ಮದ್ಯಸೇವಿಸಿ ಆಪರೇಷನ್ ಮಾಡಲು ಬಂದ ಡಾಕ್ಟರ್, ಶಸ್ತ್ರಚಿಕಿತ್ಸೆ ಸಿದ್ಧತೆ ,ಮಾಡಿಕೊಳ್ಳುವ ವೇಳೆ ಕುಸಿದು ಬಿದ್ದ

|

Updated on: Jun 01, 2023 | 10:25 AM

ಆಪರೇಷನ್ ಮಾಡಲು ಬಂದ ವೈದ್ಯ, ಮದ್ಯಸೇವಿಸಿದ ಆರೋಪ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ(ಮೇ.31) ಕೇಳಿಬಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಫುಲ್ ಟೈಟಾಗಿ ವೈದ್ಯ ಬಾಲಕೃಷ್ಣ ಎಂಬುವವರು ಕುಸಿದು ಬಿದ್ದಿದ್ದಾರೆ.

ಚಿಕ್ಕಮಗಳೂರು: ಆಪರೇಷನ್ ಮಾಡಲು ಬಂದ ವೈದ್ಯ, ಮದ್ಯಸೇವಿಸಿದ ಆರೋಪ ಕಳಸ(kalasa)ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ(ಮೇ.31) ಕೇಳಿಬಂದಿದೆ. ಶಸ್ತ್ರಚಿಕಿತ್ಸೆಯ ವೇಳೆ ಫುಲ್ ಟೈಟಾಗಿ ವೈದ್ಯ(Docter) ಬಾಲಕೃಷ್ಣ ಎಂಬುವವರು ಕುಸಿದು ಬಿದ್ದಿದ್ದಾರೆ. ಈ ವೇಳೆ ಸಂತಾನ‌ಹರಣ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ, ಅನಸ್ತೇಷಿಯಾ ಇಂಜೆಕ್ಷನ್ ಪಡೆದಿದ್ದ 9‌ ಮಹಿಳೆಯರ ಪರದಾಟ ಹೇಳತೀರದು. ಇನ್ನು ಈ ಕುರಿತು ರೋಗಿಗಳ ಸಂಬಂಧಿಕರಿಂದ ಆಸ್ಪತ್ರೆಯಲ್ಲೇ ವೈದ್ಯನಿಂದ ಮಧ್ಯಪಾನ ಮಾಡಿರುವ ಆರೋಪ ಕೇಳಿಬಂದಿದೆ.

ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಅಸ್ವಸ್ಥರಾಗಿದ್ದ ವೈದ್ಯ ಬಾಲಕೃಷ್ಣ

ಶಸ್ತ್ರ ಚಿಕಿತ್ಸೆಗೆ‌ ಎಲ್ಲಾ ಸಿದ್ದತೆ ಮಾಡಿಕೊಳ್ಳುವ ವೇಳೆ ಆಪರೇಷನ್ ಥಿಯೇಟರ್​ನಲ್ಲಿ ವೈದ್ಯ ಬಾಲಕೃಷ್ಣ ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ವೈದ್ಯನನ್ನ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇತ ಬೆಳಗ್ಗೆ 8 ಗಂಟೆಗೆ ಅನಸ್ತೇಷಿಯಾ ನೀಡಿ ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಿಲ್ಲ. ಹೋಗಿ ನೋಡಿದಾಗ ಬೆಳಗ್ಗೆಯಿಂದ ಆಪರೇಷನ್ ಥಿಯೇಟರ್​ನಲ್ಲೆ ವೈದ್ಯ ನಿದ್ರೆ ಮಾಡಿದ್ದಾನೆ. ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಅನಸ್ತೇಷಿಯಾ ಪಡೆದ ಮಹಿಳೆಯರ ಪರದಾಡುತ್ತಿದ್ದರು. ಬಳಿಕ ವೈದ್ಯ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮಕ್ಕೆ‌ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Udupi News: ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಸೌಕರ್ಯಗಳಿಲ್ಲದೆ ಜನ ಕಂಗಾಲು; ಆಕ್ರೋಶಗೊಂಡ ರೋಗಿಗಳಿಂದ ಆಸ್ಪತ್ರೆಯ ಮುಂದೆ ಪ್ರತಿಭಟನೆ

ಸರ್ಕಾರಿ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ;  ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದಿಷ್ಟು

ಕಳಸ ತಾಲೂಕು ಸರ್ಕಾರಿ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಕೇಳಿಬಂದಿದ್ದು, ಇದೀಗ  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್ ಅವರು ಮಾತನಾಡಿ ‘ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Published On - 10:18 am, Thu, 1 June 23

Follow us on