, 2023 | 10:39 AM

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ಅರ್ಜಿ ಸಲ್ಲಿಸಿ ಅಕ್ರಮವಾಗಿ ಭೂಮಿ ಪಡೆದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಟ್ಟಿಸಿಕ್ತು ಅಂತ ನನಗೂ ಬೇಕು ನಮ್ಮ ಮೂರು ತಲೆಮಾರಿಗೂ ಬೇಕು ಅಂತ ನಕಲಿ ದಾಖಲೆ ಸೃಷ್ಟಿಸಿ ಬೇಕಾಬಿಟ್ಟಿ ದೋಚಿದವರ ಬಣ್ಣ ಬಯಲಾಗುತ್ತಿದೆ. ತನಿಖೆ ಇನ್ನಷ್ಟು ವೇಗ ಪಡೆದರೆ ಇನ್ನಷ್ಟು ಭೂಗಳ್ಳರು ಬಯಲಿಗೆ ಬೀಳುವುದರಲ್ಲಿ ನೋ ಡೌಟ್!

ಚಿಕ್ಕಮಗಳೂರು: ಅರ್ಜಿ ಸಲ್ಲಿಸದೆಯೂ, ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಂಡ ಭೂಗಳ್ಳರು ಬಯಲಿಗೆ ಬಿದ್ದರು!
ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಂಡ ಭೂಗಳ್ಳರು ಬಯಲಿಗೆ ಬಿದ್ದರು!
Follow us on

ರಾಜ್ಯದಲ್ಲೇ ಬಗೆದಷ್ಟೂ ಭಾರೀ ಪ್ರಮಾಣದ ಭೂ ಅಕ್ರಮಕ್ಕೆ (land scam) ಕಾಫಿ ನಾಡು ಚಿಕ್ಕಮಗಳೂರು (Chikkamagaluru) ಸಾಕ್ಷಿಯಾಗುತ್ತಿದೆ. ನನಗೂ ಬೇಕು- ನನ್ನಪ್ಪನಿಗೂ ಬೇಕು ಅಂತ ಅಕ್ರಮವಾಗಿ ಅರ್ಜಿ ಸಲ್ಲಿಸಿ ಅಕ್ರಮವಾಗಿ ಸರ್ಕಾರಿ ಭೂಮಿ ಪಡೆದವರು (government Revenue land) ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ದುರಾಸೆಗೆ ಬಿದ್ದವರ ಭೂಮಿ ಹೇಗೆಲ್ಲಾ ವಾಪಸಾಗುತ್ತಿದೆ ಗೊತ್ತಾ? ರಾಜ್ಯವೇ ಬೆಚ್ಚಿ ಬೆಳಿಸುವಂತೆ ಭೂ ಅಕ್ರಮಕ್ಕೆ ಸಾಕ್ಷಿಯಾಗಿದೆ ಕಾಫಿ ಕಣಿವೆ ಚಿಕ್ಕಮಗಳೂರು. ಒಂದು ಅಲ್ಲ… ಎರಡೂ ಅಲ್ಲ- ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಜಾಲಾಟಕ್ಕೆ ಇಳಿದಾಗ ಸಿಕ್ಕಿದ್ದು ಸಕ್ರಮವನ್ನ ಅಕ್ರಮ ಮಾಡಿ ಮೋಸ ಮಾಡಿದ್ದ ಸ್ಟೋರಿ ಇದೀಗ ಬಟಾಬಯಲಾಗುತ್ತಿದೆ.

ಹೌದು ಅತಿ ದೊಡ್ಡ ಭೂ ಅಕ್ರಮದ ತನಿಖೆಗಿಳಿದ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದ 750 ಎಕರೆ ಜಮೀನನ್ನು ರದ್ದು ಮಾಡಿದ್ದಾರೆ. ಕೇವಲ ಇನ್ನೂ 245 ಪ್ರಕರಣಗಳ ವಿಚಾರಣಗಳ ಪೈಕಿ ಈ ಪರಿಯ ಅಕ್ರಮ ಜಮೀನು ದೊರೆತಿದ್ದು, ನಿಜಕ್ಕೂ ಆಶ್ಚರ್ಯ ಮೂಡಿಸಿದೆ. 2019ರಿಂದ 2021ರವರೆಗೆ ನಡೆದಿರುವ ಕಡತಗಳ ವಿಚಾರಣೆ ನಡೆಸಿದ ಅಧಿಕಾರಿಗಳು ಈ ಪರಿಯ ಒತ್ತುವರಿ ನೋಡಿ ಬೆಚ್ಚಿಬಿದ್ದಿದ್ದಾರೆ. ಇನ್ನೂ 227 ಕಡತಗಳ ವಿಚಾರಣೆ ಬಾಕಿ ಇದ್ದು, ಇನ್ನೆಷ್ಟು ಅಕ್ರಮ ಬಯಲಾಗುತ್ತೋ ಅನ್ನೋ ಸಂಗತಿಯನ್ನು ರೈತ ಸಂಘಟನೆಗಳು ಆತಂಕ, ಆಶ್ಚರ್ಯ ವ್ಯಕ್ತಪಡಿಸಿದೆ.

ಇನ್ನು ಕಳೆದ ಮೂರ್ನಾಲ್ಕು ನಾಲ್ಕು ತಿಂಗಳಿಂದ 15 ತಹಶೀಲ್ದಾರ್ ತಂಡದಿಂದ ಸುದೀರ್ಘ ತನಿಖೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ಮುಂದೆ ಹಿರಿಯ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯ ಬಳಿ ಸಾವಿರಾರು ಪುಟಗಳ ಮಾಹಿತಿಯನ್ನ ತನಿಖಾ ಅಧಿಕಾರಿಗಳು ಸಲ್ಲಿಸಿದ್ದಾರೆ.

Also Read: ಪ್ರಭಾವಿಗಳಿಗೆ ಸರ್ಕಾರಿ ಜಮೀನು ಪರಭಾರೆ: KAS ಅಧಿಕಾರಿ ಉಮೇಶ್​​ಗೆ ಜಾಮೀನು, ಮತ್ತೊಂದು ಪ್ರಕರಣದಲ್ಲಿ ತಕ್ಷಣವೇ ಮರು ಬಂಧನ!

ಇದೆ ವೇಳೆ ಈ ಪ್ರಮಾಣದ ಭೂ ಕಬಳಿಕೆ ಪ್ರಕರಣವನ್ನು ವಿಶೇಷ ನ್ಯಾಯಾಲಯ ಕೂಡ ಸ್ವಯಂ ಪ್ರೇರಿತವಾಗಿ ವಿಚಾರಣೆಯನ್ನು ಕೈಗೊಂಡಿರುವುದು ವಿಶೇಷ. ಈ ವೇಳೆ ನಮೂನೆ 50, 53, 57ರ ಅಡಿ ಅರ್ಜಿ ಸಲ್ಲಿಸದೆ ಇದ್ದರೂ, ಸರ್ಕಾರಿ ಜಾಗ ಹೇಗೆ ಮಂಜೂರಾಯಿತು? ಅನ್ನೋದು ಸ್ಥಳೀಯ ರೈತರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ