Chikkamagaluru: ಗಿಫ್ಟ್​​ ಪಾಲಿಟಿಕ್ಸ್; ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ಸೀರೆ ಹಂಚಿಕೆ

| Updated By: ವಿವೇಕ ಬಿರಾದಾರ

Updated on: Feb 04, 2023 | 10:04 AM

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮತದಾರರಿಗೆ ಗಿಫ್ಟ್ ಹಂಚಿದ್ದಾರೆ.

Chikkamagaluru: ಗಿಫ್ಟ್​​ ಪಾಲಿಟಿಕ್ಸ್; ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ಸೀರೆ ಹಂಚಿಕೆ
ಸ್ತ್ರೀ ಶಕ್ತಿ ಸಮಾವೇಶದಲ್ಲಿ ಸೀರೆ ಹಂಚಿಕೆ
Follow us on

ಚಿಕ್ಕಮಗಳೂರು: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮತದಾರರಿಗೆ ಗಿಫ್ಟ್ ಹಂಚಿದ್ದಾರೆ. ಸಮಾವೇಶಕ್ಕೆ ಬಂದಿದ್ದ 4,000ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಗಿಫ್ಟ್​ ನೀಡಿದ್ದಾರೆ. ​ಮಹಿಳಾ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು. ಜೀವರಾಜ್ ಶೃಂಗೇರಿ ಕ್ಷೇತ್ರದ ಪ್ರಮುಖ ಪಟ್ಟಣದಲ್ಲಿ ಮಹಿಳಾ ಸಮಾವೇಶ ಆಯೋಜನೆ ಮಾಡುತ್ತಿದ್ದಾರೆ. ಡಿ ಎನ್ ಜೀವರಾಜ್ ಕಳೆದ 2 ದಿನದ ಹಿಂದೆ ಎನ್ ಆರ್ ಪುರದಲ್ಲಿ ನಡೆದ ಸಮಾವೇಶದಲ್ಲೂ ಸೀರೆ ಹಂಚಿಕೆ ಮಾಡಿದ್ದರು.

ಸಚಿವ ನಾರಾಯಣಗೌಡರಿಂದ ಸ್ಮಾರ್ಟ್ ಟಿವಿ ಹಂಚಿಕೆ

ಮಂಡ್ಯ: ಜಿಲ್ಲೆಯಲ್ಲೂ ಗಿಫ್ಟ್​​ ಪಾಲಿಟಿಕ್ಸ್ ಶುರುವಾಗಿದೆ. ಸಚಿವ ನಾರಾಯಣಗೌಡರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಕೆ.ಆರ್​.ಪೇಟೆ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಕೆ.ಸಿ.ನಾರಾಯಣಗೌಡ ಕೆ.ಆರ್.ಪೇಟೆ ತಾಲೂಕಿನ ಗ್ರಾ.ಪಂ ಸದಸ್ಯರಿಗೆ ಸ್ಮಾರ್ಟ್ ಟಿವಿ ಗಿಫ್ಟ್ ನೀಡಿದ್ದಾರೆ. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ