AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಹಾರ್’ ಟ್ರೇಲರ್: ಉಗ್ರ ಅಜ್ಮಲ್ ಕಸಬ್ ವಿಚಾರಣೆಯ ಪೂರ್ತಿ ವಿವರ ತೆರೆದಿಡುವ ಸಿನಿಮಾ

ಟ್ರೇಲರ್ ಬಿಡುಗಡೆ ಬಳಿಕ ‘ಪ್ರಹಾರ್’ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ರಾಜ್​ಕುಮಾರ್ ರಾವ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪಾಕ್ ಉಗ್ರ ಅಜ್ಮಲ್ ಕಸಬ್ ಸೆರೆಸಿಕ್ಕ ಬಳಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವಿವರಗಳು ಈ ಸಿನಿಮಾದಲ್ಲಿ ಇರಲಿವೆ.

‘ಪ್ರಹಾರ್’ ಟ್ರೇಲರ್: ಉಗ್ರ ಅಜ್ಮಲ್ ಕಸಬ್ ವಿಚಾರಣೆಯ ಪೂರ್ತಿ ವಿವರ ತೆರೆದಿಡುವ ಸಿನಿಮಾ
Lalit PrabhakarImage Credit source: Maddock Films
ಮದನ್​ ಕುಮಾರ್​
|

Updated on: Sep 30, 2026 | 4:49 PM

Share

ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್‌ಕುಮಾರ್ ರಾವ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಪ್ರಹಾರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಉಜ್ವಲ್ ನಿಕಮ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ 26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರ ಅಜ್ಮಲ್ ಕಸಬ್ ವಿರುದ್ಧ ನಡೆದ ಕಾನೂನು ಹೋರಾಟ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ವೃತ್ತಿಜೀವನದ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ಟ್ರೇಲರ್ ಆರಂಭದಲ್ಲೇ ಉಜ್ವಲ್ ನಿಕಮ್ ಪಾತ್ರದಲ್ಲಿರುವ ರಾಜ್‌ಕುಮಾರ್ ರಾವ್ ಅವರು ಮುಂಬೈ ದಾಳಿಯ ರಾತ್ರಿ ಏನು ನಡೆಯಿತು ಎಂಬುದರ ಕುರಿತು ಬಾಲಕಿಯೊಬ್ಬಳನ್ನು ಪ್ರಶ್ನಿಸುವ ಮೂಲಕ ಕಥೆಯ ಗಂಭೀರತೆಯನ್ನು ಪರಿಚಯಿಸುತ್ತಾರೆ. ಕೋರ್ಟ್ ಹಾಲ್‌ನಲ್ಲಿ ನಡೆಯುವ ಈ ಕಾನೂನು ಸಮರವು ಅತ್ಯಂತ ರೋಚಕವಾಗಿದ್ದು, ಉಗ್ರ ಕಸಬ್‌ಗೆ ತಕ್ಕ ಶಿಕ್ಷೆ ಕೊಡಿಸಲು ವಕೀಲರು ನಡೆಸುವ ಹೋರಾಟದ ಝಲಕ್‌ ಟ್ರೇಲರ್‌ನಲ್ಲಿದೆ.

ರಾಜ್‌ಕುಮಾರ್ ರಾವ್ ಅವರು ಉಜ್ವಲ್ ನಿಕಮ್ ಪಾತ್ರದಲ್ಲಿ ನಟಿಸಿದ್ದು, ಅವರ ಗೆಟಪ್, ಮರಾಠಿ ಭಾಷೆಯ ಉಚ್ಛಾರಣೆ ಹಾಗೂ ಮೈಕಟ್ಟು ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಉಜ್ವಲ್ ನಿಕಮ್ ಅವರ ಪತ್ನಿ ಜ್ಯೋತಿ ನಿಕಮ್ ಪಾತ್ರದಲ್ಲಿ ವಮಿಕಾ ಗಬ್ಬಿ ನಟಿಸಿದ್ದು, ಕೋರ್ಟ್‌ನ ಹೊರಗಿನ ಕೌಟುಂಬಿಕ ಹಾಗೂ ಒತ್ತಡದ ಬದುಕಿನ ಎಳೆಗಳನ್ನು ತೋರಿಸಲಿದ್ದಾರೆ.

‘ಪ್ರಹಾರ್’ ಸಿನಿಮಾದ ಟ್ರೇಲರ್:

ಇಸ್ಲಾಮಾಬಾದ್‌ನಿಂದ ಆಗಮಿಸುವ ನಿಯೋಗದ ಪ್ರಮುಖರಾಗಿ ಜೈದೀಪ್ ಅಹ್ಲಾವತ್ ಕಾಣಿಸಿಕೊಂಡಿದ್ದಾರೆ. ಎದುರಾಳಿ ಪಾಳಯದ ವಕೀಲರಾಗಿ ಸಿಕಂದರ್ ಖೇರ್ ಗಮನ ಸೆಳೆದಿದ್ದಾರೆ. ಮರಾಠಿ ನಟ ಲಲಿತ್ ಪ್ರಭಾಕರ್ ಅವರು ಅಜ್ಮಲ್ ಕಸಬ್ ಪಾತ್ರವನ್ನು ಮಾಡಿದ್ದಾರೆ. ‘ಪ್ರಹಾರ್’ ಸಿನಿಮಾ ಹೇಗಿರಲಿದೆ ಎಂಬುದರ ಸುಳಿವು ಈ ಟ್ರೇಲರ್ ಮೂಲಕ ಸಿಕ್ಕಿದೆ. ಈ ಚಿತ್ರವು ಅಕ್ಟೋಬರ್ 16ರಂದು ಬಿಡುಗಡೆ ಆಗಲಿದೆ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ

ಟ್ರೇಲರ್‌ನ ಅಂತ್ಯದಲ್ಲಿ ಉಗ್ರ ಅಜ್ಮಲ್ ಕಸಬ್ ಕಟಕಟೆಯಲ್ಲಿ ನಿಂತು ನೀಡುವ ಹೇಳಿಕೆಯು ಅಚ್ಚರಿ ಮೂಡಿಸುತ್ತದೆ. ತಾನು ಯಾವುದೇ ಭಯೋತ್ಪಾದಕನಲ್ಲ, ಮುಂಬೈ ನಗರವನ್ನು ಸುತ್ತಲು ಬಂದ ಪ್ರವಾಸಿಗನಷ್ಟೇ ಎಂದು ಕಸಾಬ್ ವಾದಿಸುತ್ತಾನೆ. ಅಲ್ಲದೆ, ತನನ್ನು ಚಿತ್ರಹಿಂಸೆ ನೀಡಿ ಉಗ್ರನಂತೆ ಬಿಂಬಿಸಲಾಗಿದೆ ಎಂಬ ಆಘಾತಕಾರಿ ಸುಳ್ಳು ಹೇಳಿಕೆಯನ್ನು ನೀಡುವುದು ಟ್ರೇಲರ್‌ನಲ್ಲಿ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ