ಸುವರ್ಣ ಮಂಡ್ಯ ಪುಸ್ತಕ ಬರೆದಿದ್ದು ಯಾರು, ಯಾವಾಗ? ಉರಿಗೌಡ, ನಂಜೇಗೌಡ ಇತಿಹಾಸ ಬಿಚ್ಚಿಟ್ಟ ಸಿಟಿ ರವಿ

|

Updated on: Mar 19, 2023 | 1:49 PM

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಗಾದೆ ಮಾತಿದೆ. 1994ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರಲಿಲ್ಲ ಎಂದು ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.

ಸುವರ್ಣ ಮಂಡ್ಯ ಪುಸ್ತಕ ಬರೆದಿದ್ದು ಯಾರು, ಯಾವಾಗ? ಉರಿಗೌಡ, ನಂಜೇಗೌಡ ಇತಿಹಾಸ  ಬಿಚ್ಚಿಟ್ಟ ಸಿಟಿ ರವಿ
ಸಿಟಿ ರವಿ
Follow us on

ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲ ರಾಜ್ಯಾದ್ಯಂತ ಟಿಪ್ಪು ಕೊಂದವರು ಯಾರೆಂಬ ಚರ್ಚೆ ಮುನ್ನಲೆಗೆ ಬಂದಿದೆ. ಉರಿಗೌಡ ನಂಜೇಗೌಡರೇ ಟಿಪ್ಪುವನ್ನ ಕೊಂದಿದ್ದು ಎಂದು ಬಿಜೆಪಿ ಸಾಲು ಸಾಲು ಸಾಕ್ಷ್ಯ ಬಿಡುಗಡೆ ಮಾಡುತ್ತಿದೆ. ಲಾವಣಿ ಹಾಡಿನಲ್ಲಿ ಪರಂಪರೆ ಪರ ಇರೋ ಗೌಡರು, ಟಿಪ್ಪುವನ್ನ ಖಡ್ಗದಿಂದ ಕೊಂದಿದ್ರು ಅನ್ನೋ ಸಿಡಿಯನ್ನ ರಿಲೀಸ್ ಮಾಡಲಾಗಿತ್ತು. ಈಗ ಮುಂದುಬರೆದ ಭಾಗವಾಗಿ 2006 ರಲ್ಲೇ ಸುವರ್ಣ ಮಂಡ್ಯ ಎಂಬ ಪುಸ್ತಕದಲ್ಲಿ ಉರಿಗೌಡ ಹಾಗೂ ದೊಡ್ಡ ನಂಜೇಗೌಡರ ಹೆಸರು ಉಲ್ಲೇಖವಿರುವದನ್ನ ಬಿಡುಗಡೆ ಮಾಡಲಾಗಿದೆ. ಆದ್ರೆ ಈ ಪುಸ್ತಕದಲ್ಲಿ ಟಿಪ್ಪು ವಿರುದ್ಧ ಸೆಟೆದು ನಿಂತಿದ್ದರು ಎಂಬ ಉಲ್ಲೇಖವಿದ್ದು ಎಲ್ಲೂ ಕೂಡ ಕೊಂದರು ಎಂದು ಪ್ರಸ್ತಾಪಿಸಿಲ್ಲ. ಸದ್ಯ ಈ ಸಂಬಂಧ ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಸುವರ್ಣ ಮಂಡ್ಯ ಪುಸ್ತಕದಲ್ಲಿ ಜವರೇಗೌಡರು ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ಬರೆದಿದ್ದರು ಎಂದಿದ್ದಾರೆ.

ಹೆಚ್​ಡಿ ದೇವೇಗೌಡರ ಕಾಲದಲ್ಲಿ ಸುವರ್ಣ ಮಂಡ್ಯ ಪುಸ್ತಕ ಬರೆಯಲಾಗಿತ್ತು

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬ ಗಾದೆ ಮಾತಿದೆ. 1994ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿ ಇರಲಿಲ್ಲ. ಆಗ ಸುವರ್ಣ ಮಂಡ್ಯ ಎಂಬ ಪುಸ್ತಕವನ್ನು ಜವರೇಗೌಡರು ಬರೆದಿದ್ರು. ಪುಸ್ತಕದಲ್ಲಿ ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಎಂದು ಉಲ್ಲೇಖಿಸಲಾಗಿತ್ತು. ಈ ವಿಚಾರವನ್ನು ಬಿಜೆಪಿಯವರು ಸೃಷ್ಟಿ ಮಾಡಿದ ಕಥೆ ಅಲ್ಲ. ಇದನ್ನ ಇವತ್ತು ಸೃಷ್ಟಿ ಮಾಡಿರೋದಲ್ಲ. ಈ ಕಥೆ ಬಿಜೆಪಿ ಅವರದು, ಸಿಟಿ ರವಿದು ಇತ್ಯಾದಿ ಆರೋಪ ಮಾಡುತ್ತಿದ್ದಾರೆ. ಇದೇ ಜವರೇಗೌಡರು ಭಾರತೀಯ ಜನತಾ ಪಾರ್ಟಿಯವರಲ್ಲ.

ಇದನ್ನೂ ಓದಿ: ಟಿಪ್ಪು ಹತ್ಯೆ, ಉರಿಗೌಡ-ನಂಜೇಗೌಡರ ಬಗ್ಗೆ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖಿಸಿರುವುದೇನು?

ಪುಸ್ತಕದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದರು. ಉರಿಗೌಡ ನಂಜೇಗೌಡ ಸೇರಿದಂತೆ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿ ಬಿದ್ದಿದ್ದರು. ಬಹುಶ ಟಿಪ್ಪುವಿನ ನೀತಿಯು ಇದಕ್ಕೆ ಕಾರಣ ಇರಬಹುದು. ಟಿಪ್ಪುವನ್ನು ಕೊಂದಿದ್ದು ಅಪರಿಚಿತರು ಎಂದು ಹೇಳುತ್ತಾರೆ. ಆದರೆ ನಾವು ಹೇಳುತ್ತೇವೆ ಉರಿಗೌಡ ನಂಜೇಗೌಡರೇ ಟಿಪ್ಪುವನ್ನು ಕೊಂದಿದ್ದು. ಬೇಕಿದ್ದರೆ ಇವರು ಹೇಳಲಿ ಇದರ ಬಗ್ಗೆ ಇನ್ನಷ್ಟು ಸಂಶೋಧನೆ ಆಗಲಿ. ಸುಳ್ಳನ್ನ ಹೇಗೆ ಬಿಂಬಿಸಿದ್ದಾರೆ ಅಂದ್ರೆ ಆಡಳಿತ ಭಾಷೆಯ ಬದಲಿಗೆ ಪಾಸಿ ಭಾಷೆ ತಂದ ಟಿಪ್ಪುವನ್ನ ಕನ್ನಡ ಪ್ರೇಮಿ ಎಂದು ಕರೆಯುತ್ತಾರೆ. ಟಿಪ್ಪುವನ್ನ ಕನ್ನಡ ದ್ರೋಹಿ ಎಂದು ಕರೆಯಬೇಕು. ನಾನು ಚಾಲೆಂಜ್ ಹಾಕ್ತಿನಿ ಮೂಡಲಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನ ಮಸೀದಿಯಾಗಿ ಮಾಡಿದ್ದು ಯಾರು? ಟಿಪ್ಪು ಮತಾಂಧ ಅಲ್ಲದೆ ಇದ್ದಿದ್ರೆ ಆಂಜನೇಯ ದೇವಾಲಯವನ್ನು ಜಾಮಿಯ ಮಸೀದಿಯಾಗಿ ಪರಿವರ್ತನೆ ಮಾಡಿದ್ದು ಏಕೆ? ಆ ಕಿರಾತಕ ಯಾರು? ದ್ರೋಹಿ ಯಾರು? ಧರ್ಮ ದ್ರೋಹಿ ಯಾರು? ಇದರ ಬಗ್ಗೆ ಸಂಶೋಧನೆ ಮಾಡಿ ಹೇಳ ಬೇಕಿಲ್ಲ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಟಿಪ್ಪುವಿನ ಕಾಲಘಟ್ಟದಲ್ಲಿ ಮೂಡಲಬಾಗಿಲ ಆಂಜನೇಯ ಸ್ವಾಮಿ ದೇವಾಲಯವನ್ನು ಮಸೀದಿಯಾಗಿ ಪರಿವರ್ತನೆ ಮಾಡಿದ್ದ. ಹಾಗಿದ್ರೆ ಇತಿಹಾಸದಲ್ಲಿ ಟಿಪ್ಪುವನ್ನ ಮತಾಂಧ ಟಿಪ್ಪು ಎಂದು ಬರೆಯಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಟಿಪ್ಪು ಹಾಗೂ ಹೈದರಾಲಿ ಜೊತೆ ನಿಲ್ಲುವವರು ದ್ರೋಹಿಗಳಾಗುತ್ತಾರೆ

ಇನ್ನು ಇದೇ ವೇಳೆ ಟಿಪ್ಪು ಬೆಂಬಲಕ್ಕೆ ನಿಂತ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ. ಸಾಮಾನ್ಯ ಗೃಹಿಣಿ ಒನಕೆ ಹಿಡಿದು ಹೈದರಾಲಿ ಸೈನಿಕರನ್ನು ಸದೆ ಬಡಿದರು. ಹೈದರಾಲಿ ವಿರುದ್ಧ ಚಿತ್ರದುರ್ಗದ ಮದಕರಿ ನಾಯಕ ಬಂಡಾಯ ಎದ್ದಿದ್ದರು. ನಾವು ಈಗ ಸಮಕಾಲಿನ ಪರಿಸ್ಥಿತಿಯಲ್ಲಿ ಇಲ್ಲ. ಸಮಕಾಲಿನ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹೈದರಾಲಿ ಜೊತೆ ನಿಂತುಕೊಳ್ಳುತ್ತಿದ್ದರು. ನಾವು ನಂಜರಾಜ ಒಡೆಯರ್, ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುತ್ತಿದ್ವಿ. ಟಿಪ್ಪು ಹಾಗೂ ಹೈದರಾಲಿ ಜೊತೆ ನಿಲ್ಲುವವರು ದ್ರೋಹಿಗಳಾಗುತ್ತಾರೆ. ಮಹಾರಾಣಿ ಲಕ್ಷ್ಮಮ್ಮಣ್ಣಿ ಜೊತೆ ನಿಲ್ಲುವವರು ದ್ರೋಹಿ‌ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್

ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಇವರು ಭಿನ್ನವಾಗಿಲ್ಲ

ಮತ್ತೊಂದೆಡೆ ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಮುಸ್ಲಿಂ ಯುವಕ ಆಜಾನ್ ಕೂಗಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಇದರಿಂದಲೇ ಅವರ ಮಾನಸಿಕತೆ ವ್ಯಕ್ತಗೊಳ್ಳುತ್ತೆ. ವಿಧಾನಸೌಧದ ಮೇಲೆ ಕೂಗುತ್ತೇವೆ ಅಂತಾ ಹೇಳಿರುವುದು ದಾಸ್ಯ. ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಇವರು ಭಿನ್ನವಾಗಿಲ್ಲ. ಆ ಮಾನಸಿಕತೆ ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕೆಂದು ಗೊತ್ತಿದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ