AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ, ಉತ್ತರ ಕರ್ನಾಟಕ ಜನತೆಗೆ ಸಿಹಿ ಸುದ್ದಿ: ಪ್ರತಿನಿತ್ಯ ವಿಮಾನ ಸೇವೆ, ಇಲ್ಲಿದೆ ವೇಳಾಪಟ್ಟಿ

ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈಡೇರಿಸಿದ್ದಾರೆ. ದೆಹಲಿ- ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆ ಆರಂಭವಾಗಲಿದೆ. ಹಾಗಾದ್ರೆ, ಯಾವಾಗಿನಿಂದ ವಿಮಾನ ಸಂಚಾರ ಆರಂಭ ಎನ್ನುವ ವೇಳಾಪಟ್ಟಿ ಈ ಕೆಳಗಿನಂತಿದೆ.

ಹುಬ್ಬಳ್ಳಿ, ಉತ್ತರ ಕರ್ನಾಟಕ ಜನತೆಗೆ ಸಿಹಿ ಸುದ್ದಿ: ಪ್ರತಿನಿತ್ಯ ವಿಮಾನ ಸೇವೆ, ಇಲ್ಲಿದೆ ವೇಳಾಪಟ್ಟಿ
Indigo Flight
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 19, 2026 | 10:53 PM

Share

ಮುಖ್ಯಾಂಶಗಳು

  • ದೆಹಲಿ-ಹುಬ್ಬಳ್ಳಿ, ದೆಹಲಿ-ಬೆಳಗಾವಿ ಮಧ್ಯೆ ಇನ್ನು ನಿತ್ಯವೂ ವಿಮಾನ ಸಂಚಾರ
  • ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್
  • ಅಕ್ಟೋಬರ್‌ 1ರಿಂದಲೇ ಈ ಮಹಾ ನಗರಗಳ ಮಧ್ಯೆ ಎರೆಡು ವಿಮಾನಗಳ ಸಂಚಾರ ಶುರು

ಹುಬ್ಬಳ್ಳಿ, (ಆಗಸ್ಟ್​ 19): ಹುಬ್ಬಳ್ಳಿ-ಧಾರವಾಡ (Hubballi-Dharwad), ಬೆಳಗಾವಿ (Belagavi) ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್‌ಲೈನ್ಸ್ (Indigo Airlines) ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ.ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್ ಅಕ್ಟೋಬರ್‌ 1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದೆ.

ಈ ಮಹಾನಗರಗಳ ‎‎ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ (ಪ್ರತಿ ದಿನ) ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು. ಸಚಿವರ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಇಂಡಿಗೋ ಸಂಸ್ಥೆ ಅಕ್ಟೋಬರ್ 1ರಿಂದಲೇ ಪ್ರತಿದಿನ ದೆಹಲಿ–ಹುಬ್ಬಳ್ಳಿ ಹಾಗೂ ದೆಹಲಿ–ಬೆಳಗಾವಿ ಮಧ್ಯೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಪಿಂಚಣಿದಾರರಿಗೆ ವರಮಹಾಲಕ್ಷ್ಮಿ ಹಬ್ಬದ ಬಂಪರ್ ಗಿಫ್ಟ್: ವಾರ್ಷಿಕ ಆದಾಯ ಮಿತಿ ಹೆಚ್ಚಿಸಿದ ಸರ್ಕಾರ

‎ವಿಮಾನ ಸೇವೆ ವೇಳಾಪಟ್ಟಿ

  • ವಿಮಾನ ಸಂಖ್ಯೆ: 6E758ರ ವಿಮಾನ ನಿತ್ಯವೂ ಸಂಜೆ 4:30ಕ್ಕೆ ದೆಹಲಿಯಿಂದ ಹೊರಟು ಸಂಜೆ 6:55ಕ್ಕೆ ಹುಬ್ಬಳ್ಳಿ ತಲುಪಲಿದೆ.
  • ವಿಮಾನ ಸಂಖ್ಯೆ: 6E2115ರ ವಿಮಾನ ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.
  • ಅಂತೆಯೇ ವಿಮಾನ ಸಂಖ್ಯೆ 6E2511ರ ವಿಮಾನ ಬೆಳಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದೆ. ‎
  • Flight No: 6E2512‎ರ ವಿಮಾನ ಬೆಳಗ್ಗೆ 9:10ಕ್ಕೆ ಬೆಳಗಾವಿಯಿಂದ ಹೊರಟು 11:40ಕ್ಕೆ ದೆಹಲಿ ತಲುಪಲಿದೆ. ‎ಈ ಎರಡೂ ವಿಮಾನಗಳು ಅಕ್ಟೋಬರ್ 1ರಿಂದ ಪ್ರತಿದಿನ ಸಂಚಾರ ಆರಂಭಿಸಲಿವೆ.

ಉತ್ತರ ಕರ್ನಾಟಕ ಜನತೆಗೆ ಅನುಕೂಲ ಎಂದ ಜೋಶಿ

ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದು, ಪ್ರತಿ ದಿನವೂ ವಿಮಾನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರಗಳಲ್ಲಿ ವ್ಯಾಪಾರ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ‎ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಸಂಪರ್ಕ ವ್ಯವಸ್ಥೆಯ ಬಲವರ್ಧನೆಗೆ ನಮ್ಮ ಪ್ರಯತ್ನ ನಿರಂತರವಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಆಕಾಂಕ್ಷಿಗಳ ಪರದಾಟ
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜ್​ಕುಮಾರ್​ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ