ಚಿಕ್ಕಮಗಳೂರು, ಜ. 23: ರಾಮ ತಾರಕ ಹೋಮ ನಡೆಸಲು ಜಿಲ್ಲಾಡಳಿತ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿ ಡಿಸಿ ಕಚೇರಿ ಬಳಿ ಹೋಮ ಮಾಡಿ, ಮುತ್ತಿಗೆ ಹಾಕಿದ್ದ ಹಿಂದೂ ಸಂಘಟನೆ ಕಾರ್ಯಕರ್ತರ (Hindu Organisation Activists) ಮೇಲೆ FIR ದಾಖಲಾಗಿದೆ. ಚಿಕ್ಕಮಗಳೂರು (Chikmagalur) ಎಸಿ ದಲ್ಜಿತ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಐಪಿಸಿ ಕಲಂ 353 ಹಾಗೂ 341 ಅಡಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಐದಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು ದಾಖಲಾದ ಹಿನ್ನೆಲೆ ಬಂಧನಕ್ಕೆ ಬಲೆ ಬೀಸಿದ್ದು ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ.
ನಿನ್ನೆ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ಇನಾಂ ದತ್ತಾತ್ರೇಯ ಪೀಠದ ಹೋಮ ಮಂಟಪದಲ್ಲಿ ರಾಮ ತಾರಕ ಹೋಮ ಹವನ ಮಾಡಲು ಹಿಂದೂ ಸಂಘಟನೆಗಳು ಮುಂದಾಗಿದ್ದವು. ಆದರೆ ಜಿಲ್ಲಾಡಳಿತ ಇದಕ್ಕೆ ಬ್ರೇಕ್ ಹಾಕಿತ್ತು. ಇದರಿಂದ ಸಿಟ್ಟಿಗೆದ್ದ ಹಿಂದೂ ಸಂಘಟನೆ ಕಾರ್ಯಕರ್ತರು ಡಿಸಿ ಕಚೇರಿ ಮುಂದೆಯೇ ಕರ್ಪೂರ ಹಚ್ಚಿ, ಶ್ರೀರಾಮನಿಗೆ ಹೋಮ ಹವನ ಮಾಡಿದ್ದರು.
ಇದನ್ನೂ ಓದಿ: ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಜಿಲ್ಲಾಡಳಿತ ನಿರ್ಬಂಧ: ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರ ಪ್ರತಿಭಟನೆ
ದತ್ತಪೀಠದಲ್ಲಿ ಹೋಮವನಕ್ಕೆ ಜಿಲ್ಲಾಡಳಿತ ನಿರಾಕರಣೆ ಮಾಡಿದ್ದೆ ತಡ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿ ಡಿಸಿ ಕಚೇರಿ ಮುಂದೆ ಹೋಮ ಹವನ ಮಾಡಿ ರಾಮ ನಾಮ ಜಪ ಮಾಡಿದ್ದರು. ಅಷ್ಟೇ ಅಲ್ಲದೆ ಹೋಮಕುಂಡವನ್ನು ತಂದು ಅವನ ಮಾಡಲು ಮುಂದಾದಾಗ ಪೊಲೀಸರು ತಡೆದ್ರು. ಆದ್ರೂ ಪಟ್ಟು ಬಿಡದ ಮುಖಂಡರು ಡಿಸಿ ಕಚೇರಿಯ ಮುಂದೆ ಗ್ರಂತಿಕೆಗಳನ್ನು ತಂದು ಶ್ರೀ ರಾಮನ ಭಾವಚಿತ್ರದ ಮುಂದೆಯೇ ಹೋಮ ಅವನ ಮಾಡಿದ್ರು.
ಪೊಲೀಸರ ಮಾತಿನ ಚಕಮಕಿ, ಡಿಸಿ ಕಚೇರಿಗೆ ನುಗ್ಗಿಲು ಯತ್ನ, ತಳ್ಳಾಟ ನೂಕಾಟಗಳೆಲ್ಲವೂ ನಡೆದವು. ಈ ವೇಳೆ ಓರ್ವ ಕಾರ್ಯಕರ್ತ ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಮಲಗಿ ಪೊಲೀಸರ ವಿರುದ್ಧ ಕೆಂಡ ಕಾರಿದ್ದ. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದು ಮುಸ್ಲಿಂ ಸರ್ಕಾರ ಅಂತ ಮುಖಂಡರು ಘೋಷಣೆ ಕೂಗಿದ್ದರು. ಬಳಿಕ ವಾತಾವರಣ ತಿಳಿಗೊಳಿಸಲು ಪೊಲೀಸರು 25ಕ್ಕೂ ಹೆಚ್ಚು ಹಿಂದೂ ಮುಖಂಡರು ಕಾರ್ಯಕರ್ತರನ್ನ ಬಂಧಿಸಿ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದ್ದರು. ಈ ಘಟನೆ ಸಂಬಂಧ ಇಂದು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ FIR ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ