AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಹುಲಿ ಅಂಗಾಂಗ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ

ಹುಲಿ ಉಗುರಿನ ಮಾಲೆ ಧರಿಸುತ್ತಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದು ಮಾಡಿತ್ತು. ಬಿಗ್​ಬಾಸ್ ಸ್ಪರ್ಧಿಯೊಬ್ಬರ ಬಂಧನವೂ ಆಗಿತ್ತು. ಬಳಿಕ ಕನ್ನಡದ ನಟರ ಫೋಟೋಗಳು ಹರಿದಾಡಿದವು. ಹೀಗಾಗಿ ಪ್ರಾಣಿಗಳ ಅಂಗಾಂಗಗಳನ್ನು ವಾಪಸ್ ಅರಣ್ಯ ಇಲಾಖೆಗೆ ಒಪ್ಪಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಇದರ ಬೆನ್ನಲ್ಲೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು: ಹುಲಿ ಅಂಗಾಂಗ ಮಾರಾಟಕ್ಕೆ ಯತ್ನ; ಇಬ್ಬರ ಬಂಧನ
ಚಿಕ್ಕಮಗಳೂರಿನಲ್ಲಿ ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: Rakesh Nayak Manchi

Updated on: Jan 24, 2024 | 10:06 AM

ಚಿಕ್ಕಮಗಳೂರು, ಜ.24: ಹುಲಿ ಉಗುರಿನ ಮಾಲೆ ಧರಿಸುತ್ತಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದು ಮಾಡಿತ್ತು. ಬಿಗ್​ಬಾಸ್ ಸ್ಪರ್ಧಿಯೊಬ್ಬರ ಬಂಧನವೂ ಆಗಿತ್ತು. ಬಳಿಕ ಕನ್ನಡದ ನಟರ ಫೋಟೋಗಳು ಹರಿದಾಡಿದವು. ಹೀಗಾಗಿ ಪ್ರಾಣಿಗಳ ಅಂಗಾಂಗಗಳನ್ನು ವಾಪಸ್ ಅರಣ್ಯ ಇಲಾಖೆಗೆ ಒಪ್ಪಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಇದರ ಬೆನ್ನಲ್ಲೇ, ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು ಹೊರ ವಲಯದ ಮತ್ತಾವರ ಬಳಿ ಹುಲಿ ತಲೆ, ನಾಲ್ಕು ಉಗುರು, ಎರಡು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ತಿಳಿದು DFO ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ, ಹುಲಿ ಅಂಗಾಂಗ ಮಾರಾಟ ಮಾಡಲು ಮುಂದಾಗಿದ್ದ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸತೀಶ್, ಚಂದ್ರೇಗೌಡ ಎಂಬವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಡಿಸಿ ಕಚೇರಿ ಬಳಿ ಹೋಮ ಮಾಡಿ, ಮುತ್ತಿಗೆ ಹಾಕಿದ್ದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ FIR

ಮೂಡಿಗೆರೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಹುಲಿ ತಲೆ, ಹುಲಿ ಉರುಗರು, ಹಲ್ಲು, ಬೈಕ್ ಸೇರಿದಂತೆ ನಾಲ್ಕು ಮೊಬೈಲ್​ಗಳನ್ನ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಹುಲಿ ಅಂಗಾಂಗ ಮಾರಾಟ ಮಾಡುವಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ