AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರು ಗದ್ದೆಯಂತಿದ್ದ ರಸ್ತೆಯನ್ನ ಪುಟಾಣಿಗಳೇ ದುರಸ್ತಿ ಮಾಡಿದರು! ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಧೀಶರು ಗರಂ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಮುಡಾಯಿ ತೋಟ ಎಂಬಲ್ಲಿ ರಸ್ತೆಗಳು ಕೆಸರು ಮಯವಾಗಿದ್ದು ಪುಟಾಣಿ ಮಕ್ಕಳು ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಸುಳ್ಯ ನ್ಯಾಯಾಲಯದ ನ್ಯಾಯಾಧೀಶರು ಗರಂ ಆಗಿದ್ದಾರೆ. ಮಕ್ಕಳ ಪೋಷಕರು, ಬೆಳ್ಳಾರೆ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಕೆಸರು ಗದ್ದೆಯಂತಿದ್ದ ರಸ್ತೆಯನ್ನ ಪುಟಾಣಿಗಳೇ ದುರಸ್ತಿ ಮಾಡಿದರು! ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಧೀಶರು ಗರಂ
ಕೆಸರು ಗದ್ದೆಯಂತಿದ್ದ ರಸ್ತೆಯನ್ನ ಪುಟಾಣಿಗಳೇ ದುರಸ್ತಿ ಮಾಡಿದರು! ವೈರಲ್ ಆಯ್ತು ಫೋಟೋ: ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಧೀಶರು ಗರಂ
TV9 Web
| Edited By: ಸಾಧು ಶ್ರೀನಾಥ್​|

Updated on:Oct 26, 2021 | 11:37 AM

Share

ಮಂಗಳೂರು: ಗುಂಡಿಗಳಿಂದ ತುಂಬಿ ತುಳುಕುವ ರಸ್ತೆಗಳ ಶೋಚನೀಯ ಪರಿಸ್ಥಿತಿ ಬಗ್ಗೆ ನಿನ್ನೆಯಷ್ಟೇ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿತ್ತು. ನೀವು ಸಾಲ ಮಾಡಿ ಅಥವಾ ಕಳ್ಳತನ‌ನಾದ್ರೂ ಮಾಡಿ. ಆದ್ರೆ ಮೊದಲು ಮೂಲ ಸೌಕರ್ಯ ಕಲ್ಪಿಸಿ ಎಂದು ಸರ್ಕಾರದ ಆದ್ಯ ಕರ್ತವ್ಯವನ್ನು ನೆನಪಿಸಿತ್ತು. ಈ ಮಧ್ಯೆ ಕರಾವಳಿ ಜಿಲ್ಲೆಯಲ್ಲೂ ರಸ್ತೆಗಳು ಸಮುದ್ರಗಳಂತೆ ಭಾಸವಾಗುತ್ತಿರುವ ಬಗ್ಗೆ ಕೋರ್ಟ್ ನ್ಯಾಯಾಧೀಶರು ಗರಂ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಮುಡಾಯಿ ತೋಟ ಎಂಬಲ್ಲಿ ರಸ್ತೆಗಳು ಕೆಸರು ಮಯವಾಗಿದ್ದು ಪುಟಾಣಿ ಮಕ್ಕಳು ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಹಾರೆ ಹಿಡಿದು ಕೆಸರುಮಯ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸುಳ್ಯ ನ್ಯಾಯಾಲಯದ ನ್ಯಾಯಾಧೀಶರು ಗರಂ ಆಗಿದ್ದಾರೆ. ಮಕ್ಕಳ ಪೋಷಕರು, ಬೆಳ್ಳಾರೆ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯಾಯಾಧೀಶ ಸೋಮಶೇಖರ್, ಮಕ್ಕಳ ಪೋಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ. ಬೆಳ್ಳಾರೆ ಪಂಚಾಯಿತಿಗೂ ತೆರಳಿ ಪಂಚಾಯತ್ ಅಧ್ಯಕ್ಷ ಮತ್ತು ಪಿಡಿಓಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ರಸ್ತೆ ದುರಸ್ತಿ ಮಾಡದ ಪಂಚಾಯಿತಿ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಪೋಷಕರ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದಾರೆ. ಫೋಟೋ ವೈರಲ್ ಮಾಡಿದವರ ವಿರುದ್ಧವೂ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಕೊನೆಗೆ ಪಂಚಾಯಿತಿ ಅಧಿಕಾರಿಗಳ ಮನವಿ ಹಿನ್ನೆಲೆ ತಕ್ಷಣ ರಸ್ತೆ ದುರಸ್ತಿಗೆ ಸೂಚಿಸಿದ್ದು ತಕ್ಷಣ ರಸ್ತೆಯ ಕೆಸರು ತೆಗೆದು ಫೋಟೋ ಸಹಿತ ವರದಿ ಸಲ್ಲಿಸಲು ಜಡ್ಜ್ ಸೂಚಿಸಿದ್ದಾರೆ. ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದವರ ಮತ್ತು ಫೋಟೋ ತೆಗೆದು ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಪ್ರಜ್ವಲ್​ ದೇವರಾಜ್​-ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​

Published On - 11:28 am, Tue, 26 October 21

Follow Us
TV9 Web
TV9 Web

TV9 Kannada

Read More
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!