ರಸ್ತೆ ದುರಸ್ಥಿಗೆ ಬೇರೆ ‘ದಾರಿ’ಗಾಣದೆ ನೇರವಾಗಿ ಸಿಎಂ ಬೊಮ್ಮಾಯಿಗೆ ಪತ್ರ, ಮನವಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರು ನೀಡಿದ ಎಚ್ಚರಿಕೆ ಏನು?

| Updated By: ಸಾಧು ಶ್ರೀನಾಥ್​

Updated on: Nov 12, 2021 | 2:51 PM

ನಮ್ಮ ಊರಿಗೆ ರಸ್ತೆ ಬೇಕಿದೆ. ಆದರೆ ಇದಕ್ಕೆ ಶಾಸಕರಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳು, ಜಿಪಂ-ತಾಪಂ ಸದಸ್ಯರು ಯಾರೂ ಸ್ಪಂದಿಸುತ್ತಿಲ್ಲ. ಜನರು, ಮಕ್ಕಳ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ. ನೀವಾದರೂ ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಡಿಕೊಂಡಿದ್ದಾರೆ.

ರಸ್ತೆ ದುರಸ್ಥಿಗೆ ಬೇರೆ ‘ದಾರಿ’ಗಾಣದೆ ನೇರವಾಗಿ ಸಿಎಂ ಬೊಮ್ಮಾಯಿಗೆ ಪತ್ರ, ಮನವಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರು ನೀಡಿದ ಎಚ್ಚರಿಕೆ ಏನು?
ರಸ್ತೆ ದುರಸ್ಥಿಗೆ ಬೇರೆ ‘ದಾರಿ’ಗಾಣದೆ ನೇರವಾಗಿ ಸಿಎಂ ಬೊಮ್ಮಾಯಿಗೆ ಪತ್ರ, ಮನವಿಗೆ ಸ್ಪಂದಿಸದಿದ್ದರೆ ಗ್ರಾಮಸ್ಥರು ನೀಡಿದ ಎಚ್ಚರಿಕೆ ಏನು?
Follow us on

ಚಿಕ್ಕಮಗಳೂರು: ರಸ್ತೆ ಸೇರಿದಂತೆ ಮೂಲ ಸೌಕರ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ಥಳೀಯ ಆಡಳಿತದ ಮುಂದೆ ಬೇಡಿಕೆಯಿಟ್ಟರೆ ಅದಕ್ಕೆ ಕಿಮ್ಮತ್ತಿನ ಬೆಲೆಯಿಲ್ಲವೆಂದು ಅರಿತ ರಾಜ್ಯ ದ ಜನ ನೇರವಾಗಿ ಜಿಲ್ಲಾಧಿಕಾರಿಗಳು ತಪ್ಪಿದರೆ, ಮುಖ್ಯಮಂತ್ರಿಗೇ ನೇರ ಅಹವಾಲು ಸಲ್ಲಿಸಲು ಮುಂದಾಗುತ್ತಿದ್ದಾರೆ. ಅಷ್ಟರಮಟ್ಟಿಗೆ ಸ್ಥಳೀಯ ಆಡಳಿತಗಳು ಜನರ ಸಮಸ್ಯೆಗೆ ಸ್ಪಂದಿಸದೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿವೆ. ಜನ ಬೇರೆ ‘ದಾರಿ’ಗಾಣದೆ ನೇರವಾಗಿ ಮುಖ್ಯಮಂತ್ರಿಯ ಮೊರೆಹೋಗಿದ್ದಾರೆ. ತಾಜಾ ಪ್ರಕರಣದಲ್ಲಿ ಊರಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಅನಗೋಡು ಗ್ರಾಮಸ್ಥರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಇದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅನಗೋಡು ಗ್ರಾಮಸ್ಥರ ದುಃಸ್ಥಿತಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಲಾಗಿತ್ತು. ಆದರೆ ಯಾರೂ ರಸ್ತೆ ದುರಸ್ತಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಜ್ಯದ ಮುಖ್ಯಮಂತ್ರಿಗೆ ಗ್ರಾಮಸ್ಥರು ಅಧಿಕೃತವಾಗಿ ಪತ್ರ ರವಾನಿಸಿದ್ದಾರೆ. ನೀವಾದ್ರೂ ಸಮಸ್ಯೆ ಬಗೆಹರಿಸಿ ದೊರೆಯೇ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಕಳಸ ತಾಲೂಕಿನ ಅನಗೋಡು ಗ್ರಾಮಸ್ಥರ ಪತ್ರದಲ್ಲಿನ ಅಹವಾಲು, ಅಳಲು ಹೀಗಿದೆ:
ನಮ್ಮ ಊರಿಗೆ ರಸ್ತೆ ಬೇಕಿದೆ. ಆದರೆ ಇದಕ್ಕೆ ಶಾಸಕರಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳು, ಜಿಪಂ-ತಾಪಂ ಸದಸ್ಯರು ಯಾರೂ ಸ್ಪಂದಿಸುತ್ತಿಲ್ಲ. ಜನರು, ಮಕ್ಕಳ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ. ರಸ್ತೆಗೆ ಜಲ್ಲಿ ಹಾಕಿ ಹೋದವರು ಮತ್ತೆ ಈ ಕಡೆ ಬಂದಿಲ್ಲ. ವಾಹನ ಓಡಾಡುವಂತಿಲ್ಲ, ಕುಡಿಯೋಕೆ ನೀರಿಲ್ಲ. ಹತ್ತಾರು ಸಮಸ್ಯೆಗಳಿವೆ ನಮ್ಮ ಊರಲ್ಲಿ. ಆದರೆ ನಮ್ಮ ಕಷ್ಟಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ನೀವಾದರೂ ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ.. ಮುಂದಿನ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಅನಗೋಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:

ಕೆಸರು ಗದ್ದೆಯಂತಿದ್ದ ರಸ್ತೆಯನ್ನ ಪುಟಾಣಿಗಳೇ ದುರಸ್ತಿ ಮಾಡಿದರು! ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಧೀಶರು ಗರಂ

(chikmagalur district anagodu village write letter to cm basavaraj bommai for road constrction)

Published On - 2:45 pm, Fri, 12 November 21